Thursday 29 December 2016

ಚಿನ್ನದೂರು - ಜೈಸಾಲ್ಮೇರು

 ಚಿನ್ನದೂರು - ಜೈಸಾಲ್ಮೇರು

      ದೃಷ್ಟಿ ಹಾಯಿಸಿದಷ್ಟು ದೂರ ಮರಳಿನದೇ ಸಾಮ್ರಾಜ್ಯ. ಅಲ್ಲಲ್ಲಿ ಜಾಲಿಮರಗಳ ಹಸಿರು. ನಟ್ಟನಡುವೆ ಗವ್ವೆಂದು ಮೈಚಾಚಿ ಮಲಗಿರುವ ಕಪ್ಪು ರಸ್ತೆಯ ಮೇಲೆ ಶರವೇಗದಲ್ಲಿ ಧಾವಿಸುವ ವಾಹನಗಳು.ಆ ಬಿರುಬಿಸಿಲಿನಲ್ಲೂ ತನಗೂ ಇದಕ್ಕೂ ಏನೂ ಸಂಬಂಧವಿಲ್ಲವೆಂಬಂತೆ ಒಡೆಯನೊಡನೆ ನಡೆಯುತ್ತಿರುವ ಒಂಟೆಗಳು... ಹೌದು ಈ ದೃಶ್ಯವೈಭವ ಅನಾವರಣಗೊಂಡದ್ದು ಜೈಸಲ್ಮೇರ್ ಎಂಬ ಸುವರ್ಣನಗರಿಯಲ್ಲಿ.
ಜೈಸಲ್ಮೇರ್ ಭಾರತದ ಪಶ್ಚಿಮದ ಗಡಿಯ ಕೊನೆಯ ನಗರ. ಥಾರ್ ಮರುಭೂಮಿಯ ನಟ್ಟನಡುವೆ ಇರುವ ಈ ನಗರದಿಂದ ೧೦೦ ಕಿ.ಮೀ ಸಾಗಿದರೆ ಭಾರತ-ಪಾಕ್ ಗಡಿ ಆರಂಭವಾಗುತ್ತದೆ.ವಿಶ್ವಪರಂಪರೆಯ ತಾಣವೆಂದು ಘೋಷಿತವಾಗಿರುವ ಜೈಸಲ್ಮೇರ್ ರಾಜಸ್ತಾನದ ರಾಜಧಾನಿ ಜೈಪುರದಿಂದ ೫೭೫ಕಿ.ಮೀ ಪಶ್ಚಿಮಕ್ಕಿದೆ. ಮರಳುಗಾಡಿನ ಈ ನಗರದಲ್ಲಿ  ಸಹಜವಾಗಿಯೇ ಮಳೆಯಿಲ್ಲ, ನೀರಿಲ್ಲ, ಕೃಷಿ- ಹೈನುಗಾರಿಕೆ ಅಪರೂಪ ,ದೊಡ್ಡ ಕೈಗಾರಿಕೆಗಳಿಲ್ಲ... ಆದರೆ ಈ ಜನರನ್ನು ನೋಡಿ. ಇಲ್ಲಗಳ ನೆಪವೊಡ್ಡಿ ಕೈಚೆಲ್ಲಿ ಕುಳಿತಿಲ್ಲ ಅವರು.ತಮ್ಮಲ್ಲಿರುವ ಮೈ ನವಿರೇಳಿಸುವ ಸಂಗೀತ-ನೃತ್ಯ ಪರಂಪರೆ,ಅದ್ಭುತವಾದ ಕಸೂತಿ ಕಲೆ ಮತ್ತು ಭಾರತದಲ್ಲಿ ಎಲ್ಲೂ ಕಾಣದ ವಿಶಾಲವಾದ ಮರುಭೂಮಿಯನ್ನೇ ಬಂಡವಾಳವಾಗಿರಿಸಿಕೊಂಡು ಪ್ರವಾಸೋದ್ಯಮವೆಂಬ ಏಕೈಕ ಆಸರೆಯನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಮರುಭೂಮಿಯಲ್ಲಿ ಟೆಂಟುಗಳನ್ನು ನಿರ್ಮಿಸಿ ಅಲ್ಲೊಂದು ದಿನ ಕಳೆದು ಸಂತಸಪಡಿ ಎಂದು ಪ್ರವಾಸಿಗರನ್ನು ಆದರದಿಂದ ಸ್ವಾಗತಿಸುತ್ತಾರೆ.
                                                      ಟೆಂಟ್ ಹೋಟೇಲ್
                 
            ಅಚ್ಚಬಿಳಿಬಟ್ಟೆಯಿಂದ ,ದೃಢವಾದ ಬಿಳಿಹಗ್ಗ ಬಳಸಿ ನಿರ್ಮಿಸಿದ ಟೆಂಟುಗಳು ಜೈಸಲ್ಮೆರ್ ಪ್ರವೇಶಿಸುತ್ತಿದ್ದಂತೆಯೇ ನಿಮಗೆದುರಾಗುತ್ತವೆ. ಊಟ-ತಿಂಡಿಯ ಉಪಚಾರವೂ ಇರುವ ಟೆಂಟ್ ಹೋಟೆಲ್ ಎಂದು ಕರೆಯಬಹುದಾದ ಇಲ್ಲಿ ವೃತ್ತಾಕಾರದಲ್ಲಿ ಸುಮಾರು ೨೦ ರಿಂದ ೩೦ ಟೆಂಟುಗಳಿರುತ್ತವೆ. ಸಿಮೆಂಟಿನ ಅಡಿಪಾಯದ ಮೇಲೆ ಬಟ್ಟೆಯೇ ಗೋಡೆಗಳಾಗಿ ಕಟ್ಟಿರುವ ಪ್ರತಿ ಟೆಂಟಿನ ನಡುವೆ ಐದು ಅಡಿಯ ಅಂತರ. ಮುಂದುಗಡೆ ಎರಡು ಕುರ್ಚಿಗಳಿರಿಸಬಹುದಾದ ಪುಟ್ಟ ಜಗಲಿ. ಬಟ್ಟೆಯ ಬಾಗಿಲನ್ನು ಸರಿಸಿ ಒಳಗಡೆ ಹೋದರೆ ಅಚ್ಚುಕಟ್ಟಾಗಿ ಎರಡು ಮಂಚಗಳು, ಒಂದು ಮೇಜು, ಒಂದು ದೀಪ, ಟೇಬಲ್ ಫಾನ್ ಗಳ ಸ್ವಾಗತ. ಮತ್ತೊಂದು ಬಟ್ಟೆಯ ಬಾಗಿಲನ್ನು ಸರಿಸಿ ಸ್ನಾನಕ್ಕೆ- ಶೌಚಕ್ಕೆ ವ್ಯವಸ್ಥೆ! ಅಕ್ಟೋಬರ್ ತಿಂಗಳಲ್ಲಿ ನಾನು ಹೋದಾಗ ಅತ್ಯಂತ ಹಿತಕರ ಹವೆ ಇತ್ತು. ಮಧ್ಯಾಹ್ನ ರುಚಿಯಾದ ರಾಜಸ್ತಾನೀ ಶೈಲಿಯ ಊಟ ಮುಗಿಸಿ ಹಾಗೆ ಅಡ್ಡಾದೆ.ಮಂದವಾದ ಗಾಳಿ ಮುದನೀಡುತ್ತಿತ್ತು. ನಿದ್ದೆಯಿಂದ ಎದ್ದಾಗ ಸಾಯಂಕಾಲದ ಇಳಿಬಿಸಿಲು ಕಚಗುಳಿ ಇಡುತ್ತಿತ್ತು. ಹಾಗೇ ಹೊರಗಡೆ ಬಂದಾಗ ಒಂಟೆಗಳ ಒಡೆಯರು ಪ್ರವಾಸಿಗರಿಗಾಗಿ ಕಾಯುತ್ತಿದ್ದರು.ಇನ್ನೇಕೆ ತಡ ಎಂದುಕೊಂಡು ಪ್ರವಾಸಿಗಳ ಗುಂಪಿನೊಡನೆ ಒಂಟೆಯ ಬೆನ್ನೇರಿ ಹೊರಟೇಬಿಟ್ಟೆ. ಓಹ್... ಆ ಸುಖಕರ ಬಿಸಿಲಿನಲ್ಲಿ, ಸುಯ್ಯೆಂದು ಬೀಸುವ ಗಾಳಿಯೊಡನೆ, ಒಂಟೆ ಗಂಭೀರವಾಗಿ ಮರಳಿನ ದಿಬ್ಬಗಳ ಮೇಲೆ ನಡೆಯುತ್ತಿದ್ದರೆ ಮಜವೋ ಮಜಾ.. ಸುಮಾರು ದೂರ ಪ್ರವಾಸಿಗರನ್ನು ಕರೆದೊಯ್ದ  ಒಂಟೆಗಳ ಮಾಲೀಕರು ಪ್ರಶಸ್ತವಾದ ಸ್ಥಳವೊಂದರಲ್ಲಿ ಗುಂಪನ್ನು ಇಳಿಸಿದರು. ಆ ಎತ್ತರವಾದ ದಿಬ್ಬದ ಮೇಲೆ ಕಾಲು ಚಾಚಿ ಕುಳಿತುಕೊಂಡು, ಸೂರ್ಯ ದಿನದಪಯಣವನ್ನು ಮುಗಿಸಿ ಮರಳಸಮುದ್ರದಲ್ಲಿ ಮರೆಯಾಗುವ ಆ ಅದ್ಭುತದೃಶ್ಯವನ್ನು ನಾವೆಲ್ಲಾ ಕಣ್ತುಂಬಿಕೊಂಡೆವು. ಸ್ವಲ್ಪಹೊತ್ತು ಮರಳಲ್ಲಿ ಅಡ್ಡಾಡಿ ಟೆಂಟಿಗೆ ಮರಳಿದೆವು. 
ಸರಿ ರಾತ್ರಿಯಾಗುತ್ತಿದ್ದಂತೆಯೇ ಮಧ್ಯದಲ್ಲಿ ನಿರ್ಮಿಸಿದ ಬಯಲು ರಂಗಮಂದಿರದಲ್ಲಿ ಕಿನ್ನರಲೋಕವೊಂದು ಸೃಷ್ಟಿಯಾಯಿತು. ಕಲಾವಿದರ ತಂಡವೊಂದು ರಾಜಸ್ತಾನೀ ಜಾನಪದ ಸಂಗೀತ - ನೃತ್ಯದ ರಸದೌತಣವನ್ನು ನಮಗೆ ಉಣಬಡಿಸಿತು. ರಾತ್ರಿ ರುಚಿಕಟ್ಟಾದ ಊಟಮುಗಿಸಿ ಟೆಂಟಿನ ಜಗಲಿಯಲ್ಲಿ ಕುಳಿತುಕೊಂಡರೆ ಸುತ್ತಲೂ ನೀರವ ಮೌನ.. ಆಕಾಶದ ತುಂಬೆಲ್ಲಾ ಅಸಂಖ್ಯಾತ ತಾರೆಯರು... ಸುಖವಾಗಿ ಬೀಸುವ ಗಾಳಿ... ಯಾವುದೋ  ಬೇರೆಯೇ ಲೋಕದಲ್ಲಿರುವ ಅನುಭವ...
                                                    ಒಂಟೆಯ ಬೆನ್ನೇರಿ.


