Friday, 5 August 2016
Thursday, 4 August 2016
" TEACHER ''
According to my husband one horrible thing living with a teacher[ that is me ] is, she always wants to teach the world about right and wrong! A teacher sees whole world as a bunch of unruly kids! Though at home my instructions are followed with least opposition, I tasted miserable defeat recently.
Few months back myself and 7 other teachers accompanied a group of 150 students aged 13-14 to an excursion to Chennai and Pondichery. It was 3 day trip. On the second day after finishing sight seeing we reached the hotel at 8 PM . We all enjoyed the DJ Show followed by the dinner. Then all the students were ready to go to their shared rooms . As they are chirpy, exited teenagers who wanted to utilise the freedom , I told them to lock themselves in the room and sleep and not to roam around in the corridors .
At 11 pm myself along with another teacher went around to make sure all are safe and sleeping. In the second floor a group of 3 girls and 2 boys caught my attention. The girls in their body revealing clothes made me angry as it was an inappropriate dress in public place according to our Indian standards! I called them and started giving lecture on importance of decent clothing, the consequences, the safety of girls etc.Next on seeing those 2 boys I lost my cool and shouted on them for entering the girls rooms without reason. I also told them on returning to school they have to meet Principal for their indiscipline.
Suddenly I had to stop my lecture when one of the girl interrupted " But Maam, who are you?"
Ah.... I woke up from my ideal world. Yes they are not from our school!! I was shouting at strangers!!
Whole group gave me a look [ shut up and mind your business]
I went back to my room cursing the
Thursday, 7 July 2016
ವಾವ್!..... ಎಂಬೋ ಬಾವಿ.....
ಹೌದು ,ಇದು ಅಂಥಿಂಥ ಬಾವಿಯಲ್ಲ. ನೋಡುಗನ ಬಾಯಲ್ಲಿ ವಾವ್... ಎಂಬ ಉದ್ಗಾರ
ಹುಟ್ಟಿಸುವ ಬಾವಿ. ಜಲಮೂಲಗಳ ಬಗ್ಗೆ ನಮ್ಮ ಹಿರಿಯರಿಗಿದ್ದ ಕಳಕಳಿ, ಭಕ್ತಿಯ ದರ್ಶನ ಮಾಡಿಸುವ ಈ
ಬಾವಿಯೇ “ ಅದಾಲಜ್ ನಿ ವಾವ್”.ಗುಜರಾತಿಭಾಷೆಯಲ್ಲಿ ಬಾವಿಗೆ ವಾವ್ ಎನ್ನುತ್ತಾರೆ. ಅಹಮದಾಬಾದಿನಿಂದ
೧೮ ಕಿ.ಮೀ. ದೂರದ ಅದಾಲಜ್ ಎಂಬಲ್ಲಿರುವ ಈ ಮೆಟ್ಟಿಲುಬಾವಿ ತನ್ನ ಅಪೂರ್ವ ರಚನೆಯಿಂದ
ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
ಈ ಮೆಟ್ಟಿಲುಬಾವಿ ಅಥವಾ ಕೊಳಗಳು ಭಾರತದಲ್ಲೆಡೆ ಕಂಡುಬರುತ್ತಿದ್ದರೂ
ಪಶ್ಚಿಮಭಾರತದಲ್ಲಿ ಇವುಗಳ ಸಂಖ್ಯೆ ಹೆಚ್ಚು. ಕರ್ನಾಟಕದ ಗದುಗಿನ ಎಕ್ಕುಂಡಿಯಲ್ಲಿ ಇಂಥ
ಅದ್ಭುತಬಾವಿಯನ್ನು ಕಾಣಬಹುದು. ಮಳೆನೀರು ಸಂಗ್ರಹ, ವರ್ಷವಿಡೀ ಜನ- ಜಾನುವಾರುಗಳಿಗೆ ನೀರುಣಿಸುವುದು
ಇವುಗಳ ಹಿಂದಿನ ಉದ್ದೇಶ. ಹೆಚ್ಚಾಗಿ ಗಾರೆ,ಇಟ್ಟಿಗೆಗಳಿಂದ ಕಟ್ಟಲ್ಪಡುತ್ತಿದ್ದ
ಇವುಗಳಲ್ಲಿ ಕೆಲವು ರಾಜ ಮಹಾರಾಜರ ಕೃಪೆಯಿಂದ ಕಲ್ಲಿನಲ್ಲಿ ನಿರ್ಮಾಣವಾಗಿ ಸುಂದರ ಶಿಲ್ಪಕಲಾ
ವೈಭವವನ್ನು ಮೆರೆಯಿಸುವ ತಾಣಗಳಾದವು. ಜನರ ದೈನಂದಿನ ಉಪಯೋಗಕ್ಕೆ ನೀರು ಒದಗಿಸುವ ಜೊತೆಗೆ ಉತ್ಸವ,
ಮನರಂಜನೆಗಳ ಕೇಂದ್ರಗಳಾಗಿ ಮೆರೆದವು.ನೀರು ತರುವ ಕೆಲಸ ಹೆಚ್ಚಾಗಿ ಹೆಂಗಸರದ್ದೇ ಆಗಿದ್ದರಿಂದ ಅವರ
ಬಿಡುವಿನ ಹರಟೆಕಟ್ಟೆಗಳಾಗಿ ಧನ್ಯವಾದವು.ಪುರಾತನ ಇತಿಹಾಸದ ಕೇಂದ್ರ ಮೊಹೆಂಜೋದಾರೋವಿನಲ್ಲಿ ಏಳುನೂರಕ್ಕೂ
ಹೆಚ್ಚಿನ ಮೆಟ್ಟಿಲು ಬಾವಿಗಳು ಪತ್ತೆಯಾಗಿವೆಯೆಂದರೆ ಇವುಗಳ ಸಮೃದ್ಧ ಇತಿಹಾಸದ ಕಲ್ಪನೆ
ಮಾಡಿಕೊಳ್ಳಬಹುದು. ಭಾರತದಲ್ಲಿ ಇಂದು ಸುಸ್ಥಿತಿಯಲ್ಲಿರುವ ಇನ್ನೂರಕ್ಕೂ ಅಧಿಕ ಬಾವಿಗಳಿವೆ ಎನ್ನಲಾಗಿದೆ.
೧೪೯೯ರಲ್ಲಿ ಮುಸ್ಲಿಮ್ ದೊರೆ ಮಹಮದ್ ಬೇಗ್ದನಿಂದ ನಿರ್ಮಿಸಲ್ಪಟ್ಟಿತು ಎಂಬ
ಉಲ್ಲೇಖವಿರುವ ಅದಾಲಜ್ ನ ಮೆಟ್ಟಲು ಬಾವಿಯ ಆಳದಲ್ಲಿ ಕಣ್ಣೀರಿನ ಕಥೆಯಿದೆ.೧೪೯೮ರಲ್ಲಿ ವಘೇಲಾ
ವಂಶದ ರಾಣಾವೀರಸಿಂಹ ತನ್ನ ಪ್ರಿಯಪತ್ನಿ ರೂಪಬಾ ಗೋಸ್ಕರ ಇದರ ನಿರ್ಮಾಣವನ್ನು ಆರಂಭಿಸಿದ. ಕೆಲಸ
ಕಾಲುಭಾಗದಷ್ಟು ಮುಗಿದಿತ್ತಷ್ಟೇ . ಪಕ್ಕದ ರಾಜ್ಯದ ದೊರೆ ಮಹಮದ್ ಬೇಗ್ದ ಯುದ್ಧ ಸಾರಿದ .
ಯುದ್ಧದಲ್ಲಿ ವೀರಸಿಂಹ ವೀರಮರಣವನ್ನಪ್ಪಿದ. ವಿಜಯೀ ಮಹಮದ್ ಬೇಗ್ದ ಅಪ್ರತಿಮಸುಂದರಿ ರೂಪಬಾ ಳನ್ನು
ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಲಾರಂಭಿಸಿದ. ರೂಪಬಾ ಒಂದು ಶರತ್ತನ್ನೊಡ್ಡಿ ಮದುವೆಗೆ
ಸಮ್ಮತಿಯಿತ್ತಳು. ತನ್ನ ಪತಿ ಆರಂಭಿಸಿದ ಬಾವಿಯ ನಿರ್ಮಾಣ ಮೊದಲು ಮುಗಿಸಬೇಕು, ನಂತರವೇ ಮದುವೆ.
ಸರಿ.. ಮಹಮದ್ ಬೇಗ್ದನ ಆಜ್ಞೆಯಂತೆ ಅತ್ಯಂತ ತ್ವರಿತಗತಿಯಲ್ಲಿ ಬಾವಿಯ ನಿರ್ಮಾಣ ಮುಗಿಯಿತು. ಆದರೆ
ರಾಣಿ ರೂಪಬಾ ಒಂದು ರಾತ್ರಿ ಆ ಬಾವಿಯಲ್ಲಿ ಹಾರಿ ಪ್ರಾಣತ್ಯಾಗಗೈಯುವುದರೊಂದಿಗೆ ಮಹಮದ್ ಬೇಗ್ದನ
ಕನಸನ್ನು ಭಗ್ನಗೊಳಿಸಿದಳು.ಚರಿತ್ರೆಯಲ್ಲಿ ಅಮರಳಾದಳು. ಮಹಮದ್ ಬೇಗ್ದ ನಿರಾಶನಾದರೂ ಬಾವಿಯನ್ನು
ಸಂರಕ್ಷಿಸುವಂತೆ ವ್ಯವಸ್ಥೆ ಮಾಡುತ್ತಾನೆ. ಈಘಟನೆಗಳು ಬಾವಿಯ ಗೋಡೆಗಳ ಮೇಲೆ ಸುಂದರವಾಗಿ
ಕೆತ್ತಲ್ಪಟ್ಟಿವೆ.ಬಾವಿಯ ನಿರ್ಮಾಣದ ದಾಖಲೆಗಳನ್ನು ಮೊದಲ ಮಹಡಿಯ ಗೋಡೆಯ ಮೇಲೆ ಸಂಸ್ಕೃತದಲ್ಲಿ
ಕೊರೆಯಲಾಗಿದೆ. ಈ ಮೆಟ್ಟಲುಬಾವಿಯ ಶಿಲ್ಪಕಲೆಯನ್ನು ಸೂಕ್ಶ್ಮವಾಗಿ ಗಮನಿಸಿದರೆ ತಳಹಂತದಲ್ಲಿ
ಹಿಂದೂ ದೇವ-ದೇವಿಯರ ಕೆತ್ತನೆಗಳು ಕಂಡುಬಂದರೆ ಮೇಲಿನ ಹಂತಗಳಲ್ಲಿ ಇಸ್ಲಾಮಿಕ್ ಶೈಲಿ ಕಣ್ಣಿಗೆ
ರಾಚುತ್ತದೆ.