ಜೈಸಲ್ಮೆರ್, ಬಂದೇಜ್/ ಬಾಂಧನಿ  ಸೀರೆಗಳ ತವರೂರು. ಬೇಸಗೆಯಲ್ಲಿ ಇಲ್ಲಿ ಹೊರಗೆ ಕಾಲಿಡಲಾರದಂಥ ಬಿರುಬಿಸಿಲು.ಸಮಯ ಕಳೆಯಲು ಇಲ್ಲಿನ ಮಹಿಳೆಯರು ಆರಂಭಿಸಿದ ಹವ್ಯಾಸ ಇಂದು ಬೃಹತ್ ಉದ್ದಿಮೆಯಾಗಿ ಬೆಳೆದು ನಿಂತಿದೆ. ಬಿಳಿಬಟ್ಟೆಯನ್ನು ಅಲ್ಲಲ್ಲಿ ದಾರದಿಂದ ಕಟ್ಟಿ ಬಣ್ಣಗಳಲ್ಲಿ ಅದ್ದಿ ತೆಗೆದಾಗ ದಾರಕಟ್ಟಿದ ಜಾಗ ಬಿಳಿಯಾಗೇ ಉಳಿದು ಅದ್ದಿದ ಬಣ್ಣದ ನಡುವೆ ಸುಂದರ ಚಿತ್ತಾರ ಮೂಡಿಸುತ್ತದೆ. ಇಂಥ ಸೀರೆಗಳು, ಡ್ರೆಸ್ ಮೆಟೀರಿಯಲ್ ಗಳು ಕೊಳ್ಳುಗರನ್ನು ಮಂತ್ರಮುಗ್ಧಗೊಳಿಸುತ್ತವೆ.ಅಲ್ಲದೆ ಮೃದುವಾದ ಹತ್ತಿಬಟ್ಟೆಯ ಹೊದಿಕೆ - ಹಾಸುಗಳು, ಒಂಟೆಯ ಉಣ್ಣೆಯಿಂದ ತಯಾರಿಸಿದ ಅತ್ಯಂತ ಹಗುರವಾದ[೧೦೦ಗ್ರಾಮ್ ತೂಕ] ರಜಾಯಿಗಳು ,ಬಣ್ಣದ ಬಟ್ಟೆತುಂಡುಗಳನ್ನು ಕಲಾತ್ಮಕವಾಗಿ ಜೋಡಿಸಿ ತಯಾರಿಸಿದ ಕೌದಿಗಳನ್ನು ನೋಡಿದವರ ಜೇಬು ಖಾಲಿಯಾಗುವುದು ನಿಶ್ಚಿತ.ಜೊತೆಗೆ ಅಲಂಕಾರಿಕ ಬಿಳಿತಗಡಿನ ಕಿವಿಯೋಲೆಗಳು,ಡಾಬು,ಬಳೆಗಳ ಥಳಕಿನ ಜಗತ್ತು ಕಣ್ಣುಕುಕ್ಕುತ್ತದೆ. ಇಂಥ ವಸ್ತುಗಳನ್ನು ಬೆಂಗಳೂರಿನಲ್ಲಿ ಕಂಡಿದ್ದ ಎರಡರಷ್ಟು ದುಡ್ಡು ಕೊಟ್ಟು ಕೊಂಡಿದ್ದ ನನಗೆ  ಇಲ್ಲಿ ಇವುಗಳ ಬೆಲೆ ಕೇಳಿ ಅಚ್ಚರಿಯಾಯಿತು. ನೀವು ಶಾಪಿಂಗ್ ಖಯಾಲಿಯವರಾದರೆ ಜೈಸಲ್ಮೇರ್ ಗೆ ಹೋಗುವಾಗ ಖಾಲಿ ಚೀಲವನ್ನೂ, ಕೈತುಂಬಾ ಹಣವನ್ನು ಒಯ್ಯಲು ಮರೆಯದಿರಿ.ನಿಮ್ಮ ಹಣಕ್ಕೆ ಖಂಡಿತ ಮೋಸವಿಲ್ಲ.