ಅದಾಲಜದ ಮೆಟ್ಟಲುಬಾವಿ ಐದುಮಹಡಿ[ ಸುಮಾರು ೧೦೦ ಅಡಿ] ಆಳವಿದೆ.
ಅಷ್ಟಭುಜಾಕೃತಿಯಲ್ಲಿ ಬಲಿಷ್ಠ ಸ್ತಂಭಗಳ ಮೇಲೆ ಕಟ್ಟಲ್ಪಟ್ಟಿದೆ.ಎಲ್ಲ ದಿಕ್ಕುಗಳಿಂದಲೂ ಸಾಕಷ್ಟು
ಗಾಳಿ ಬೆಳಕು ಬರುತ್ತದೆ. ಮೇಲಿನಿಂದ ಬಾವಿಯೊಳಗೆ ಇಳಿಯಲು ಮೂರು ದಿಕ್ಕುಗಳಲ್ಲಿ ಮೆಟ್ಟಲುಗಳಿವೆ.
ಪ್ರತಿ ಮಹಡಿಯಲ್ಲೂ ಜನರು ಓಡಾಡಲು ಸಾಕಷ್ಟು ಸ್ಥಳಾವಕಾಶ ಇದೆ. ಬಾವಿಯ ಗೋಡೆಗಳ ಮೇಲೆ ನೀರು
ತುಂಬುವ ಪಾತ್ರೆಗಳು, ಕಲ್ಪವೃಕ್ಷ, ನವಗ್ರಹಗಳ ಕೆತ್ತನೆ ಮನಸೆಳೆಯುತ್ತದೆ. ಅಲ್ಲದೆ ಮೊಸರು ಕಡೆಯುವುದು,
ಅಲಂಕರಿಸಿಕೊಳ್ಳುವುದು, ರಾಜನ ಆಸ್ಥಾನದಲ್ಲಿ ನೃತ್ಯ-ಸಂಗೀತ ಸಭೆ ಇತ್ಯಾದಿ ಕೆತ್ತನೆಗಳಲ್ಲಿ
ಮಹಿಳೆಯರ ದೈನಂದಿನ ಬದುಕು ಅನಾವರಣಗೊಂಡಿದೆ. ಬಾವಿಯ ಒಳಗಿನ ತಾಪಮಾನ ಆಹ್ಲಾದಕರವಾಗಿದ್ದು ಹೊರಗಿನ
ಉಷ್ಣತೆಗಿಂತ ಐದು ಡಿಗ್ರಿ ಕಡಿಮೆ ಇರುತ್ತದೆ.
ಭವ್ಯವಾದ ಅರಮನೆಯನ್ನು ಪ್ರವೇಶಿಸುತ್ತಿದ್ದೇವೇನೋ ಎಂಬ ಭಾವನೆಯನ್ನು ಉಂಟುಮಾಡುವ
ಅದಾಲಜದ ಬಾವಿ ಸ್ವಚ್ಛವಾಗಿದೆ. ನೀರಿನ ಮೇಲೆ ಲೋಹದ ಬಲೆಯನ್ನು ಹೊದಿಸಲಾಗಿದೆ. ಸುತ್ತಲೂ
ಸುಂದರವಾದ ಉದ್ಯಾನವಿದೆ.ಅಹಮದಾಬಾದ್ ನಿಂದ ರಸ್ತೆ ಸಂಪರ್ಕ ಅತ್ಯುತ್ತಮವಾಗಿದ್ದು ಒಳ್ಳೆಯ ಬಸ್
ವ್ಯವಸ್ಥೆ ಇದೆ. ಬಾಡಿಗೆ ಕಾರುಗಳು, ರಿಕ್ಷಾಗಳೂ ಸಿಗುತ್ತವೆ. ಮುಂದೆ ನೀವೆಲ್ಲಾದರೂ
ಅಹಮದಾಬಾದಿಗೆ ಭೇಟಿ ಇತ್ತರೆ ಅದಾಲಜದ ಮೆಟ್ಟಲು ಬಾವಿಯನ್ನು ನೋಡಲು ಮರೆಯದಿರಿ.
-
Monday, 25 April 2016
Tête-à-tête with an Airhostess
Tête-à-tête with an Airhostess
Since the advent of globalisation, there are
infinite opportunities to be sought. The dilemma of choosing the career path is
surely a daunting task, wrecking the peace of mind of many teenagers for whom
the impending question is ‘What Next?’ Finally
however, most follow the traditional fields, whereas a small section of
youngsters wants to try the new avenues and taste success.
Meet this dynamic young lady Ms. Kavya Hebbar
who belongs to this latter section. Despite choosing a path less travelled, she
is has been able to scale great heights. Daughter of Mr. Narahari Hebbar - Ms.
Rekha Hebbar-who hail from Hosamata near Kukke subrahmanya , Mangalore ,
Karnataka , she continues the legacy of Mangaloreans who are ready to take challenges and convert
them into achievements.
Now employed with Jet Airways- International
Flights, Ms. Kavya shares her thoughts with Veda Athavale .
1. How did the idea of becoming air hostess occur?
Was there any role model? How did your parents react about your decision?
Frankly speaking I didn't have
any dream or goal during my school or college days. I just used to go to
school, come back, go for classes, study and then sleep. That's it. There was no role model for me to become an
air hostess. It just happened one day. It was the last day of my 12th board
exam, a person was distributing Frankfinn leaflets [Frankfinn is an institute
for Air Hostess training]. I randomly filled one, thinking " Just fill the
form, who cares if I get a call or not". And the very next day I received
a call to attend an interview. Out of 10 people who had come, I was only one
who got selected for the course. I went home, discussed it with my parents and
their response was positive. That's when I realised what my dream was! My
parents were a big support for me.
2. Tell us about the structure of airhostess
training? Is being beautiful important for this course?
Qualification required for the training is - HSC /
12th / PUC passed. Age - 18 to 30 years. Training period is 12
months. Fluency in English is appreciated. Regarding physical features, height and
weight should be proportional with a clear skin. It's not just the beauty, but
beauty with brains, confidence, pro- activeness, initiative to learn
things, communication skills etc. are most important. The curriculum includes
lessons on healthy diet, First Aid, customer service etc.
3. What is the job of an air hostess? Please explain
in detail.
Safety and
service is the most important job of an air hostess. Airhostess is responsible for ensuring all passengers
are seated and secure before take-offs and landings, securing the main door on
flights and instructing passengers on all safety procedures and ensuring all
cabin equipment is working before flights. Service duties would include passing
out pillows and reading materials before take-off, getting booster seats for
toddlers or escorting elderly passengers on and off the plane, providing
First-Aid in case of emergency and serve drinks, snacks and meals, collect
trays, trash and glasses before landing.
4. Is this job financially attractive? Are
there any other benefits in this job?
Air hostesses are paid well. But the main attraction
of this job is you get paid to see the world! You can explore every corner of
the world. Travel to places where you have seen those only in movies. Stay in
star hotels and all this is company paid. Other benefits being huge discounts for family
to travel in both domestic and international and also medical insurance for the
family.
5. Can an Airhostess balance family and work life
after marriage? What are the other jobs she can opt if she decides to leave?
To some extent, yes. Family
life gets affected after marriage. But with a supporting spouse one can balance
personal and professional life. One small advice to all the girls and guys out
there, never marry a person of the same profession. For example, if I marry a guy who is a crew, we
won't be able to give enough time to each other and to the family because of
the time clash. Also, there are many job options for an
experienced airhostess. They can become trainers, or seek jobs in management
and hospitality industry.
6. What are the
challenges for an Airhostess? What is your opinion about the recent movie
‘Neeraja’ which depicts life of an Airhostess?
I feel Physical fitness is a
biggest challenge. I myself had faced this
problem while giving interviews. I got through Jet Airways when I tried for the
4th time! They rejected me thrice just
because of my weight and all my confidence had dropped. I lost hopes completely.
But then again my parents and friends imbibed the confidence in me, motivated
me, gave me enough strength to face the challenge again. I joined a gym, went
for swimming classes and lost weight. And that was when I succeeded.
The
other challenge is staying away from the family as we get off once or twice in a week, which
builds psychological pressure. So developing right food habits, keeping
ourselves mentally occupied in a constructive way is very important to overcome
these challenges. Regarding the movie
‘Neeraja’, it’s a must watch for every other person out there who thinks an Airhostess
job is just like a waiter in the hotel! I am sure the concept of an Airhostess
will change after watching the movie.
7. How do you feel
about your Kannadiga roots? Any piece of
advice to youngsters?
Of course I feel happy. Though
I am settled in Mumbai, I am in constant touch with my parental and maternal
homes in villages near Mangalore . My relatives
have always supported my decision of becoming an Airhostess. Yes it's true that
people choose to be engineers or doctors, but I chose to be something unique
from others. Now, when anybody asks, “what does your daughter do?” my parents,
with their heads high, say that- “She is an air hostess with Jet Airways!”