ಇನ್ನೊಂದು ವಿಷಯ ಗೊತ್ತೇ ?ಇಲ್ಲಿನ ಜನ ಕಲ್ಲನ್ನು ಕೂಡ ಮಾರಬಲ್ಲ ಚಾಣಾಕ್ಷರು.’ ಹಬುರ್’ ಎಂಬ ಸ್ಥಳೀಯವಾಗಿ ಸಿಗುವ ಕಂದುಬಣ್ಣದಕಲ್ಲು ವಿಶ್ವಪ್ರಸಿದ್ಧ. ಈ ಕಲ್ಲು ಚೂರನ್ನು ಹಾಲಿನಲ್ಲಿ ಹಾಕಿದರೆ ಕೆಲ ಗಂಟೆಗಳಲ್ಲಿ ಮೊಸರು ಸಿದ್ಧ![ ಇದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳಿಂದ ಪ್ರತಿಪಾದಿಸಲ್ಪಟ್ಟಿದೆ- ವಿವರಗಳಿಗೆ- www.iisc.ernet.in/currsci/sep102005/729.pdf.].ಇದನ್ನು ದಿನವೂ ಕುಡಿಯುವ ನೀರಿನಲ್ಲಿ ಹಾಕಿ[ ಅಥವಾ ಈ ಲೋಟದಲ್ಲಿ ನೀರು ಹಾಕಿ] ೮ ಗಂಟೆಗಳ ಬಳಿಕ ಕುಡಿಯಿರಿ. ಮೂರುತಿಂಗಳಲ್ಲಿ ಸಂಧಿವಾತ, ಕೊಲಸ್ಟರಾಲ್, ಬಿ.ಪಿ ಗಳಿಂದ ಮುಕ್ತರಾಗಿ! ಹೀಗೆ ನಾನಾ ಗುಣವಿಶೇಷಗಳನ್ನು ಹೊತ್ತ ಹಬುರ್ ನ ಲೋಟಗಳು, ಪಾತ್ರೆಗಳು,ಪಿರಾಮಿಡ್ ಗಳು ಇಲ್ಲಿ ಲಭ್ಯ. ನಾನು ಕೂಡಾ ಲೋಟವೊಂದನ್ನು ತಂದಿದ್ದೇನೆ. ಮೊಸರಾಗುವುದು ನಿಜ.ಉಳಿದ ಈ ಕಾಯಿಲೆಗಳು ನನ್ನ ಸ್ನೇಹಿತರಲ್ಲ. ಆದ್ದರಿಂದ ಈ ಬಗ್ಗೆ ಏನೂ ಹೇಳಲಾರೆ.
                              ಮನಮೋಹಕ ಕೌದಿಗಳು
       
              

                                                    ಹಬುರ್ ಕಲ್ಲಿನಲೋಟ


ಜೈಸಲ್ಮೇರ್ ನ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ’ತ್ರಿಕೂಟಗೃಹ’ ಕೋಟೆ. ರಾಜಾ ಜಯಸಾಲನಿಂದ ೧೧೫೬ರಲ್ಲಿ ನಿರ್ಮಿತವಾದ ಈ ಕೋಟೆಯಿಂದಾಗಿಯೇ  ಜೈಸಲ್ಮೇರ್ ಎಂಬ ಹೆಸರು ಬಂದಿದೆ. ಮೇರು ಎಂದರೆ ಬೆಟ್ಟ. ಬೆಟ್ಟವೊಂದರ ಮೇಲೆ ಜಯಸಾಲನಿಂದ ಕಟ್ಟಲ್ಪಟ್ಟ ಕೋಟೆಯಿರುವ ಸ್ಥಳ ’ಜಯಸಾಲಮೇರು”  ಕಾಲಕ್ರಮೇಣ ಜೈಸಲ್ಮೇರ್  ಆಯಿತು. ಸಂಪೂರ್ಣವಾಗಿ ಹಳದಿಕಲ್ಲಿನಿಂದ ಕಟ್ಟಿದ ಈ ಕೋಟೆ ಭವ್ಯವಾಗಿದೆ.ಅರಮನೆಯನ್ನು ಸುಸ್ಥಿತಿಯಲ್ಲಿ ರಕ್ಷಿಸಲಾಗಿದೆ. ಒಳಗೆ ಪ್ರವೇಶಿಸಿದರೆ ಮುಂದಿನ ಬಾಗಿಲು ಕಾಣದಂತೆ ಜಿಗ್ ಜಾಗ್ ಮಾದರಿಯ ನಿರ್ಮಾಣದ ಹಿಂದೆ ಶತ್ರು ಅಕಸ್ಮಾತ್ ಪ್ರವೇಶಿಸಿದರೂ ಈ ಚಕ್ರವ್ಯೂಹದಿಂದ ಹೊರಬರಲಾಗದೇ ಕಂಗಾಲಾಗಲಿ ಎಂಬ ಉದ್ದೇಶವಿದೆ. ಭಾರತದ ಇತಿಹಾಸದಲ್ಲೇ ಯಾವುದೇ ರಾಜನಿಂದ ಆಕ್ರಮಣಕ್ಕೆ ಒಳಗಾಗದ ಕೋಟೆ ಎಂಬ ಹೆಗ್ಗಳಿಕೆ ಇದರದ್ದು.[ ಹನಿನೀರಿಲ್ಲದ ಈ ಪ್ರದೇಶದ ಮೇಲೆ ಯುದ್ಧಸಾರುವ ಭಂಡಧೈರ್ಯವನ್ನು ಯಾವ ಮೂರ್ಖರಾಜ ತಾನೇ ಮಾಡುತ್ತಾನೆ ಹೇಳಿ!]ಕೋಟೆಯ ಒಳಗೆ ನಿರ್ಮಿತವಾಗಿರುವ ಐದು ಬಾವಿಗಳಲ್ಲಿ ನೀರು ಕಂಡು ಆಶ್ಚರ್ಯವಾಯಿತು.ಈಗ ಬೆಳೆಯುತ್ತಿರುವ ಜನಸಂಖ್ಯೆಗೆ ಈ ಬಾವಿಗಳ ನೀರು ಸಾಲದಿರುವುದರಿಂದ ದೂರದ ಹಿಮಾಲಯದಿಂದ ಇಂದಿರಾಗಾಂಧಿ ಕಾಲುವೆಯ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಒಟ್ಟು ಜನಸಂಖ್ಯೆಯ ಕಾಲು ಭಾಗದಷ್ಟು ಜನ ಈಗಲೂ ಕೋಟೆಯೊಳಗೇ ವಾಸಿಸುತ್ತಿದ್ದಾರೆ. ಕೋಟೆಯೊಳಗೆ ಪ್ರವೇಶಿಸಿ ರಾಜನ ಅರಮನೆಯನ್ನು ನೋಡಿಕೊಂಡು ತುದಿಯನ್ನು ತಲುಪಿ  ದೃಷ್ಟಿಹಾಯಿಸಿದರೆ ಚಿನ್ನದ ಮರಳಿನ ನಡುವೆ ಚಿನ್ನದ ಬಣ್ಣದ ಕಲ್ಲುಕಟ್ಟಡಗಳಿಂದ ಕಂಗೊಳಿಸುವ ’ಗೋಲ್ಡನ್ ಸಿಟಿ’ ಎಂಬ ಹೆಸರು ಹೊತ್ತ ಜೈಸಲ್ಮೇರ್ ನ ವಿಹಂಗಮ ನೋಟವನ್ನು ಸವಿಯಬಹುದು.
        ಕೋಟೆಯ ಪಾರ್ಶ್ವದಿಂದ ಕಂಡ ನೋಟ
                                                                                      
 

ಜೈಸಲ್ಮೇರ್ ಗೆ ಉತ್ತಮವಾದ ಸಂಪರ್ಕವ್ಯವಸ್ಥೆ ಇದೆ. ೩೦೦ ಕಿ.ಮಿ ದೂರದ ಜೋಧ್ ಪುರದ ವರೆಗೆ ವಿಮಾನದಲ್ಲಿ ಹಾರಿ ನಂತರ ರೈಲು-ಬಸ್ಸುಗಳಲ್ಲಿ ಹೋಗಬಹುದು . ಅಲ್ಲದೇ ಎಲ್ಲ ಪ್ರಮುಖ ನಗರಗಳಿಂದ ರೈಲು-ಬಸ್ ವ್ಯವಸ್ಥೆ ಇದೆ. ಇನ್ನೂ ಸ್ಥಳೀಯ ಸಂಸ್ಕೃತಿ ಜೀವಂತವಾಗಿರುವ, ಮರುಭೂಮಿಯ ಜೀವನದ ಅನುಭವವನ್ನು ಕೊಡುವ ಜೈಸಲ್ಮೇರ್ ಗೆ ಒಮ್ಮೆ ಭೇಟಿ ಕೊಡುವುದನ್ನು ಮರೆಯಬೇಡಿ.