Saturday, 26 March 2016
ಸಹಾಯ ಮತ್ತು 108 ವಿಘ್ನ
ಕಳೆದ ಅಕ್ಟೋಬರ್ ನಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದರ್ಶನ -ಮಧ್ಯಾಹ್ನ ಊಟ ಮುಗಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದೆವು. ಚನ್ನರಾಯಪಟ್ಟಣ ದಾಟಿತ್ತು. ಇದ್ದಕ್ಕಿದ್ದಂತೆ ನಮ್ಮ ಕಾರನ್ನು ಶರವೇಗದಲ್ಲಿ ಹಿಂದಿಕ್ಕಿ ಹೋದ ಬೈಕ್ ನವನೊಬ್ಬ ಮುಂದಿನ ಕಾರಿಗೆ ಅಪ್ಪಳಿಸಿದ. ಎರಡೂ ವಾಹನಗಳೂ ಕೆಲವು ಪಲ್ಟಿ ಹೊಡೆದು ಅಷ್ಟು ದೂರ ಹೋಗಿ ಬಿದ್ದವು. ನಾವು ಕಾರು ನಿಲ್ಲಿಸಿ , ಹತ್ತಿರ ಹೋದೆವು. ಬೈಕ್ ಯುವಕನ ಹೆಲ್ಮೆಟ್ ಒಡೆದು ಸಾಕಷ್ಟು ಏಟಾಗಿತ್ತು. ಕಾರಿನ ಚಾಲಕನಿಗೂ ಗಾಯಗಳಾಗಿದ್ದವು.. ಹೆದ್ದಾರಿಯಲ್ಲಿ ಓಡುತ್ತಿದ್ದ ಹೆಚ್ಚಿನ ವಾಹನಸವಾರರು ಒಮ್ಮೆ ವೇಗ ತಗ್ಗಿಸಿ ಜೀವ ಹೋಯ್ತಾ....?? ಎಂದು ಕೇಳಿ ಇಲ್ಲ... ಎಂದು ತಿಳಿದೊಡನೆ ಮುಂದೆ ಹೋದರು. ಕೆಲವರು ವಾಹನ ನಿಲ್ಲಿಸಿಬಂದು ಬಿದ್ದವರನ್ನು ಕೂರಿಸಿ ನೀರು ಕುಡಿಸಲು ಸಹಾಯಮಾಡಿದರು. ಸರಿ... ನನ್ನ ಸಮಾಜಮುಖಿ ಪ್ರಜ್ಞೆ ಜಾಗ್ರತಗೊಂಡು[ ವ್ಯವಹಾರಚತುರರಾದ ನನ್ನ ಪತಿಯ ಮಾತನ್ನು ಕೇಳದೇ] ೧೦೮ ಕ್ಕೆ ಕರೆ ಮಾಡಿಯೇ ಬಿಟ್ಟೆ. ಆ ಕಡೆಯಿಂದ ಸ್ಥಳದ ವಿಳಾಸ ಕೇಳಿದರು. ಸುತ್ತಲೂ ನೋಡಿದೆ. ಬಟಾಬಯಲು... ಉರುಬಿಸಿಲು... ಅಲ್ಲಿ ದೂರದಲ್ಲಿ ನಾಲ್ಕು ನಾಯಿಗಳು.. ಒಂದು ಎಮ್ಮೆ.. ಮೂರು ಹಸುಗಳನ್ನು ಬಿಟ್ಟರೆ ಏನಿಲ್ಲ... . ಅಲ್ಲೇ ಯಾರನ್ನೋ ಕೇಳಿ ಸುಮಾರಾಗಿ ವಿಳಾಸವನ್ನು, ಕಾರು ಬೈಕಿನ ಸಂಖ್ಯೆಗಳನ್ನು ಹೇಳಿದೆ. ನಾವು ಇಲ್ಲಿರಲಾಗುವುದಿಲ್ಲ. ಬೇಗನೇ ಬೆಂಗಳೂರ ಸೇರಬೇಕು ಎಂದೆ. “ಸರಿ ನೀವು ಹೋಗಿ ನಾವು ಸ್ವಲ್ಪಹೊತ್ತಲ್ಲಿ ಬರುತ್ತೇವೆ” ಎಂದರು. ಅಷ್ಟು ಹೊತ್ತಿಗೆ ಜನರೂ ಸೇರಿದ್ದರು. ನಾವು ಪ್ರಯಾಣ ಮುಂದುವರೆಸಿದೆವು.
ನನ್ನ ಶನಿದಶೆ ಆರಂಭವಾಯಿತು. ೧೦೮ ಸಿಬ್ಬಂದಿಯಿಂದ ಕರೆಗಳು.. ಎಲ್ಲಿ ಮೇಡಂ ... ಕಾರೂ ಇಲ್ಲ...ಆಕ್ಸಿಡೆಂಟೂ ಇಲ್ಲ. ಅಡ್ರೆಸ್ ಸರಿಯಾಗಿ ಹೇಳಿ.... ವಾಪಸ್ ಬನ್ನಿ ಇತ್ಯಾದಿ... ನನ್ನ ಅಸಹಾಯಕತೆಯನ್ನು ವರ್ಣಿಸಿದೆ. ಮುಂದೆ ಒಂದು ವಾರ ದಿನವೂ ಇದೇ ಕತೆ. ನಿಮ್ಮ ಹೆಸರು, ವಿಳಾಸ, ಅಪಘಾತದ ಸಮಯ... ನೀವು ಅಲ್ಲೇ ಇರಬೇಕಿತ್ತು... ಹಾಗೆ.. ಹೀಗೆ. ಕೊನೆಗೊಮ್ಮೆ ತಾಳ್ಮೆಗೆಟ್ಟು ಕಿರುಚಿದ ಮೇಲೆ ಕರೆಗಳು ನಿಂತವು.
ನನ್ನ ಶನಿದಶೆ ಆರಂಭವಾಯಿತು. ೧೦೮ ಸಿಬ್ಬಂದಿಯಿಂದ ಕರೆಗಳು.. ಎಲ್ಲಿ ಮೇಡಂ ... ಕಾರೂ ಇಲ್ಲ...ಆಕ್ಸಿಡೆಂಟೂ ಇಲ್ಲ. ಅಡ್ರೆಸ್ ಸರಿಯಾಗಿ ಹೇಳಿ.... ವಾಪಸ್ ಬನ್ನಿ ಇತ್ಯಾದಿ... ನನ್ನ ಅಸಹಾಯಕತೆಯನ್ನು ವರ್ಣಿಸಿದೆ. ಮುಂದೆ ಒಂದು ವಾರ ದಿನವೂ ಇದೇ ಕತೆ. ನಿಮ್ಮ ಹೆಸರು, ವಿಳಾಸ, ಅಪಘಾತದ ಸಮಯ... ನೀವು ಅಲ್ಲೇ ಇರಬೇಕಿತ್ತು... ಹಾಗೆ.. ಹೀಗೆ. ಕೊನೆಗೊಮ್ಮೆ ತಾಳ್ಮೆಗೆಟ್ಟು ಕಿರುಚಿದ ಮೇಲೆ ಕರೆಗಳು ನಿಂತವು.
ನೀವೂ ಸಹಾಯಹಸ್ತ ಚಾಚುವ ಪೈಕಿಯವರಾದರೆ ನಾನು ಕಲಿತ ಪಾಠಗಳನ್ನು ಒಮ್ಮೆ ಓದಿ.
೧. ಅಪಘಾತದ ಸ್ಥಳ ಪರಿಚಿತವಾಗಿದ್ದಲ್ಲಿ ಮಾತ್ರ ಸಹಾಯ ಮಾಡುವ ಸಾಹಸಕ್ಕೆ ಕೈಹಾಕಿ.
೨. ಆಂಬುಲೆನ್ಸ್ ಬರುವವರೆಗೂ ಅಲ್ಲೇ ನಿಲ್ಲುವ ತಾಳ್ಮೆ, ಸಮಯ ಇರಬೇಕು. ಅಥವಾ ಬೇರೆ ವ್ಯವಸ್ಥೆ ಮಾಡುವ ಸಾಮರ್ಥ್ಯ ಇರಬೇಕು.
೩. ಈ ಸಲಹೆ ಹೆಂಗಸರಿಗೆ ಮಾತ್ರ- ಆಗಾಗ ನಿಮ್ಮ ಗಂಡನ ಮಾತನ್ನು ಪರಿಪಾಲಿಸುವ ಹವ್ಯಾಸ ಇರಲಿ. ಕೆಲವೊಮ್ಮೆ ಪತಿ ಪರಮೇಶ್ವರರು ಅಮೂಲ್ಯ ಸಲಹೆಗಳನ್ನು ಕೊಡುತ್ತಾರೆ.
೧. ಅಪಘಾತದ ಸ್ಥಳ ಪರಿಚಿತವಾಗಿದ್ದಲ್ಲಿ ಮಾತ್ರ ಸಹಾಯ ಮಾಡುವ ಸಾಹಸಕ್ಕೆ ಕೈಹಾಕಿ.
೨. ಆಂಬುಲೆನ್ಸ್ ಬರುವವರೆಗೂ ಅಲ್ಲೇ ನಿಲ್ಲುವ ತಾಳ್ಮೆ, ಸಮಯ ಇರಬೇಕು. ಅಥವಾ ಬೇರೆ ವ್ಯವಸ್ಥೆ ಮಾಡುವ ಸಾಮರ್ಥ್ಯ ಇರಬೇಕು.
೩. ಈ ಸಲಹೆ ಹೆಂಗಸರಿಗೆ ಮಾತ್ರ- ಆಗಾಗ ನಿಮ್ಮ ಗಂಡನ ಮಾತನ್ನು ಪರಿಪಾಲಿಸುವ ಹವ್ಯಾಸ ಇರಲಿ. ಕೆಲವೊಮ್ಮೆ ಪತಿ ಪರಮೇಶ್ವರರು ಅಮೂಲ್ಯ ಸಲಹೆಗಳನ್ನು ಕೊಡುತ್ತಾರೆ.
Sunday, 17 January 2016
ಮೂರ್ತಿ ಚಿಕ್ಕದು ... ಇವರ ಕೀರ್ತಿ ದೊಡ್ಡದು....
ಮೊನ್ನೆ ಹೀಗಾಯ್ತು
ನೋಡಿ.. ಸಾಯಂಕಾಲ ನಾನು ಯೋಗ ತರಗತಿಯನ್ನು ಮುಗಿಸಿ ತರಕಾರಿ ಖರೀದಿಸಿ ಮನೆಯ ಕಡೆ ನಡಕೊಂಡು ಬರ್ತಾ
ಇದ್ದೆ. ಸ್ವಲ್ಪ ಪುರುಸೊತ್ತಿದ್ದರೆ ನಮ್ಮ ಬಡಾವಣೆಯ ರಸ್ತೆಗಳನ್ನು ಒಮ್ಮೆ ನೋಡಬೇಕು ನೀವು.. ಅಬ್ಬಾ
ಪ್ರಪಂಚದ ಎಲ್ಲಾ ಭೂಖಂಡಗಳನ್ನೂ ಇಲ್ಲೆ ಕೊರೆದಿದ್ದಾರೆ. ಎಲ್ಲಿ ಕಾಲಿಟ್ಟರೂ
ವಿವಿಧ ಆಕಾರದ ಹೊಂಡಗಳು. ಮಧ್ಯೆ ಅಲ್ಲಲ್ಲಿ ಸಪಾಟು ಜಾಗ.. ಇಂಥ ರಸ್ತೆ ಅನ್ನೋ ಮೈದಾನದಲ್ಲಿ ನಮ್ಮ
ಬೀದಿಯ ಮಕ್ಕಳು ಕ್ರಿಕೆಟ್ ಆಡುತ್ತಾ ಇದ್ದರು.