Tuesday 6 September 2016

Tasmai shri gurave nama: - Teacher! I salute you

Lunch bell rang spreading a feeling of relief all around. I opened my lunch box. Cold upma loaded in the early morning stared at me reminding me that today is Sankashta Chaturthi*, my monthly fasting day. I glanced at my class 5 ‘E’ .Those bundles of energy were hurriedly emptying the lunch boxes. They wanted to make use of the golden time to just run around in the corridor, meet their bus friends from other classes, secretly exchange tattoos, talk about video-games, or plead the teacher for permission to go to the canteen- oh… what not? A colourful world with wonderful pleasures. Lucky souls, I thought.

Suddenly I noticed Abdul sitting in the third bench looking lost.
 I called to him and asked “Abdul did you have your lunch?” .
“No ma'am, I am fasting . It is Ramzan now” 
“Oh yes! But Ramzan fasting is for elders. You are too young.”
“Ma'am , Ramzan fasting is for all. My mother says we will understand the pain of the poor people only when we observe Roza. I eat only at dusk and at dawn for one month.” He spoke with beaming eyes and firm conviction.

As I continued with eating my upma, Abdul asked me “Ma'am, do you observe fast?”
I said “Yes, why not? I am fasting today. Today is Sankashta Chaturthi according to the  Indian calendar. For the whole day I observe fast. I mean.. I should not eat rice today. I eat dinner only after visiting the temple  you know… and…” .
Abdul interrupted, “But Ma'am, you are eating lunch now. This is not fasting.” 

He soon disappeared. The 6th period started and I moved to 7 C.

But his accusative eyes started following me all the time- in the bus, at home, at the dining table, and even in my dreams at times with a loud laugh. “Ma’am are you joking? I think you don’t know the meaning of fasting”. I brushed him aside from my thoughts. “Shut up! Fasting is about change of food. It is my culture. Who cares, my idea of fasting is different anyway…”

However, by the next Sankashta Chaturthi, I was tired of justifying myself. I decided to accept the challenge and make a difference in my lifestyle. It started with fruits and water. From dawn to night I managed with two bananas and plenty of water. I never felt tired. Next day morning when I woke up, I felt as if I were flying. With a holiday to my digestive system, it got toned up and there was pure pleasure in my mind. Now with each passing month  I eagerly wait for Sankashta Chaturthi my  fasting day.

Thank you Abdul, my teacher who taught me how to fast, who showed me the road to the precious wealth called HEALTH.

Every child is ‘special’ and each day in a teacher’s life is ‘extra special’ because it is full of countless number of Abduls armed with unique lessons.
  

*Sankashta Chaturthi is a day dedicated to Lord Ganesha. It is the 4th day after the full moon day of each lunar month . Hindus offer prayers to the lord and observe fast during the day, and will have dinner after seeing the moon at night. 



ಓ.. ಗಣಿತವೇ ... ನೀನೆಂಥ ನಿರ್ದಯಿ ?




ಮಾನ್ಯ ಪ್ರಾಚಾರ್ಯರಿಗೆ,

ನಿಮ್ಮ ಶಾಲೆಯ ೯ನೇ ತರಗತಿಯ ಡಿ ವಿಭಾಗದಲ್ಲಿ ಓದುತ್ತಿರುವ ವಿನಯ್ ರಾವ್ ನ ತಂದೆಯಾದ ನಾನು ವಿನಾಯಕ ರಾವ್ ಕೆಲವು ವಿಚಾರಗಳನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತಿದ್ದೇನೆ. ನನ್ನ ಮಗನು ಗಣಿತದಲ್ಲಿ ಅತಿ ಕಡಿಮೆ ಅಂಕಗಳನ್ನು ಪಡೆಯುತ್ತಿದ್ದಾನೆ. ಇದರಿಂದ ಅವನಿಗೆ ಶಾಲೆಗೆ ಬರುವ ಉತ್ಸಾಹವೇ ಇಂಗಿಹೋಗಿದೆ. ಅಲ್ಲದೆ ಅವನ ಗಣಿತಶಿಕ್ಷಕಿಯಿಂದ ಮಾನಸಿಕ ಒತ್ತಡಕ್ಕೂ ಒಳಗಾಗಿದ್ದಾನೆ. ನಿನ್ನೆ ವಿನಯನು ಗಣಿತದ ಮನೆಗೆಲಸ ಮಾಡಲಿಲ್ಲವೆಂದು ಅವರು ನೆಲದ ಮೇಲೆ ಅವನನ್ನು ಕುಳ್ಳಿರಿಸಿ ಲೆಕ್ಕಗಳನ್ನು ಮಾಡಿಸಿದ್ದರಿಂದ ಅವನಿಗೆ ಭಾರೀ ಅವಮಾನವಾಗಿದೆ. ಆದ್ದರಿಂದ ನೀವು ಆ ಗಣಿತಶಿಕ್ಷಕಿಯನ್ನು ಬದಲಿಸಿ ಅಥವಾ ನಾನು ವಿನಯನನ್ನು ಬೇರೆ ಶಾಲೆಗೆ ಸೇರಿಸಲು ನಿರ್ಧರಿಸಿದ್ದೇನೆ.
                                                                               ಇತಿ ತಮ್ಮ ವಿಶ್ವಾಸಿ

೯’ಡಿ’ ವಿಭಾಗದ ಕ್ಲಾಸ್ ಟೀಚರ್ ಆದ ನನ್ನೆದುರು ಈ ಪತ್ರವನ್ನು ಒಗೆದು ವಿಜಯದ ನಗೆ ಬೀರಿ ಹೋದ ವಿನಯನನ್ನು ಅಸಹಾಯಕತೆಯಿಂದ ದಿಟ್ಟಿಸುವುದನ್ನು ಬಿಟ್ಟರೆ ನಾನು ಬೇರೇನೂ ಮಾಡಲಾಗಲಿಲ್ಲ. ಪತ್ರವನ್ನು ತಲುಪಿಸಿ ಹೊರಬಂದ ನನ್ನ ಕಣ್ಮುಂದೆ ಮಕ್ಕಳ ಬಗ್ಗೆ ಅಪಾರ ಕಳಕಳಿಯುಳ್ಳ , ಸೊಗಸಾಗಿ ಗಣಿತವನ್ನು ಬೋಧಿಸುವ ಆ ಶಿಕ್ಷಕಿಯೂ, ಮಗನ ಮೇಲಿನ ಕುರುಡುಪ್ರೇಮದಿಂದಲೋ ಅಥವಾ ಬೇರೆ ಒತ್ತಡದಿಂದಲೋ ಪತ್ರ ಬರೆದ ತಂದೆಯೂ, ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳೂ, ಇಂತಹ ಸುದ್ದಿಗಾಗಿ ಹಾತೊರೆಯುವ ಮಾಧ್ಯಮಗಳೂ ಸರದಿಯ ಸಾಲಿನಲ್ಲಿ ಮೆರವಣಿಗೆ ನಡೆಸಿದವು. ಕೆಲವೇ ನಿಮಿಷಗಳಲ್ಲಿ ಪ್ರಿನ್ಸಿಪಾಲರ ಕೊಠಡಿಯಿಂದ ಸಪ್ಪೆ ಮೋರೆ ಹಾಕಿಕೊಂಡು ಹೊರಬಂದ ಆ ನನ್ನ ಸಹೋದ್ಯೋಗಿಯನ್ನು ಕಂಡು ಮನಸ್ಸು ರಾಡಿಯಾಯಿತು.

ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ನಮಗೆ ವಾಮನಡೋಂಗ್ರೆ ಎಂಬ ಗಣಿತಶಿಕ್ಷಕರಿದ್ದರು. “ತೆಗೆ ತೆಗೆ ಗಣಿತದ ನೂತನ ಲೋಕ” ಎನ್ನುತ್ತಾ ತರಗತಿಗೆ ಬರುತ್ತಿದ್ದ ಅವರನ್ನು ಕಂಡೊಡನೆ ನನಗೆ ತಳಮಳ ಆರಂಭ.ಅವರೇನೋ ಚೆನ್ನಾಗಿಯೇ ಹೇಳಿಕೊಡುತ್ತಿದ್ದರು. ಆದರೆ ಬೇರೆ ವಿಷಯಗಳಲ್ಲಿ ಜಾಣೆಯಾಗಿದ್ದ ನನಗೆ ವೇಗವಾಗಿ ಲೆಕ್ಕಗಳನ್ನು ಬಿಡಿಸಲು ಆಗುತ್ತಿರಲಿಲ್ಲ. ಅವರು ಬೋರ್ಡನ ಮೇಲೆ ಲೆಕ್ಕವನ್ನು ಬರೆದು ತಿರುಗುತ್ತಿದ್ದಂತೆಯೇ ನಮ್ಮ ತರಗತಿಯಲ್ಲಿದ್ದ ವಿವೇಕಾನಂದ ಜೋಶಿ, ಜೈಶಂಕರ ಮರಾಠೆ, ಸುಧಾಕರ ಪೂಜಾರಿ ಇತ್ಯಾದಿಯಾದ ಅನೇಕ ಬೃಹಸ್ಪತಿಗಳು ಸಾರ್.... ಬಂತು ....ಉತ್ತರ ಬಂತು...  ಅಂತ ಗೆಲುವಿನ ಕೇಕೆ ಹಾಕುತ್ತಿದ್ದರು. ನನಗಂತೂ ಆ ಕ್ಷಣದಲ್ಲಿ ಅವರನ್ನು ಕಂಡರೆ ಕೆಂಡದಂಥ ಕೋಪದ ಜೊತೆ ಅಳುವೂ ಬರುತ್ತಿತ್ತು. ಅತ್ಯಂತ ಸ್ನೇಹಪರರೂ, ಹಸನ್ಮುಖಿಗಳೂ ಆದ ಆ ನನ್ನ ಸಹಪಾಠಿಗಳು ಗಣಿತದ ತರಗತಿಯಲ್ಲಿ ಮಾತ್ರ ಅಕ್ಷರಶ: ನನ್ನ ಶತ್ರುಗಳು!!. ಮುಂದೆ ಹೈಸ್ಕೂಲಿನಲ್ಲೂ ವನಮಾಲಾ ಟೀಚರ್ ಎಂಬ ಕರುಣಾಮೂರ್ತಿಯಾದ ಶಿಕ್ಷಕಿ ಇದ್ದರೂ ಯಾಕೋ ಗಣಿತವೆಂದರೆ ಕಷ್ಟ-ಭಯ.ಜೊತೆಗೆ ರೋಶನ್ ಪಾಯಿಸ್, ಜಗನ್ನಾಥ ಶೇರಿಗಾರ್, ಸಂಧ್ಯಾ ಕಾಮತ್ ಮುಂತಾದ ಗಣಿತಬ್ರಹ್ಮರು ಕ್ಷಣಮಾತ್ರದಲ್ಲಿ ಲೆಕ್ಕ ಬಿಡಿಸಿ ನನ್ನನ್ನು ಅಸೂಯೆ-ದು:ಖಗಳೆಂಬ ನರಕಕ್ಕೆ ತಳ್ಳುತ್ತಿದ್ದರು. ನಮ್ಮ ಕ್ಲಾಸಿನ ಹೆಚ್ಚಿನ ಮಕ್ಕಳು ಗಣಿತದಲ್ಲಿ ಫೇಲ್ ಆಗಿ ಅಳುತ್ತಿದ್ದರೆ, ನಮ್ಮ ಜೊತೆ ಅಸಹಾಯಕ ಟೀಚರ್ ಕೂಡಾ ಭಾಗಿಯಾಗುತ್ತಿದ್ದರು.
ಕಾಲ ಉರುಳಿದೆ.ಆದರೆ ಗಣಿತವೆಂಬ ಹುಲಿ ಇಂದೂ ಗರ್ಜಿಸುತ್ತಲೇ ಇದೆ. ಸರಿ...ಗರ್ಜನೆಯಡಗಿಸಲು ಸುಸಜ್ಜಿತಶಾಲೆ - ಪರಿಣತಶಿಕ್ಷಕರೇ ಪರಿಹಾರವೆಂದಾದರೆ ನಗರದ ಅತ್ಯಾಧುನಿಕ ಶಾಲೆಗಳಲ್ಲಿ ಗಣಿತ ಸಮಸ್ಯೆಯಾಗಬಾರದಾಗಿತ್ತು. ಯಾಕೆಂದರೆ ಇಲ್ಲಿ ವೈಜ್ಞಾನಿಕ ನೆಲೆಯಲ್ಲಿ ಪಾಠಗಳು ನಡೆಯುತ್ತವೆ.ಇಲ್ಲಿನ ಮಕ್ಕಳಿಗೆ ವಿದ್ಯಾವಂತ ಪಾಲಕರಿದ್ದಾರೆ, ಸಹಾಯಕ್ಕೆ ಟ್ಯೂಶನ್ ಕ್ಲಾಸ್ ಗಳಿವೆ, ಅಂತರ್ಜಾಲವಿದೆ. ಆದರೂ ಇಲ್ಲಿ ಇದೊಂದು ಭೀಕರಸಮಸ್ಯೆ. ಇಂಥ ಒಂದು ಶಾಲೆಯಲ್ಲಿ ಕೆಲಸ ಮಾಡುವ ನನ್ನ ಅನುಭವವನ್ನು ಈಗಾಗಲೇ ನೀವು ಓದಿದ್ದೀರಿ.ಇರಲಿ.. ನಗರದ ಪಾಲಕರಂತೂ ಕೆಲಸದ ಮಧ್ಯೆ ಮಕ್ಕಳಿಗೆ ಗಮನಕೊಡದವರು, ಸದಾ ಬಿಜಿ ಜನ... ಅದಕ್ಕೇ ಹೀಗೆ... ಎಂದಾದರೆ ಹಳ್ಳಿಗಳಲ್ಲಿ ತಂದೆ-ತಾಯಿ , ಅಜ್ಜ- ಅಜ್ಜಿಯ ಪ್ರೀತಿಯಲ್ಲಿ ಬೆಳೆಯುತ್ತಾ ಒತ್ತಡವಿಲ್ಲದೆ ಬದುಕುವ ಮಕ್ಕಳಿಗೂ ಗಣಿತ ಕೈಲಾಗದು.ಅವರಿಗೂ ಅದೊಂದು ಘೋರನರಕ.
                                   