ಆಟದ ಹುಮ್ಮಸ್ಸಿನಲ್ಲಿ ಎಲ್ಲಾದರು ಬಿದ್ದು ಕೈ-ಕಾಲು ಮುರಿದುಕೊಂಡರೆ ಕಷ್ಟ ಅಂದುಕೊಂಡು ನಾನು ಆ
ಹುಡುಗರಿಗೆ “ಹುಷಾರು ಕಣ್ರೋ.. ರಸ್ತೆ
ಸರಿಯಿಲ್ಲ. ಬಿದ್ದರೆ ಏಟಾದೀತು.. ಅಲ್ಲೊಂದು ಖಾಲಿ ಸೈಟಿದೆ ನೋಡಿ. ಅಲ್ಲಿ ಆಡಿ” ಅಂದೆ. ಎಲ್ಲವೂ
ಒಂದು ಕ್ಷಣ ಆಟ ನಿಲ್ಲಿಸಿದರು. ಚೆಂಡು ಹಿಡಿದಿದ್ದ ಆ ಮೂಲೆಮನೆ ಪ್ರಿಯಾಳ ಮಗ ಸಂತೋಷ ನನ್ನಕಡೆ
ಕಣ್ಣು ಹಾಯಿಸಿದ. ತನ್ನೆಲ್ಲಾ ಗೆಳೆಯರ ಕಡೆಗೊಂದು ದೃಷ್ಟಿ ಬೀರಿ “ ಆಂಟಿ.. ಈ ರಸ್ತೆ ನಮಗೆ ಆಟ
ಆಡಕ್ಕೆ ಸರಿಯಿಲ್ಲ ಅಂತೀರಲ್ಲಾ.. ನೀವು ಮಾತ್ರ ವಾಕಿಂಗ್ ಹೋಗೋದಕ್ಕೆ ಚೆನ್ನಾಗಿದ್ಯಾ... ನೀವು
ಹುಷಾರಾಗಿ ನೋಡ್ಕೊಂಡು ನಡೀರಿ...” ಅಂತ ಮಾತಿನ ಚಾಟಿ ಬೀಸಿದ.ಆ ದುರಹಂಕಾರಿ ಸಾಫ಼ಟ್ ವೇರ್
ಅಮ್ಮನಿಗೆ ಸರಿಯಾದ ಮಗ ಅಂದುಕೊಂಡು ಏನೂ ಆಗದವಳಂತೆ ಮನೆ ಕಡೆ ಹೆಜ್ಜೆ ಹಾಕಿದೆ.
ನೀವೇನೇ ಹೇಳಿ.. ಮಕ್ಕಳು
ದೇವರ ಪ್ರತಿರೂಪ.. ಅವರ ಮನಸ್ಸು ನಿಷ್ಕಲ್ಮಶ.. ಅನ್ನುವ ಮಾತಿನ ಮೇಲೆ ನನಗೆ ಇತ್ತೀಚೆಗೆ ನಂಬಿಕೆ
ಹೊರಟುಹೋಗಿದೆ.ನನ್ನ ಚಿಕ್ಕಮ್ಮನ ಮಗಳು ಸುಧಾಳ ಮೂರುವರ್ಷದ ಮಗಳನ್ನು ನೋಡಬೇಕು ನೀವು. ಕಳೆದ
ಶುಕ್ರವಾರ ರಜೆ ಇತ್ತಲ್ಲ ಯಾವುದೋ ಬಂದ್ ಅಂತ ಅವತ್ತು ಮನೆಯಲ್ಲಿ ಬೇಜಾರು ಅಂದುಕೊಂಡು ಅವಳ ಮನೆಗೆ
ಹೋದೆ.ಈ ಪುಟ್ಟಿನೇ ಬಾಗಿಲು ತೆಗೆದಳು.ಅವಳ ತುಟಿಯ ಮೇಲೆ ಸುಳಿದ ಕುಟಿಲನಗೆಯನ್ನು ನೋಡಿ ಯಾಕೋ ಬಂದ
ಗಳಿಗೆ ಸರಿಯಿಲ್ಲ ಅನಿಸಿತು. ಆದ್ರೂ ಅಂಥ ಮುದ್ದುಮಗುವನ್ನು ನೋಡಿ ಮಾತನಾಡಿಸದೇ ಇರಲು
ಸಾಧ್ಯವಾಗದೇ “ಏನೇ ಪುಟ್ಟಿ ಏನ್ಮಾಡ್ತಾ ಇದ್ದೀಯಾ?” ಅಂದೆ. ತಟಕ್ಕನೆ ಉತ್ತರ ಬಂತು “ ನಿಮ್ಮಜೊತೆ
ಮಾತಾಡ್ತಾ ಇದ್ದೀನಿ!” ಸುತ್ತಮುತ್ತ ನೋಡಿದೆ.ಸದ್ಯ ಯಾರೂ ಕೇಳಿಸ್ಕೊಂಡಿಲ್ಲ ಸಮಾಧಾನವಾಯ್ತು.
ಸುಧಾ ಒಳಗಡೆಯಿಂದ ಬಂದವಳು ಓ.. ಬಾರೇ... ಅಂತ ಆದರ ತೋರಿಸಿದಳು.ಎಲ್ಲ ಸಮಾಚಾರ
ಮಾತಾಡಿದ್ದಾಯ್ತು.ಸುಧಾ ಕಾಫಿ ತರಲು ಅಡಿಗೆಮನೆಗೆ ಹೋದಳು. ನಾನು ಚಿಂಟೂ ಟಿ.ವಿ ನೋಡುತ್ತಿದ್ದ ಆ
ಮಗುವಿಗೆ “ಏನೇ ಸುಬ್ಬಿಎಷ್ಟನೇ ಕ್ಲಾಸು” ಅಂದೆ.
ಎಲ್ ಕೆಜಿ.. ಅಂದವಳೇ ಮಾಕ್ಸ್ ಚಾನೆಲ್ ಹಾಕಿದಳು. ಅದೇನೋ “ಮೈಮೇಲೆ ಇರುವೆ ಬಿಟ್ಟುಕೊಂಡರಂತೆ”
ಅನ್ನೋ ಗಾದೆ ಥರ ನಾನು ಸುಮ್ಮನಿರಲಾರದೇ “ಸ್ಕೂಲಿಗೆ ಹೇಗೆ ಹೋಗ್ತೀಯಾ?” ಅಂದೆ.ನನ್ನನ್ನೊಮ್ಮೆ
ಗುರ್ರಂತ ನೋಡಿ ಸೋಫಾದಿಂದ ಛಂಗನೆ ನೆಗೆದು “ನೋಡಿ... ಹೀಗೆ ನಡಕೊಂಡು ಹೋಗ್ತೀನಿ.... ನಡಕೊಂಡು
ಬರ್ತೀನಿ ..” ಅಂದವಳೇ ಇಪ್ಪತ್ತು ಹೆಜ್ಜೆ ಗೇಟಿನವರೆಗೆ ಹೋಗಿ ಶಿಸ್ತಾಗಿ ವಾಪಸ್ ಬಂದು ಕುಳಿತಳು.
ಈ ಸಾರಿ ಮರ್ಯಾದೆ ಹೋಯ್ತು. ಸುಧಾ ಕಾಫಿ ತೆಗೆದುಕೊಂಡು ಬಂದವಳು ಕಿಸಕ್ ಅಂತ ನಕ್ಕು “ ತುಂಬಾ
ಚೂಟಿ ಕಣೇ... ಟೀಚರ್ಸ್ ಎಲ್ಲ ತುಂಬಾ ಹೋಪ್ಸ್ ಇಟ್ಟುಕೊಂಡಿದ್ದಾರೆ ಇವಳ ಬಗ್ಗೆ” ಅಂದಳು. ಹೂಂ...
ಹೋಪ್ಸ್ ಇಟ್ಟುಕೊಳ್ಳಬೇಕಾದ್ದೇ ಈ ಪಟಾಕಿಯ ಮೇಲೆ ಅಂದುಕೊಂಡು ದೇಶಾವರಿ ನಕ್ಕು ಸುಮ್ಮನಾದೆ.
ಇವಳಾದರೂ ವಾಸಿ, ಕಳೆದ ವಾರ ಪಕ್ಕದ ಬೀದಿಯಲ್ಲಿ ಕಟ್ಟಿರೋ ಹೊಸಮನೆಯ ಗೃಹಪ್ರವೇಶಕ್ಕೆ ನಾನು, ಮುಂದುಗಡೆ ಮನೆಯ ವಾಣಿ -ಅವಳ ಮಗ ನಿಪುಣ್
ಹೋಗಿದ್ದೆವು. ತುಂಬಾ ಜನ ಬಂದಿದ್ದರು. ಅಲ್ಲೊಬ್ಬರು ತಮ್ಮ ಒಂದು ವರ್ಷದ ಮಗುವನ್ನು ಎತ್ತಿಕೊಂಡು
ಕುಳಿತಿದ್ದರು. ಆ ಮಗುವಿಗೆ ಗಲ್ಲ, ಗದ್ದ, ಹಣೆ, ಕೈ,ಪಾದ
ಹೀಗೆ ದೇಹದ ಮೇಲೆಲ್ಲ ಕಪ್ಪುಕಾಡಿಗೆಯ
ಬೊಟ್ಟುಗಳನ್ನಿಟ್ಟಿದ್ದರು.ಮಗುವಿನ ಹಾಲುಬಿಳುಪು ಮೈಯಲ್ಲಿ ಈ ದೃಷ್ಟಿಬೊಟ್ಟುಗಳು ಕಣ್ಣಿಗೆ
ರಾಚುತ್ತಿದ್ದವು. ನಿಪುಣ್ ಆ ಮಗುವನ್ನು ಅರೆಕ್ಷಣ ನೋಡಿದವನೇ ಜೋರಾಗಿ “ಅಮ್ಮ ಮಗು ನಮ್ಮ
ಟಾಮಿನಾಯಿಯ ಥರಾನೇ ಇದೆ ಅಲ್ವಾ?ಬಿಳಿ ಮೈ ಕಪ್ಪು ಚುಕ್ಕೆ!” ಅನ್ನೋದೇ. ಅಯ್ಯೋ! ನಮಗಂತೂ
ತಗ್ಗಿಸಿದ ತಲೆ ಮೇಲೆತ್ತಲಾಗಲಿಲ್ಲ.