ನನ್ನ ಮಿತ್ರರೊಬ್ಬರ ಪ್ರಕಾರ ಗಣಿತದ ಸ್ವರೂಪವೇ ಅರ್ಥಮಾಡಿಕೊಳ್ಳಲು ಕಠಿಣ. ಗಣಿತವನ್ನು ಬಿಡಿಸಲು ತರ್ಕಬದ್ಧ ಚಿಂತನೆಯ ಅವಶ್ಯಕತೆ ಇದೆ. ಜನ್ಮದತ್ತವಾಗಿ ಬರಬೇಕಾದ ಬುದ್ಧಿವಂತಿಕೆ ಬೇಕು.ಇಂಥ ಕೆಲವೇ ಪುಣ್ಯವಂತರಿಗೆ ಗಣಿತವೊಂದು ಗೆಳೆಯ.ಆದರೆ ಭಾವನಾತ್ಮಕ ಸ್ವಭಾವದ ವಿದ್ಯಾರ್ಥಿಗಳಿಗೆ,ಸಾಮಾನ್ಯ ಬುದ್ಧಿಮತ್ತೆಯವರಿಗೆ ಲೆಕ್ಕವನ್ನು ಓದಿ ಅರ್ಥ ಮಾಡಿಕೊಂಡು ,ಗೋಜಲನ್ನು ಬಿಡಿಸಲು ಮೆದುಳು ಸಹಕರಿಸುವುದಿಲ್ಲ. ಕೆಲವು ಲೆಕ್ಕಗಳನ್ನು ಮತ್ತೆ ಮತ್ತೆ ಓದಿ ಮಾಡಿದರೂ,ಹೊಸ ಸಮಸ್ಯೆ ಬಂದಾಗ ಯೋಚಿಸುವಲ್ಲಿ ಇವರು ಸೋಲುತ್ತಾರೆ. ಅವರಿಗದು ಬರುಡು,ರಸಹೀನ ಎನಿಸುತ್ತದೆ. ಆದರೆ ನಮ್ಮ ವ್ಯವಸ್ಥೆ ಅವರನ್ನು ಬಿಡಬೇಕಲ್ಲ.... ನಮ್ಮ ಪಠ್ಯಕ್ರಮದಂತೆ ಹತ್ತನೇ ತರಗತಿಯವರೆಗೆ ಗಣಿತದಿಂದ ಬಿಡುಗಡೆ ಇಲ್ಲ. ಮುಂದೆ ಕೈತುಂಬ ಸಂಬಳ ಬರುವ ಕೆಲಸಗಳಿಗೆ ಸೇರಲು ಓದಬೇಕಾದ ಕೋರ್ಸ್ಗಳಿಗೆ ಸಿ.ಇ.ಟಿ ಯನ್ನು ಪಾಸ್ ಮಾಡಬೇಕು. ಅದಕ್ಕೆ ಗಣಿತ ಬೇಕೇ ಬೇಕು.... ಅಂತೂ ಈ ಭಾವನಾಜೀವಿಗಳೆಂಬ ನತದೃಷ್ಟರಿಗೆ ಅಥವಾ ಸರಳವಾದ ಭಾಷೆಯಲ್ಲಿ ದಡ್ಡರಿಗೆ ಗಣಿತ ಪೆಡಂಭೂತವಾಗಿ ಕಾಡುತ್ತಲೇ ಇರುತ್ತದೆ.
ಸಮಸ್ಯೆಯ ಇನ್ನೊಂದು ಮುಖವೆಂದರೆ ಗಣಿತದ ಪ್ರಶ್ನಪತ್ರಿಕೆ. ಕೆಲ ವರ್ಷಗಳ ಹಿಂದೆ ಪಾಠಪುಸ್ತಕದ ’ಅಭ್ಯಾಸಗಳು’ ವಿಭಾಗದಿಂದಲೇ ಹೆಚ್ಚಿನ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರುತ್ತಿದ್ದವು. ಆದ್ದರಿಂದ ಸಾಧಾರಣ ಬುದ್ಧಿವಂತಿಕೆ ಇದ್ದವರೂ ಕೂಡಾ  ಚೆನ್ನಾಗಿ ಅಭ್ಯಾಸ ಮಾಡಿ, ಬೇಕಿದ್ದರೆ ಉರು ಹೊಡೆದು ಪರೀಕ್ಷೆಯಲ್ಲಿ ಪಾಸ್ ಆಗಿ ನಿಟ್ಟುಸಿರು ಬಿಡುತ್ತಿದ್ದರು. ಆದರೆ ಈಗಿನ ವಿದ್ಯಮಾನ ನಿಮಗೆ ಗೊತ್ತೇ? ಈಗಿನ ಗಣಿತದ ಪ್ರಶ್ನಪತ್ರಿಕೆಯ ತುಂಬ ತತ್ತ್ವಾಧಾರಿತ, ಪ್ರಯೋಗಾಧಾರಿತ [conceptual/application based] ಪ್ರಶ್ನೆಗಳು!.ನಮ್ಮ ಶಾಲೆಯಲ್ಲಿ ಮಾಥ್ಸ್ ಟೀಚರ್ಸು ಹೈ ಸ್ಟಾಂಡರ್ಡ್..ಎಂದು ಹೇಳಿಕೊಳ್ಳಲು ಶಾಲೆಗಳ ನಡುವೆ ಪೈಪೋಟಿ. ಸಾಧಾರಣ ಬುದ್ಧಿಮತ್ತೆಯ ವಿದ್ಯಾರ್ಥಿ ಲೆಕ್ಕ ಬಿಡಿಸುವುದಿರಲಿ, ಆ ಪ್ರಶ್ನೆಗಳನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕೇ ಹರಸಾಹಸಪಡುತ್ತಾನೆ.ಪರಿಣಾಮ ಕನಿಷ್ಠ ಅಂಕಗಳು... ನಿರಾಸೆ... ಪಾಲಕರ ಅಸಹನೆ.... ಕಷ್ಟಗಳವಿಷವರ್ತುಲ ಆರಂಭವಾಗುತ್ತದೆ. 

ಇನ್ನೊಂದು ಆಯಾಮವೆಂದರೆ ಗಣಿತದ ಭಯ ನಮ್ಮಲ್ಲಿ ಆಳವಾಗಿ ಬೇರೂರಿದೆ. ಮನೆಯಲ್ಲಿ ತಂದೆತಾಯಿಯರು ಬಾಲ್ಯದಿಂದಲೇ ಅಯ್ಯಯ್ಯೋ..... ಗಣಿತ ಕಷ್ಟ ಮರೀ.... ಎನ್ನುತ್ತಾ ಭಯದ ಬೀಜ ಬಿತ್ತುತ್ತಾರೆ.ಪರೀಕ್ಷೆಯ ಅಂಕಗಳು ಬಂದಾಗಲೂ ಮಾಥ್ಸ್ ನಲ್ಲಿ ಯಾಕಿಷ್ಟು ಕಮ್ಮಿ?.. ಎಂದು ಪ್ರಾಣ ತಿನ್ನುತ್ತಾರೆ. ಅಥವಾ ಪ್ರಶ್ನಪತ್ರಿಕೆ ನೋಡಿ ಅಲ್ಲಾ... ನಮಗೇ ಈ ಪ್ರಶ್ನೆಗಳು ಅರ್ಥವಾಗಲ್ಲ... ಪಾಪ ಮಗು ... ಹೇಗೆ ಮಾಡಬೇಕು.. ಎಂದು ಅನುಕಂಪ ತೋರಿಸಿ ಗಣಿತದ ಗುಮ್ಮನಿಗೆ ನೀರು-ಗೊಬ್ಬರ ಹಾಕುತ್ತಾರೆ. ಅದಕ್ಕೆ ಸರಿಯಾಗಿ ಹೆಚ್ಚಿನ ಶಾಲೆಗಳಲ್ಲಿ ಗಣಿತವನ್ನು ನೀರಸವಾಗಿ ಬೋಧಿಸಿ ಮಗು ಅದರಿಂದ ವಿಮುಖನಾಗುವಂತೆ ಕೈಲಾದ ಸಹಾಯ ಮಾಡುತ್ತಾರೆ. ನಮ್ಮ ಗಣಿತಪಠ್ಯಪುಸ್ತಕಗಳ ವಿಷಯಗಳೂ ಆಸಕ್ತಿಯನ್ನು ಕೆರಳಿಸುವಂತಿಲ್ಲ. ಅಲ್ ಜೀಬ್ರಾದ ಎಕ್ಸ್, ವೈಗಳನ್ನು ನಿಜಜೀವನದಲ್ಲಿ ಹುಡುಕುತ್ತಾ...ಜ್ಯಾಮಿತಿಯ ಕೋನಗಳಲ್ಲಿ ಮೂಲೆಗುಂಪಾಗುತ್ತಾ, ನಾಚುರಲ್ - ಪ್ರೈಮ್- ರಾಷನಲ್ ನಂಬರುಗಳ ಮಧ್ಯೆ ವಿದ್ಯಾರ್ಥಿಯ ಕಳೆದುಹೋಗುತ್ತಾನೆ
.
ಪ್ರಪಂಚಕ್ಕೆ ಸೊನ್ನೆಯನ್ನು ಕೊಟ್ಟವರೆಂದು, ಪೈ ಬೆಲೆಯನ್ನು ನಿರ್ಧರಿಸಿದವರೆಂದು, ಖಗೋಳದ ವಿದ್ಯಮಾನಗಳನ್ನು ಗಣಿತದ ಮೂಲಕ ವ್ಯಾಖ್ಯಾನಿಸಿದವರು ನಾವೆಂದು ಹೆಮ್ಮೆಪಡುವ ಭಾರತೀಯರು ನಾವು. ಆದರೆ ಇಂದಿಗೂ ಭಾರತೀಯ ಮಗುವಿಗೆ ಗಣಿತವೊಂದು ಕಬ್ಬಿಣದ ಕಡಲೆ. ಗಣಿತದ ಭಯದಿಂದ ಶಾಲೆ ತೊರೆದವರ, ಮನೆ ಬಿಟ್ಟು ಓಡಿಹೋದವರ ಅಸಂಖ್ಯ ಉದಾಹರಣೆಗಳು ನಮ್ಮಲ್ಲಿವೆ. ಕೆಲವೇ ದಿನಗಳ ಹಿಂದೆ ಗಣಿತದಲ್ಲಿ ಕಡಿಮೆ ಅಂಕಗಳು ಬಂದವೆಂದು ೯ನೇ ಮಹಡಿಯ ಮನೆಯ ಬಾಲ್ಕನಿಯಿಂದ ಹಾರಿ ಪ್ರಾಣ ತ್ಯಜಿಸಿದ ವಿದ್ಯಾರ್ಥಿ, ಮನೆಯಿಂದ ಓಡಿಹೋಗಿ ೪ ದಿನ ತಲ್ಲಣ ಸೃಷ್ಟಿಸಿದ್ದ ಬಾಲಕಿ, ಆ ಸಂಖ್ಯೆ ಇಂದೂ ಮುಂದುವರೆಯುತ್ತಿರುವುದರ ಸಂಕೇತಗಳು.ಅಂದರೆ ನಮ್ಮ ತಪ್ಪುಗಳಿಂದ ನಾವು ಪಾಠ ಕಲಿತಿಲ್ಲವೇ? ನಮ್ಮ ಗಣಿತದ ಪಠ್ಯಕ್ರಮವನ್ನು, ಕನಿಷ್ಟ ಪಕ್ಷ ಹತ್ತನೇ ತರಗತಿಯವರೆಗಿನ ಪಠ್ಯವನ್ನಾದರೂ ಮಕ್ಕಳ ಮನಸ್ಸನ್ನು ಅರಳುವಂತೆ ವಿನ್ಯಾಸಗೊಳಿಸಬಹುದೇ?ನಮ್ಮ ಕಲಿಸುವ ವಿಧಾನ ನೀರಸವಾಗಿದೆಯೇ? ಅಥವಾ ನಮ್ಮ ಪರೀಕ್ಷೆಗಳ ಮಾದರಿ ಬದಲಾಗಬೇಕೇ? ಪ್ರಕೃತಿಯಲ್ಲಿ, ಸಂಗೀತದಲ್ಲಿ, ನೃತ್ಯದಲ್ಲಿ, ಚಿತ್ರಗಳಲ್ಲಿ, ಭಾಷೆಗಳಲ್ಲಿ,ಕ್ರೀಡೆಗಳಲ್ಲಿ, ಕಾವ್ಯದಲ್ಲಿ ಅಷ್ಟೇ ಏಕೆ ಪ್ರಮಾಣಬದ್ಧವಾಗಿ ಸೃಷ್ಟಿಯಾದ ನಮ್ಮ ದೇಹದಲ್ಲೂ ಇರುವ ಗಣಿತವನ್ನು ಮಗು ಖುಷಿಯಿಂದ ಕಲಿಯುವಂತೆ ನೋಡುವಲ್ಲಿ ನಾವೇಕೆ ದಯನೀಯವಾಗಿ ಸೋತಿದ್ದೇವೆ? 