ಹಿಂದೆ ಮಹಾಭಾರತದ
ಅಭಿಮನ್ಯುವು ತಾಯಿ ಸುಭದ್ರೆಯ ಗರ್ಭದಲ್ಲಿರುವಾಗಲೇ ಶಸ್ತ್ರವಿದ್ಯೆಯ ಮಂತ್ರಗಳನ್ನು
ಅರಗಿಸಿಕೊಂಡಿದ್ದನು ಎಂದು ಓದಿದ ನೆನಪು. ಗರ್ಭಿಣಿ ಹೆಂಗಸರು ಮನಸ್ಸಿಗೆ ಹಿತಕರವಾದ
ವಾತಾವರಣದಲ್ಲಿದ್ದರೆ ಹುಟ್ಟುವ ಮಗುವಿನ ಮಾನಸಿಕ ಬೆಳವಣಿಗೆಗೆ ಸಹಕಾರಿ ಎಂಬುದು
ವೈಜ್ಞಾನಿಕವಾಗಿಯೇ ನಿರೂಪಿತವಾಗಿದೆ. ಹಾಗೇ ಈಗಿನ ಮಕ್ಕಳು ತಾಯಿಯ ಗರ್ಭದಲ್ಲಿರುವಾಗಲೇ ಹೊರಪ್ರಪಂಚದ
ಮಾತುಕತೆಗಳನ್ನು ಕೇಳಿಸಿಕೊಂಡು ಜೀರ್ಣಿಸಿಕೊಂಡಿರುತ್ತಾರೆ. ಹುಟ್ಟಿ ಮಾತು ಬರುತ್ತಿದ್ದಂತೆಯೇ
ಚುರುಕು ಉತ್ತರಗಳನ್ನು ನಿರಾಯಾಸವಾಗಿ ನೀಡುತ್ತಾರೆ ಅನ್ನುವುದು ನನ್ನ ಭಾವನೆ. ನನ್ನ ಗೆಳತಿ
ರೂಪಾಳ ಮಗಳು ನಾಲ್ಕುವರ್ಷದ ಅದಿತಿ ಇದ್ದಾಳೆ ನೋಡಿ . ಅವಳನ್ನು ಕಂಡರೆ ಒಂಥರಾ ಭಯಮಿಶ್ರಿತ ಗೌರವ
ನನಗೆ.ಒಮ್ಮೆ ನಾನು-ರೂಪಾ ಗಾಂಧಿಬಜಾರಿನಲ್ಲಿ ಗಣೇಶಹಬ್ಬಕ್ಕೆಶಾಪಿಂಗ್ ಮುಗಿಸಿ ಮನೆ ಕಡೆ ಹೋಗ್ತಾ
ಇದ್ದೆವು. ನಮ್ಮ ಜೊತೆ ನಡೆದು ಬಳಲಿದ್ದ ಈ ಪುಟಾಣಿ ಅಮ್ಮಾ... ಎತ್ಕೋ ...ಕಾಲುನೋವು..
ಹೊಟ್ಟೆನೋವು... ಅಂತೆಲ್ಲಾ ಪಿರಿಪಿರಿ ಶುರುಮಾಡಿದಳು. ಅಂಗಡಿಗಳನ್ನು ಸುತ್ತಿ ಸುಸ್ತಾಗಿದ್ದ
ನಮಗೆ ಕೈಯಲ್ಲಿ ಸಾಮಾನಿನ ಚೀಲಗಳು ಬೇರೆ. ಎಷ್ಟು ಸಮಾಧಾನ ಹೇಳಿದರೂ ಇವಳು ಕೇಳುತ್ತಿಲ್ಲ. ರೂಪಾ
ರೇಗಿ “ ನೋಡು ನೀನು ಹೀಗೆ ಹಠ ಮಾಡ್ತಾ ಇದ್ದರೆ ಅಲ್ಲಿ ಮೂಲೆಯಲ್ಲಿ ನಿಂತಿದ್ದಾನಲ್ಲ ಅವನಿಗೆ
ನಿನ್ನ ಕೊಟ್ಬಿಡ್ತೀನಿ... ಸುಮ್ನೆ ನಡಿ” ಅಂದಳು. ಆ ಮೂಲೆಯಲ್ಲಿ ನಿಂತಿದ್ದ ವಯಸ್ಸಾದ,ಕೊಳಕುಬಟ್ಟೆಯ, ಆ ರೋಗಿಷ್ಟ ಮುದುಕನನ್ನು
ಎರಡು ಕ್ಷಣ ದುರುಗುಟ್ಟಿ ನೋಡಿದ ಅದಿತಿ “ ಏ... ಹ..ಹ... ಅವಂಗೇ ನಡೆಯಕಾಗಲ್ಲ.... ನೀನು
ಕೊಟ್ರೂ ನನ್ನ ಅವನು ತಗೊಳೋದೇ ಇಲ್ಲ...ಅಮ್ಮ
ನಿಂಗೆ ಅಷ್ಟೂ ಗೊತ್ತಾಗಲ್ಲ... ”ಅಂದಾಗ
ನಾವಿಬ್ಬರೂ ಮುಖ ಮುಖ ನೋಡಿಕೊಂಡು ಮುಂದೆ ನಡೆದೆವು.
ಮಕ್ಕಳ ಈ
ಅತಿಬುದ್ಧಿವಂತಿಕೆ ಇತ್ತೀಚಿನ ಕೆಲವರ್ಷಗಳ ಬೆಳವಣಿಗೆ. ಹಿಂದೆ ಮಕ್ಕಳು ಮುಗ್ಧತೆಯ ಪ್ರತಿರೂಪವೇ
ಆಗಿದ್ದರು. ಇಲ್ಲದಿದ್ದರೆ ಅತ್ತರೆ ಅಳಲವ್ವ ಈ ಕೂಸು ನನಗಿರಲಿ ..ಕೆಟ್ಟರೆ ಕೆಡಲಿ ಮನೆಗೆಲಸ
...., ಕೂಸು ಕಂದವ್ವ ಒಳಹೊರಗೆ ಆಡಿದರ ಬೀಸಣಿಗೆ
ಗಾಳೀ ಸುಳಿದಾವ..... ಎಂಬ ಜನಪದಗೀತೆಗಳು ಸೃಷ್ಟಿಯಾಗುತ್ತಿರಲಿಲ್ಲ. ಈಗಿನ ಮಕ್ಕಳು ಬೀಸಣಿಗೆಯಲ್ಲ
, ನಾಲಿಗೆಯೆಂಬ ಚಾವಟಿಗೆಯನ್ನು ಎಲ್ಲೆಂದರಲ್ಲಿ ಬೀಸುತ್ತಿದ್ದರೆ ಅದರ ಏಟು ತಿಂದವರಿಗೇ ಗೊತ್ತು
ಅದರ ರುಚಿ. ಆಡುವಂತಿಲ್ಲ... ಅನುಭವಿಸುವಂತಿಲ್ಲ... ಪಾಪ ಚಿಕ್ಕಮಕ್ಕಳು ಅವುಗಳಿಗೇನು
ಗೊತ್ತಾಗತ್ತೆ ಅಲ್ವೇ!. ತಮ್ಮ ಮನೆಯಲ್ಲಿ
ಪಾಯಸವನ್ನು ಕಣ್ಣೆತ್ತಿ ನೋಡದವು ಪರರ ಮನೆಗೆ ಹೋದಾಗ ಬಟ್ಟಲು ತುಂಬಾ ಕುಡಿದು “ಅವನು ಪಾಯಸ
ತಿನ್ನಲ್ಲ” ಎನ್ನುವ ನಮಗೆ ಮಂಗಳಾರತಿ ಮಾಡುತ್ತವೆ. ಆ ಮನೆಯವರ ಬಗ್ಗೆ ಎಂದೋ ಆಡಿದ ಕುಹಕದ
ಮಾತನ್ನು ಅಚ್ಚುಕಟ್ಟಾಗಿ ಅವರ ಮುಂದೆ ಒಪ್ಪಿಸಿ ನಾವು ಆಜನ್ಮ ವೈರಿಗಳಾಗುವಂತೆ ಮಾಡುತ್ತವೆ. ನನ್ನ
ತಂಗಿಯ ಮಗನೊಮ್ಮೆ ತೋಳಿಲ್ಲದ ರವಿಕೆ ತೊಟ್ಟು ಬಂದ ನನ್ನ ಗೆಳತಿ ಮನೆಗೆ ಕಾಲಿಟ್ಟೊಡನೆ “ಏ.. ಆಂಟಿ
ನೋಡಮ್ಮಾ... ನೀ ಮೊನ್ನೆ ಹೇಳ್ತಾ ಇದ್ಯಲ್ಲ... ಮೈ ತೋರಿಸಿಕೊಂಡು ಓಡಾಡ್ತಾರೆ ಅಂತ ... ಇವತ್ತು ಬ್ಲೌಸೇ
ಹಾಕಿಲ್ಲಾ... ” ಎಂಬ ಅಣಿಮುತ್ತು ಉದುರಿಸಿ ನಮ್ಮ ಗೆಳೆತನಕ್ಕೆ ಮಂಗಳ ಹಾಡಿದ್ದ . ಇನ್ನೊಮ್ಮೆ
ನನ್ನ ಜೀವದ ಗೆಳತಿ ಕವಿತಾ ಮನೆಗೆ ಬಂದಿದ್ದಳು. ಧಡೂತಿದೇಹದ ಆಕೆ ಮನೆಗೆ ಬಂದಾಗಿನಿಂದ ಈ ಮಹಾಶಯ
ಅವಳನ್ನೇ ಗಮನಿಸುತ್ತಿದ್ದ. ನಾವು ಅದೂ ಇದೂ ಮಾತನಾಡುತ್ತಿರಬೇಕಾದರೆ ಇವನು “ಆಂಟಿ ನಿಮ್ಮ
ಕಣ್ಣೆಲ್ಲಿದೆ? ನಾನು ನಿಮಗೆ ಕಾಣಿಸ್ತಾ ಇದೀನಾ?” ಅಂತ ಮಾತಿನ ಬಾಣ ಬಿಟ್ಟ. ಪಾಪ..
ಕವಿತಾಗೆ..ಒಂಥರಾ ಆಯಿತು. ನಿಜ ಕವಿತಾಳ ಮುಖದಲ್ಲಿ ಉಬ್ಬಿದ ಪೂರಿಯಂತಹ ಗಲ್ಲಗಳ ,ಏಲಕ್ಕಿ
ಬಾಳೆಹಣ್ಣಿನಂತಹಾ ಮೂಗಿನ ಹಿಂದೆ ಕಣ್ಣುಗಳು
ಅಡಗಿವೆ. ಹಾಗಂತ ಈ ಕಿಲಾಡಿಗೆ ದೊಡ್ಡವರೆಂದರೆ ಗೌರವ ಬೇಡವೇ? ನನಗಂತೂ ಅವನನ್ನು ಮಚ್ಚಟೆಯಾಗಿ
ಬೆಳೆಸಿದ ನನ್ನ ತಂಗಿಯ ಮೇಲೆ ಬ್ರಹ್ಮಾಂಡದಂಥ
ಸಿಟ್ಟು ಬಂದಿತ್ತು.
ನಮ್ಮಿಂದಲೇ ಈ ಜಗತ್ತಿಗೆ
ಬರುವ , ನಾವೇ ಕೈಹಿಡಿದು ನಡೆಯಲು ಕಲಿಸಿದ ನಮ್ಮ ಕರುಳಕುಡಿಗಳು ನಮ್ಮಿಂದಲೇ ಭಾಷೆಯನ್ನು ಕಲಿತು,
ನಮ್ಮ ಆರೈಕೆಯಿಂದಲೇ ರಕ್ತ-ಮಾಂಸಗಳನ್ನು ವರ್ಧಿಸಿಕೊಂಡು , ಸ್ವಲ್ಪ ತಿಳುವಳಿಕೆ
ಬರುತ್ತಿದ್ದಂತೆಯೇ ನಮ್ಮನ್ನೇ ಕೂಪಮಂಡೂಕಗಳೆಂದು ಜರಿಯುವುದು ಸೋಜಿಗವೇ ಸರಿ. ಮೂರು -ನಾಲ್ಕು
ವರ್ಷದವರೆಗೆ ಕಿವಿಗೆ ಹಿತವಾಗುವ ಮಕ್ಕಳ ವಾಗ್ಬಾಣಗಳು ಕಾಲಕಳೆದಂತೆ ಇರಿಯಲಾರಂಭಿಸುತ್ತವೆ.
ಕೆಲವೊಮ್ಮೆ ಜೀವನದ ಸತ್ಯಗಳನ್ನು ತೋರಿಸುತ್ತವೆ. ನಾನೊಮ್ಮೆ ಸಹೋದ್ಯೋಗಿ ಲತಾಳ ಮನೆಗೆ ಹೋಗಿದ್ದೆ.
ಆಕೆ ಅವಳ ಬಿಡುವಿಲ್ಲದ ದಿನಚರಿಯನ್ನೆಲ್ಲ ವರ್ಣಿಸಿ “ನೋಡೇ..ಹೊರಗೆ ದುಡಿಯುವುದಲ್ಲದೆ ಮನೆಯಲ್ಲಿ
ಅತ್ತೆ-ಮಾವ, ಗಂಡ-ಮಕ್ಕಳಿಗೆ ಮೂರು ಹೊತ್ತಿಗೂ ಥರಾವರಿ ಅಡುಗೆ ಮಾಡಿ ಬಡಿಸ್ತೀನಿ.ಕೆಲಸದವಳನ್ನೂ
ಇಟ್ಟುಕೊಳ್ಳದೇ ಎಲ್ಲ ಮನೆಕೆಲಸ ಮಾಡ್ತೀನಿ. ಅಲ್ಲದೇ ಈ ಮಕ್ಕಳ ಸ್ಕೂಲು, ಟ್ಯೂಶನ್,
ಕ್ಲಾಸುಗಳು... ರಾತ್ರಿಯಾಗುವಷ್ಟರಲ್ಲಿ ಎಂಥ ಸುಸ್ತು ಗೊತ್ತಾ? ಆದ್ರೆ ಒಬ್ಬರಾದರೂ ನನ್ನ
ಸಹಾಯಕ್ಕೆ ಬರಲ್ಲ ನೋಡು... ಅಂದಳು. ಮಧ್ಯೆ ಬಾಯಿ ಹಾಕಿದ ಹನ್ನೆರಡರ ಮಗಳು ನಿಧಿ “ ಏನಮ್ಮಾ...
ಹೀಗೆಲ್ಲಾ ಒಬ್ಬಳೇ ಮಾಡು ಅಂತ ನಾವೆಲ್ಲಾ ನಿನಗೆ ಹೇಳಿದ್ದೀವಾ?ಯಾರನ್ನೂ ಹತ್ತಿರಕ್ಕೆ ಸೇರಿಸದೇ
ನೀನೇ ಮಾಡ್ತೀಯಾ... ಆಮೇಲೆ ನೀನೇ ಅಳ್ತೀಯಲ್ಲಾ... ಸರೀನಾ ಇದು ? ಅನ್ನೋದೇ!!. ಅರೆ! ಹೌದಲ್ಲ
ಎಂಥ ಸತ್ಯ ಇದೆಯಲ್ಲ ನಿಧಿಯ ಮಾತಿನಲ್ಲಿ ಅನಿಸಿತು ನನಗೆ. ನಮ್ಮ ಕೈಲಾದಷ್ಟೇ ಕೆಲಸ ಮಾಡಬೇಕು.
ಜಗತ್ತನ್ನು ಮೆಚ್ಚಿಸಲು ಹೋಗಿ ಸುಸ್ತಾಗಿ ಅಳುವ ಅವಶ್ಯಕತೆ ಏನಿದೆ ಅಲ್ಲವೇ? ಈ ಮಾತಿಗೇನೂ
ತಲೆದೂಗಬಹುದು. ಆದರೆ ಯೌವನದಲ್ಲೇ ಗಂಡನನ್ನು ಕಳಕೊಂಡ ಗಿರಿಜಳ ಮಗಳಾಡಿದ ಮಾತು ಇಷ್ಟು
ವರ್ಷಗಳಾದರೂ ನನ್ನ ಕಿವಿಯಲ್ಲಿ ಗುಯ್ ಗುಡುತ್ತದೆ. ಒಮ್ಮೆ ಆಕೆ ಗಂಡನ ಅನಾರೋಗ್ಯ, ನಡುವೆ
ಹುಟ್ಟಿದ ಮಗಳು, ಆರ್ಥಿಕ ಸಂಕಷ್ಟಗಳು, ಸಾಂಸಾರಿಕ ತಾಪತ್ರಯಗಳು, ಇತ್ಯಾದಿಗಳನ್ನೆಲ್ಲ ಹೇಳಿಕೊಂಡು ಕಣ್ಣೀರು
ಹಾಕುತ್ತಿದ್ದಳು. ಅಲ್ಲೇ ಇದ್ದ ಅವಳ ಹದಿನಾರರ ಮಗಳು “ ಏನಮ್ಮಾ.. ನನ್ನ ಹುಟ್ಟಿಸು ಅಂತ ನಾನೇನು
ನಿನ್ನ ಬೇಡಿಕೊಂಡೆನಾ?.. ಅಷ್ಟು ಕಷ್ಟಗಳಿದ್ದರೆ ಮಗು ಹುಟ್ಟಿಸಬಾರದಾಗಿತ್ತು.ಮಾಡೋದೆಲ್ಲ ಮಾಡಿ
ಈಗ ಅಳೋದು ನೋಡು !” ಎಂಬ ಮಾತಿನೇಟು ಕೊಟ್ಟಳು. ಉತ್ತರವಿಲ್ಲದ ಈ ಪ್ರಶ್ನೆಯನ್ನು, ಒಂಟಿಯಾಗಿ
ಬದುಕುತ್ತಿರುವ ಗಿರಿಜಳನ್ನೂ ನೆನೆದರೆ ನನ್ನ ಹೃದಯ ಸ್ತಬ್ಧವಾಗುತ್ತದೆ. ಕಣ್ಣು ಮಂಜಾಗುತ್ತದೆ.
ನಮ್ಮ ಕೂಸುಗಳು ನಮ್ಮದೇ
ದೇಹದ ಭಾಗಗಳು. ನಮ್ಮ ವಿಚಾರಗಳ ಪ್ರತಿಬಿಂಬಗಳು. ಮಕ್ಕಳು ದೊಡ್ಡವರ ನಡವಳಿಕೆಗಳನ್ನು,
ನಂಬಿಕೆಗಳನ್ನು ಅನುಸರಿಸುತ್ತವೆಯೇ ವಿನ: ಅವರ ಬುದ್ಧಿಮಾತುಗಳನ್ನಲ್ಲ.ನಮ್ಮ ಪ್ರಬುದ್ಧ ಕ್ರಿಯೆಗಳಿಂದ
ಬಾಲ್ಯದಿಂದಲೇ ಅವರಲ್ಲಿ ಹಿರಿಯರ ಬಗ್ಗೆ ಗೌರವ, ಕುಟುಂಬದ ಬಗ್ಗೆ ಹೆಮ್ಮೆ, ಕಳಕಳಿಗಳು
ಬೆಳೆಯುವಂತೆ ಮಾಡಿದರೆ ಈ ವಾಕ್ ಶರಪಂಜರದಿಂದ ತಕ್ಕಮಟ್ಟಿಗೆ ಪಾರಾಗಬಹುದು ,ಅನ್ಯರನ್ನು
ರಕ್ಷಿಸಬಹುದು . ಹಾಗೊಂದು ವೇಳೆ ಪರಿಸರದ ಪ್ರಭಾವದಿಂದಲೋ ಅಥವಾ ಹುಟ್ಟುಸ್ವಭಾವದಿಂದಲೋ
ಬಿರುನುಡಿಗಳನ್ನು ಆಡಲಾರಂಭಿಸಿದಾಗ, ಆಗಾಗ ಎಚ್ಚರಿಕೆ ಕೊಟ್ಟು, ತಿಳಿಹೇಳುತ್ತಿದ್ದರೆ,
ಸಕಾಲದಲ್ಲಿ ಮೃದುವಾಗಿ ತಿದ್ದಿದರೆ ನಮ್ಮ ಕಂದ ಸಮಾಜಕ್ಕೊಂದು ಆಸ್ತಿಯಾಗಬಹುದು.
Thursday, 10 December 2015
ವಿದ್ಯಾರ್ಹತೆ - ವೃತ್ತಿ- ಸಂಪಾದನೆ
“ಅಲ್ಪಕಾಲದಲ್ಲಿ
ಅತ್ಯಧಿಕ ಧನಸಂಪಾದನೆ ಮಾಡಲು, ವಿದೇಶಕ್ಕೆ ಹೋಗಲು ಸಾಧ್ಯವಿರುವ ವೃತ್ತಿ ಯಾವುದು? ಅದಕ್ಕೆ ಬೇಕಾದ
ವಿದ್ಯಾರ್ಹತೆ ಯಾವುದು?”
ಎಂದು ಯುದ್ಧರಂಗದಲ್ಲಿ
ಅರ್ಜುನನು ಶ್ರೀಕೃಷ್ಣನನ್ನು ಪ್ರಶ್ನಿಸಿದಂತೆ, ಮಹಾಭಾರತದಲ್ಲಿ ಯಕ್ಷನು
ಧರ್ಮರಾಜನನ್ನು ಪ್ರಶ್ನಿಸಿದಂತೆ , ಹತ್ತನೇ ತರಗತಿಯ ಆದಿತ್ಯನು ನನ್ನನ್ನು ಪ್ರಶ್ನಿಸಿದನು.ಪರಮ
ಜ್ಞಾನಿಗಳಾದ ಶ್ರೀಕೃಷ್ಣ -ಧರ್ಮರಾಜರೆಲ್ಲಿ? ಕಂಠಶೋಷಣೆಯಿಂದ ಹೊಟ್ಟೆಹೊರೆಯವ ಈ
ಶಿಕ್ಷಕಿಯೆಲ್ಲಿ? ನನ್ನ ನಾಲಿಗೆ ಬಡಬಡಿಸಿತು- “ಭಾರತವೆಂಬ ಪುಣ್ಯಭೂಮಿಯಲ್ಲಿ ಈ ದಿನಗಳಲ್ಲಿ
ಸಾಫ಼ಟ್ ವೇರ್ ಇಂಜನಿಯರ್ ಎಂಬ ವೃತ್ತಿಯಿದೆ.ಅದಕ್ಕಾಗಿ ಕಂಪ್ಯೂಟರ್ ಸೈನ್ಸ್ಇಂಜನಿಯರಿಂಗ್ ಎಂಬ
ಡಿಗ್ರಿಯ ಅವಶ್ಯಕತೆಯಿದೆ. ಅದನ್ನು ಕಡಿಮೆ ಖರ್ಚಿನಲ್ಲಿ ಓದಲು ಶಾಲೆ ಮತ್ತು ಕೋಚಿಂಗ್ ಸೆಂಟರ್
ನಲ್ಲಿ ಕಠಿಣ ಪರಿಶ್ರಮದ ಅಗತ್ಯವೂ ಇದೆ .”