ಮೈತುಂಬಾ ಪ್ರಶ್ನೆಗಳನ್ನೇ ಹೊದ್ದಿರುವ ಗಣಿತವೇ ..ನೀನೇಕೆ ಇಂಥ ಕ್ರೂರಿ?

Thursday 4 August 2016

" TEACHER ''



According to my husband one horrible thing living with a teacher[ that is me ] is, she always wants to teach the world about right and wrong! A teacher sees whole world as a bunch of unruly kids! Though at home my instructions are followed with least opposition, I tasted miserable defeat recently.


Few months back myself and 7 other teachers accompanied a group of 150 students aged 13-14 to an excursion to Chennai and Pondichery. It was 3 day trip. On the second day after finishing sight seeing we reached the hotel at 8 PM . We all enjoyed the DJ Show followed by the dinner. Then all the students were ready to go to their shared rooms . As they are chirpy, exited teenagers who wanted to utilise the freedom , I told them to lock themselves in the room and sleep and not to roam around in the corridors .
At 11 pm myself along with another teacher went around to make sure all are safe and sleeping. In the second floor a group of 3 girls and 2 boys caught my attention. The girls in their body revealing clothes made me angry as it was an inappropriate dress in public place according to our Indian standards! I called them and started giving lecture on importance of decent clothing, the consequences, the safety of girls etc.Next on seeing those 2 boys I lost my cool and shouted on them for entering the girls rooms without reason. I also told them on returning to school they have to meet Principal for their indiscipline. 

Suddenly I had to stop my lecture when one of the girl interrupted " But Maam, who are you?"
Ah.... I woke up from my ideal world. Yes they are not from our school!! I was shouting at strangers!!
Whole group gave me a look [ shut up and mind your business]

I went back to my room cursing the
" TEACHER '' within me who wants to set the things right everywhere .

Thursday 7 July 2016

ವಾವ್!..... ಎಂಬೋ ಬಾವಿ.....

ಹೌದು ,ಇದು ಅಂಥಿಂಥ ಬಾವಿಯಲ್ಲ. ನೋಡುಗನ ಬಾಯಲ್ಲಿ ವಾವ್... ಎಂಬ ಉದ್ಗಾರ ಹುಟ್ಟಿಸುವ ಬಾವಿ. ಜಲಮೂಲಗಳ ಬಗ್ಗೆ ನಮ್ಮ ಹಿರಿಯರಿಗಿದ್ದ ಕಳಕಳಿ, ಭಕ್ತಿಯ ದರ್ಶನ ಮಾಡಿಸುವ ಈ ಬಾವಿಯೇ “ ಅದಾಲಜ್ ನಿ ವಾವ್”.ಗುಜರಾತಿಭಾಷೆಯಲ್ಲಿ ಬಾವಿಗೆ ವಾವ್ ಎನ್ನುತ್ತಾರೆ. ಅಹಮದಾಬಾದಿನಿಂದ ೧೮ ಕಿ.ಮೀ. ದೂರದ ಅದಾಲಜ್ ಎಂಬಲ್ಲಿರುವ ಈ ಮೆಟ್ಟಿಲುಬಾವಿ ತನ್ನ ಅಪೂರ್ವ ರಚನೆಯಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಈ ಮೆಟ್ಟಿಲುಬಾವಿ ಅಥವಾ ಕೊಳಗಳು ಭಾರತದಲ್ಲೆಡೆ ಕಂಡುಬರುತ್ತಿದ್ದರೂ ಪಶ್ಚಿಮಭಾರತದಲ್ಲಿ ಇವುಗಳ ಸಂಖ್ಯೆ ಹೆಚ್ಚು. ಕರ್ನಾಟಕದ ಗದುಗಿನ ಎಕ್ಕುಂಡಿಯಲ್ಲಿ ಇಂಥ ಅದ್ಭುತಬಾವಿಯನ್ನು ಕಾಣಬಹುದು. ಮಳೆನೀರು ಸಂಗ್ರಹ, ವರ್ಷವಿಡೀ ಜನ- ಜಾನುವಾರುಗಳಿಗೆ ನೀರುಣಿಸುವುದು  ಇವುಗಳ ಹಿಂದಿನ ಉದ್ದೇಶ. ಹೆಚ್ಚಾಗಿ ಗಾರೆ,ಇಟ್ಟಿಗೆಗಳಿಂದ ಕಟ್ಟಲ್ಪಡುತ್ತಿದ್ದ ಇವುಗಳಲ್ಲಿ ಕೆಲವು ರಾಜ ಮಹಾರಾಜರ ಕೃಪೆಯಿಂದ ಕಲ್ಲಿನಲ್ಲಿ ನಿರ್ಮಾಣವಾಗಿ ಸುಂದರ ಶಿಲ್ಪಕಲಾ ವೈಭವವನ್ನು ಮೆರೆಯಿಸುವ ತಾಣಗಳಾದವು. ಜನರ ದೈನಂದಿನ ಉಪಯೋಗಕ್ಕೆ ನೀರು ಒದಗಿಸುವ ಜೊತೆಗೆ ಉತ್ಸವ, ಮನರಂಜನೆಗಳ ಕೇಂದ್ರಗಳಾಗಿ ಮೆರೆದವು.ನೀರು ತರುವ ಕೆಲಸ ಹೆಚ್ಚಾಗಿ ಹೆಂಗಸರದ್ದೇ ಆಗಿದ್ದರಿಂದ ಅವರ ಬಿಡುವಿನ ಹರಟೆಕಟ್ಟೆಗಳಾಗಿ ಧನ್ಯವಾದವು.ಪುರಾತನ ಇತಿಹಾಸದ ಕೇಂದ್ರ ಮೊಹೆಂಜೋದಾರೋವಿನಲ್ಲಿ ಏಳುನೂರಕ್ಕೂ ಹೆಚ್ಚಿನ ಮೆಟ್ಟಿಲು ಬಾವಿಗಳು ಪತ್ತೆಯಾಗಿವೆಯೆಂದರೆ ಇವುಗಳ ಸಮೃದ್ಧ ಇತಿಹಾಸದ ಕಲ್ಪನೆ ಮಾಡಿಕೊಳ್ಳಬಹುದು. ಭಾರತದಲ್ಲಿ ಇಂದು ಸುಸ್ಥಿತಿಯಲ್ಲಿರುವ ಇನ್ನೂರಕ್ಕೂ ಅಧಿಕ ಬಾವಿಗಳಿವೆ ಎನ್ನಲಾಗಿದೆ.