ಡಿಸೆಂಬರ್
ಬಂತೆಂದರೆ ಹತ್ತನೇ ತರಗತಿಯ ಮಕ್ಕಳನ್ನು , ಅವರ ಪಾಲಕರನ್ನು ಮುಂದೇನು? ಎಂಬ ಪ್ರಶ್ನೆ
ಬಾಧಿಸಲಾರಂಭಿಸುತ್ತದೆ. ಕೆಲ ದಶಕಗಳ ಹಿಂದೆ ಇದೊಂದು ಸಮಸ್ಯೆಯೇ ಆಗಿರಲಿಲ್ಲ. ಮಕ್ಕಳ ಅಂಕಗಳ
ಬಗ್ಗೆ ,ಭವಿಷ್ಯದ ಬಗ್ಗೆ ಪಾಲಕರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.ಓದುವ
ಹಂಬಲವಿರುವವರು-ಆರ್ಥಿಕ ಶಕ್ತಿ ಇರುವವರು ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳಿಗೆ ಅನುಸಾರವಾಗಿ ಸೈನ್ಸ್/ಕಾಮರ್ಸ್/ಆರ್ಟ್ಸ್/ಡಿಪ್ಲೊಮಾ
ಓದು, ಇತರರು- ಹುಡುಗರಾದರೆ ಪುರೋಹಿತಿಕೆ, ವ್ಯವಸಾಯ,ವ್ಯಾಪಾರ, ಡ್ರೈವಿಂಗ್ ಕಲಿತು ಪೇಟೆಗೆ
ಜೀಪು- ದಿನಕ್ಕೆ ೧೦ ಟ್ರಿಪ್.....ಹುಡುಗಿಯರಾದರೆ ಹೊಲಿಗೆ,ಟೈಪಿಂಗ್, ...೨ ವರ್ಷದಲ್ಲಿ
ಮದುವೆ... ಹೀಗೆ ಜೀವನ ಅತಿ ಸರಳವಾಗಿತ್ತು. ಆದರೆ
ಈಗ ಕಾಲ ಬದಲಾಗಿದೆ.ಮೌಲ್ಯಗಳು ಬದಲಾಗಿವೆ. ಎಲ್ಲರಿಗೂ ಮಕ್ಕಳು ಪಿ.ಯು.ಸಿಯಲ್ಲಿ ವಿಜ್ಞಾನವನ್ನೇ
ಓದಲಿ. ಡಾಕ್ಟರ್/ಇಂಜನಿಯರ್ ಗಳಾಗಿ ಅತಿ ಹೆಚ್ಚು ಸಂಪಾದಿಸಲಿ,ವಿದೇಶಕ್ಕೆ ಹೋಗಲಿ ಎಂಬಾಸೆ.
ಇದರಲ್ಲೇನೂ ತಪ್ಪಿಲ್ಲ. ಸುಖವಾಗಿ ಬದುಕಬೇಕೆನ್ನುವ ಆಸೆ ಸಹಜವೇ. ಆದರೆ ಜನರ ಆಸೆಗಳಿಗನುಗುಣವಾಗಿ ಕಡಿಮೆ ಖರ್ಚಿನಲ್ಲಿ
ವೈದ್ಯಕೀಯ/ತಾಂತ್ರಿಕಶಿಕ್ಷಣವನ್ನು ಕೊಡುವ ಸಂಸ್ಥೆಗಳನ್ನು ನಮ್ಮ ಸರಕಾರಗಳು ಸ್ಥಾಪಿಸಿಲ್ಲ. ಎಲ್ಲೆಂದರಲ್ಲಿ ಇರುವ ಖಾಸಗಿ ಕಾಲೇಜುಗಳಿಗೆ ಕೋಟಿಗಳನ್ನು
ಹೊಂದಿಸುವ ಶಕ್ತಿ ನಮಗಿಲ್ಲ.ಅದಕ್ಕೇ ಮಕ್ಕಳು ೧೦ನೇ ತರಗತಿಗೆ ಬರುತ್ತಿದ್ದಂತೆ ಪಾಲಕರಗೆ ಆಕಾಶವೇ
ತಲೆಯ ಮೇಲೆ ಬಿದ್ದಂತೆ ಅನಿಸುತ್ತದೆ.ಮಕ್ಕಳಿಗೆ ಉಸಿರು ಕಟ್ಟಿದಂತಾಗುತ್ತದೆ.
ಪಿ..ಯು.ಸಿ/೧೨ನೇ
ತರಗತಿಯ ನಂತರದ ತಾಂತ್ರಿಕ ಶಿಕ್ಷಣಕ್ಕೆ ಇರುವ ಸರಕಾರೀ ವ್ಯವಸ್ಥೆ ದಯನೀಯವಾಗಿದೆ. ಕೇಂದ್ರಸರಕಾರದ
ವಿಶೇಷ ಅನುದಾನವನ್ನು ಪಡೆಯುವ, ಉತ್ತಮ ದರ್ಜೆಯ ವ್ಯವಸ್ಥೆಗಳು,ಪರಿಣತ ಅಧ್ಯಾಪಕರಿರುವ ಇಪ್ಪತ್ತು
ಎನ್.ಐ.ಟಿಗಳು ರಾಜ್ಯಕ್ಕೊಂದರಂತೆ ಇವೆ[ಕೆಲ ರಾಜ್ಯಗಳಲ್ಲಿ ಇಲ್ಲ].ಇಲ್ಲಿನ ಹತ್ತುಸಾವಿರ ಸೀಟುಗಳಿಗೆ
ಹದಿಮೂರು ಲಕ್ಷ ಮಕ್ಕಳು ಪರೀಕ್ಷೆ[ಜೆ.ಇ.ಇ ಮೈನ್] ಬರೆಯುತ್ತಾರೆ.ಇವುಗಳಿಗಿಂತಲೂ ಶ್ರೇಷ್ಠವಾದ,
ವಿಶ್ವದರ್ಜೆಯ ವ್ಯವಸ್ಥೆಗಳಿರುವ ಹದಿನೇಳು ಐ.ಐ.ಟಿಗಳು ದೇಶದಲ್ಲಿವೆ[ಹೆಚ್ಚಿನವು
ಉತ್ತರಭಾರತದಲ್ಲಿ]. ಇಲ್ಲಿರುವ ಒಂಬತ್ತು ಸಾವಿರ ಸೀಟುಗಳಿಗೆ ಜೆ.ಇ.ಇ ಮೈನ್ ಪರೀಕ್ಷೆಯಲ್ಲಿ
ಅತಿಹೆಚ್ಚು ಅಂಕಗಳನ್ನು ಪಡೆದ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ[ ಜೆ.ಇ.ಇ ಅಡ್ವಾನ್ಸಡ್]
ಬರೆಯುತ್ತಾರೆ. ಮೀಸಲಾತಿಯೆಂಬ ಗೊಂಡಾರಣ್ಯದಿಂದ ಪಾರಾಗಿ ಬಂದು ಇಲ್ಲಿ ಸೀಟು ದಕ್ಕಿಸಿಕೊಳ್ಳುವ
ಪುಣ್ಯವಂತ, ಬುದ್ಧಿವಂತ ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ಐ.ಐ.ಟಿ/ಎನ್.ಐ.ಟಿಯಲ್ಲಿ ತಾಂತ್ರಿಕ ವಿದ್ಯಾಭ್ಯಾಸ ಮುಗಿಸಿ ಹೆಚ್ಚಿನ ಸಂಬಳದ
ನೌಕರಿ ಪಡೆದು ಪಾಲಕರ ಕನಸುಗಳನ್ನು ನನಸಾಗಿಸುತ್ತಾರೆ. ಆದರೆ ಸ್ವಾಮೀ ... ಉಳಿದ ೧೨ ಲಕ್ಷದ ೮೦
ಸಾವಿರ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ಅವರನ್ನು ಬೀದಿಗೊಂದರಂತೆ ತಲೆ ಎತ್ತುತ್ತಿರುವ ಖಾಸಗಿ ಇಂಜನಿಯರಿಂಗ್
ಕಾಲೇಜುಗಳು ಕೈಬೀಸಿ ಕರೆಯುತ್ತವೆ. ಇವುಗಳಲ್ಲಿ ಕೆಲವು ಸರಕಾರೀ ಸಂಸ್ಥೆಗಳಿಗಿಂತಲೂ ಒಳ್ಳೆಯ
ವಿದ್ಯಾಭ್ಯಾಸವನ್ನು ಕೊಡುತ್ತವೆಂದು ಖ್ಯಾತಿ ಪಡೆದಿವೆ[BITS , PES, RVCE , SRME ಇತ್ಯಾದಿ]
ಆದರೆ ಅವುಗಳಿಗೆ ಸರಕಾರೀ ಅನುದಾನ ಇಲ್ಲದಿರುವುದರಿಂದ ಅದಕ್ಕೆ ತಕ್ಕನಾಗಿ ಹಣವನ್ನು ಪಾಲಕರಿಂದ
ವಸೂಲಿ ಮಾಡುತ್ತವೆ.ಉಳಿದಂತೆ ಹೆಚ್ಚಿನ ಖಾಸಗೀ ಕಾಲೇಜುಗಳಲ್ಲಿ ವಿದ್ಯಾಭ್ಯಾಸದ ಮಟ್ಟ
ಕಳಪೆಯಾಗಿರುತ್ತದೆ. ಇವುಗಳಲ್ಲಿ ಪ್ರವೇಶ ಪಡೆಯಲು ರಾಜ್ಯಸರಕಾರಗಳು ನಡೆಸುವ ಸಿ.ಇ.ಟಿ/ ಖಾಸಗಿಯವರ
ಕಾಮೆಡ್ ಕೆ ಪರೀಕ್ಷೆಯನ್ನು ಬರೆಯಬೇಕು.ಈ ಖಾಸಗಿ ಸಂಸ್ಥೆಗಳಲ್ಲಿ ಕೆಲವು ಸೀಟುಗಳನ್ನು ಉತ್ತಮ
ಅಂಕಗಳನ್ನು ಪಡೆದವರಿಗೆ ಮೀಸಲಿಟ್ಟಿದ್ದಾರಾದರೂ ಅವು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿವೆ. ನಮ್ಮದೊಡ್ಡಸಂಖ್ಯೆಯ
ಆಕಾಂಕ್ಷಿಸಮೂಹಕ್ಕೆ ಇವು ಏನೇನೂ ಸಾಲದು. ಆದ್ದರಿಂದ ಉಳಿದೆಲ್ಲ ವಿದ್ಯಾರ್ಥಿಗಳು ಖಾಸಗಿ
ಕಾಲೇಜುಗಳು ನಿಗದಿಪಡಿಸಿದ ದೊಡ್ಡಮೊತ್ತವನ್ನು ಸಲ್ಲಿಸಿ ಇಂಜನಿಯರಿಂಗ್ ಶಿಕ್ಷಣ ಪಡೆಯುವುದು
ಅನಿವಾರ್ಯ. ಇನ್ನು ವೈದ್ಯಕೀಯ ಶಿಕ್ಷಣವನ್ನು ನೋಡಿದರೆ ದೇಶದಲ್ಲಿ ಕೇವಲ ೧೫೦ ಸರ್ಕಾರೀ ಕಾಲೇಜುಗಳಿವೆ. ಅವುಗಳ ಇಪ್ಪತ್ತೊಂದು
ಸಾವಿರ ಸೀಟುಗಳಿಗೆ ಪ್ರವೇಶ ಪಡೆಯಲು ಆರು ಲಕ್ಷ
ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿರುತ್ತಾರೆ. ಇನ್ನುಳಿದ ಎಲ್ಲರೂ ಖಾಸಗಿ ಕಾಲೇಜುಗಳಲ್ಲಿ
ಲಕ್ಷಗಳನ್ನು ಸಲ್ಲಿಸಿ ವಿದ್ಯಾಭ್ಯಾಸ ಪಡೆಯಬೇಕು.
ಇಂಥ
ವ್ಯವಸ್ಥೆಯಲ್ಲಿ ಸಹಜವಾಗಿಯೇ ಹೆಚ್ಚು ಅಂಕ ಗಳಿಸಲು ಮಕ್ಕಳ ಮೇಲೆ ಒತ್ತಡ ಇರುತ್ತದೆ. ಈ ಸರಕಾರೀ
ಸೀಟುಗಳಿಗಿರುವ ಸ್ಪರ್ಧೆಯಿಂದಾಗಿ ಪ್ರವೇಶ ಪರೀಕ್ಷೆ
ಅತ್ಯಂತ ಕಠಿಣವಾಗಿರುತ್ತದೆ. ಹನ್ನೆರಡನೇ ತರಗತಿಯ/ಪಿ.ಯು.ಸಿ ಯ ನಮ್ಮ ಸರ್ಕಾರೀ ಪಠ್ಯಕ್ರಮ ಈ
ಪರೀಕ್ಷೆಯನ್ನು ಭೇದಿಸಲು ಅಸಮರ್ಥವಾಗಿದೆ. ಅದಕ್ಕೆ ಮತ್ತೆ ಖಾಸಗಿ ಟ್ಯೂಶನ್ ಸೆಂಟರ್ ಗಳು
ನೆರವಿಗೆ ಬರುತ್ತವೆ. ಇಲ್ಲಿನ ಶಿಕ್ಷಣಕ್ಕೆ
ಲಕ್ಷಾಂತರ ರೂಪಾಯಿಗಳು ಬೇಕು. [ ದೀಕ್ಷಾ ಕಾಲೇಜ್, ಎಕ್ಸಲೆಂಟ್,ಆಕಾಶ್,ಫಿಟ್ ಜೀ, ರಾಜಸ್ತಾನದ
ಕೋಟಾ ಇತ್ಯಾದಿ]. ಹತ್ತನೇ ತರಗತಿ ಮುಗಿಯುತ್ತಿದ್ದಂತೆಯೇ ಇಲ್ಲಿನ ತರಬೇತಿ ಆರಂಭವಾಗುತ್ತದೆ . ದಿನಕ್ಕೆ ೨೦೦-೪೦೦ [ಫಿಸಿಕ್ಸ್, ಕೆಮಿಸ್ಟ್ರಿ, ಮಾತ್ಸ್]
ಲೆಕ್ಕಗಳನ್ನು ಅತಿ ಕಡಿಮೆ ನಿಮಿಷಗಳಲ್ಲಿ ಬಿಡಿಸುವ ಕಲೆಯನ್ನು ಇಲ್ಲಿ ಕಲಿಸುತ್ತಾರೆ.. ಆದರೆ ನೆನಪಿಡಿ ...ಇಷ್ಟೊಂದು ಶ್ರಮವಹಿಸಲು
ವಿದ್ಯಾರ್ಥಿಗೆ ವಿಜ್ಞಾನದಲ್ಲಿ ಆಸಕ್ತಿ ಇರಬೇಕು. ತರ್ಕಬದ್ಧವಾಗಿ ಯೋಚಿಸುವ ಬುದ್ಧಿವಂತಿಕೆ
ಬೇಕು. ಇದಲ್ಲದೇ ಮನೆಗೆ ಬಂದು ಮತ್ತೆ ೫-೬ ಗಂಟೆಗಳ .ಕಾಲ ಅಧ್ಯಯನವನ್ನೂ ಮಾಡಬೇಕು .ಒಟ್ಟಾರೆ
ಎರಡು ವರ್ಷ ಅಸಾಮಾನ್ಯ ತಪಸ್ಸನ್ನೇ ಆಚರಿಸಬೇಕು..ಆದರೆ ಮಕ್ಕಳೇ ಯೋಚಿಸಿ ನಿಮಗೆ ಇದನ್ನು ಭರಿಸುವ
ಶಕ್ತಿ ಇದೆಯೇ ?ಸಾಮಾನ್ಯ ಬುದ್ಧಿಮತ್ತೆಯ ನಿಮಗೆ - ಕಷ್ಟಪಟ್ಟು ಹಣ ಹೊಂದಿಸಿ ಮಗು ಒಳ್ಳೆಯ
ಅಂಕಗಳನ್ನು ಪಡೆಯಲಿ ಎಂದು ನಿರೀಕ್ಷಿಸುವ ಪಾಲಕರಿಂದ, ಒಳ್ಳೆಯ ಅಂಕಗಳನ್ನು ಪಡೆಯುವ
ಸಹಪಾಠಿಗಳಿಂದ, ಯಶಸ್ಸನ್ನು ಮಾತ್ರ ಗೌರವಿಸುವ ನಮ್ಮ ಸಮಾಜದಿಂದ ನಿಮ್ಮ ಮೇಲೆ ಹೇರಲ್ಪಡುವ
ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಬಹುದೇ? ಪಾಲಕರೇ... ನಿಮ್ಮ ಮಗುವನ್ನು ಗಮನಿಸಿ .ಹತ್ತನೇ
ತರಗತಿಯವರೆಗೆ ಸರಿಯಾಗಿ ಎರಡು ಗಂಟೆಗಳ ಏಕಾಗ್ರತೆಯಿಲ್ಲದ ಮಗು ಮುಂದಿನ ೨ ವರ್ಷ ೧೨ ಗಂಟೆಗಳ ಕಾಲ
ಓದಲು ಸಾಧ್ಯವೇ? ಗಣಿತ- ವಿಜ್ಞಾನವೆಂದರೆ ಚಳಿಜ್ವರ ಬರುವ ನಿಮ್ಮ ಮಗು ಈ ಕಡಲಿನಲ್ಲಿ ಈಜಬಲ್ಲನೇ? ಕಷ್ಟಪಟ್ಟು
ಓದಿದರೆ ಎಲ್ಲವೂ ಸಾಧ್ಯ ಎಂಬ ಮಾತಿದೆ .ಆದರೆ ಓದಲು ಆ ವಿಷಯದ ಮೇಲೆ ಆಸಕ್ತಿ ಇರಬೇಕಲ್ಲವೇ?
ಬಡಬಡಿಸುತ್ತಿದ್ದ
ನಾಲಿಗೆಯನ್ನೂ, ಓಡುತ್ತಿದ್ದ ಮನಸ್ಸನ್ನೂ ನಿಯಂತ್ರಿಸಿ ನಾನು ಆದಿತ್ಯನಿಗೆ ಹೇಳಿದೆ “ ಮಗೂ ಈ
ಪ್ರಪಂಚದಲ್ಲಿ ಭವಿಷ್ಯದಲ್ಲಿ ಯಶಸ್ಸೇ ಸಿಗಬಹುದು ಎಂದು ಖಚಿತವಾಗಿ ಹೇಳುವಂಥ ವೃತ್ತಿ ಯಾವುದೂ
ಇಲ್ಲ. ಆದರೆ ಸ್ವಲ್ಪ ಸಹನೆ, ಶ್ರದ್ಧೆ ಗಳಿದ್ದರೆ ಸಾಕಷ್ಟು ಹಣ ಸಂಪಾದಿಸಬಹುದಾದ ಅನೇಕ
ವೃತ್ತಿಗಳಿವೆ. ಪ್ರಾಮಾಣಿಕವಾಗಿ ದುಡಿದು ಸಂಪಾದಿಸಲು ಸಾಧ್ಯವಿರುವ ಎಲ್ಲ ವೃತ್ತಿಗಳೂ ಶ್ರೇಷ್ಠವೇ.
ಆತುರಪಡಬೇಡ. ಮೋದಿಯೆಂಬ ಮೋಡಿಗಾರನಿಂದಾಗಿ ಮುಂದಿನ ವರ್ಷಗಳಲ್ಲಿ ನಮ್ಮ ದೇಶದಲ್ಲೇ ಉದ್ಯೋಗರಂಗದಲ್ಲಿ
ಅಗಾಧ ಬದಲಾವಣೆಗಳಾಗುವ ನಿರೀಕ್ಷೆ ಇದೆ. ನಮ್ಮ ಬದುಕು ನಮಗೆ ಮಾತ್ರ ಸೇರಿದ್ದು. ಅನ್ಯರನ್ನು
ಮೆಚ್ಚಿಸಲು ಬದುಕಬೇಡ.ನಿನ್ನ ಬುದ್ಧಿಮತ್ತೆಗೆ ಅನುಗುಣವಾಗಿ ನಿನ್ನಿಷ್ಟದ ವಿಷಯವನ್ನು ಆರಿಸಿ
ಓದು.ಅಲ್ಲದೇ ಹಣವನ್ನೂ ಮೀರಿದ ಎಷ್ಟೋ ವಿಷಯಗಳು ಬದುಕಿನಲ್ಲಿವೆ... .ಧನಸಂಪತ್ತು ಖಂಡಿತವಾಗಿಯೂ
ಹಿರಿದು ಆದರೆ ನೆಮ್ಮದಿಯೆಂಬ ಸಂಪತ್ತು ಎಲ್ಲಕ್ಕಿಂತ ಮಿಗಿಲು ”
Subscribe to:
Comments (Atom)