೧೪೯೯ರಲ್ಲಿ ಮುಸ್ಲಿಮ್ ದೊರೆ ಮಹಮದ್ ಬೇಗ್ದನಿಂದ ನಿರ್ಮಿಸಲ್ಪಟ್ಟಿತು ಎಂಬ ಉಲ್ಲೇಖವಿರುವ ಅದಾಲಜ್ ನ ಮೆಟ್ಟಲು ಬಾವಿಯ ಆಳದಲ್ಲಿ ಕಣ್ಣೀರಿನ ಕಥೆಯಿದೆ.೧೪೯೮ರಲ್ಲಿ ವಘೇಲಾ ವಂಶದ ರಾಣಾವೀರಸಿಂಹ ತನ್ನ ಪ್ರಿಯಪತ್ನಿ ರೂಪಬಾ ಗೋಸ್ಕರ ಇದರ ನಿರ್ಮಾಣವನ್ನು ಆರಂಭಿಸಿದ. ಕೆಲಸ ಕಾಲುಭಾಗದಷ್ಟು ಮುಗಿದಿತ್ತಷ್ಟೇ . ಪಕ್ಕದ ರಾಜ್ಯದ ದೊರೆ ಮಹಮದ್ ಬೇಗ್ದ ಯುದ್ಧ ಸಾರಿದ . ಯುದ್ಧದಲ್ಲಿ ವೀರಸಿಂಹ ವೀರಮರಣವನ್ನಪ್ಪಿದ. ವಿಜಯೀ ಮಹಮದ್ ಬೇಗ್ದ ಅಪ್ರತಿಮಸುಂದರಿ ರೂಪಬಾ ಳನ್ನು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಲಾರಂಭಿಸಿದ. ರೂಪಬಾ ಒಂದು ಶರತ್ತನ್ನೊಡ್ಡಿ ಮದುವೆಗೆ ಸಮ್ಮತಿಯಿತ್ತಳು. ತನ್ನ ಪತಿ ಆರಂಭಿಸಿದ ಬಾವಿಯ ನಿರ್ಮಾಣ ಮೊದಲು ಮುಗಿಸಬೇಕು, ನಂತರವೇ ಮದುವೆ. ಸರಿ.. ಮಹಮದ್ ಬೇಗ್ದನ ಆಜ್ಞೆಯಂತೆ ಅತ್ಯಂತ ತ್ವರಿತಗತಿಯಲ್ಲಿ ಬಾವಿಯ ನಿರ್ಮಾಣ ಮುಗಿಯಿತು. ಆದರೆ ರಾಣಿ ರೂಪಬಾ ಒಂದು ರಾತ್ರಿ ಆ ಬಾವಿಯಲ್ಲಿ ಹಾರಿ ಪ್ರಾಣತ್ಯಾಗಗೈಯುವುದರೊಂದಿಗೆ ಮಹಮದ್ ಬೇಗ್ದನ ಕನಸನ್ನು ಭಗ್ನಗೊಳಿಸಿದಳು.ಚರಿತ್ರೆಯಲ್ಲಿ ಅಮರಳಾದಳು. ಮಹಮದ್ ಬೇಗ್ದ ನಿರಾಶನಾದರೂ ಬಾವಿಯನ್ನು ಸಂರಕ್ಷಿಸುವಂತೆ ವ್ಯವಸ್ಥೆ ಮಾಡುತ್ತಾನೆ.  ಈಘಟನೆಗಳು ಬಾವಿಯ ಗೋಡೆಗಳ ಮೇಲೆ ಸುಂದರವಾಗಿ ಕೆತ್ತಲ್ಪಟ್ಟಿವೆ.ಬಾವಿಯ ನಿರ್ಮಾಣದ ದಾಖಲೆಗಳನ್ನು ಮೊದಲ ಮಹಡಿಯ ಗೋಡೆಯ ಮೇಲೆ ಸಂಸ್ಕೃತದಲ್ಲಿ ಕೊರೆಯಲಾಗಿದೆ. ಈ ಮೆಟ್ಟಲುಬಾವಿಯ ಶಿಲ್ಪಕಲೆಯನ್ನು ಸೂಕ್ಶ್ಮವಾಗಿ ಗಮನಿಸಿದರೆ ತಳಹಂತದಲ್ಲಿ ಹಿಂದೂ ದೇವ-ದೇವಿಯರ ಕೆತ್ತನೆಗಳು ಕಂಡುಬಂದರೆ ಮೇಲಿನ ಹಂತಗಳಲ್ಲಿ ಇಸ್ಲಾಮಿಕ್ ಶೈಲಿ ಕಣ್ಣಿಗೆ ರಾಚುತ್ತದೆ.


ಅದಾಲಜದ ಮೆಟ್ಟಲುಬಾವಿ ಐದುಮಹಡಿ[ ಸುಮಾರು ೧೦೦ ಅಡಿ] ಆಳವಿದೆ. ಅಷ್ಟಭುಜಾಕೃತಿಯಲ್ಲಿ ಬಲಿಷ್ಠ ಸ್ತಂಭಗಳ ಮೇಲೆ ಕಟ್ಟಲ್ಪಟ್ಟಿದೆ.ಎಲ್ಲ ದಿಕ್ಕುಗಳಿಂದಲೂ ಸಾಕಷ್ಟು ಗಾಳಿ ಬೆಳಕು ಬರುತ್ತದೆ. ಮೇಲಿನಿಂದ ಬಾವಿಯೊಳಗೆ ಇಳಿಯಲು ಮೂರು ದಿಕ್ಕುಗಳಲ್ಲಿ ಮೆಟ್ಟಲುಗಳಿವೆ. ಪ್ರತಿ ಮಹಡಿಯಲ್ಲೂ ಜನರು ಓಡಾಡಲು ಸಾಕಷ್ಟು ಸ್ಥಳಾವಕಾಶ ಇದೆ. ಬಾವಿಯ ಗೋಡೆಗಳ ಮೇಲೆ ನೀರು ತುಂಬುವ ಪಾತ್ರೆಗಳು, ಕಲ್ಪವೃಕ್ಷ, ನವಗ್ರಹಗಳ ಕೆತ್ತನೆ ಮನಸೆಳೆಯುತ್ತದೆ. ಅಲ್ಲದೆ ಮೊಸರು ಕಡೆಯುವುದು, ಅಲಂಕರಿಸಿಕೊಳ್ಳುವುದು, ರಾಜನ ಆಸ್ಥಾನದಲ್ಲಿ ನೃತ್ಯ-ಸಂಗೀತ ಸಭೆ ಇತ್ಯಾದಿ ಕೆತ್ತನೆಗಳಲ್ಲಿ ಮಹಿಳೆಯರ ದೈನಂದಿನ ಬದುಕು ಅನಾವರಣಗೊಂಡಿದೆ. ಬಾವಿಯ ಒಳಗಿನ ತಾಪಮಾನ ಆಹ್ಲಾದಕರವಾಗಿದ್ದು ಹೊರಗಿನ ಉಷ್ಣತೆಗಿಂತ ಐದು ಡಿಗ್ರಿ ಕಡಿಮೆ ಇರುತ್ತದೆ.
ಭವ್ಯವಾದ ಅರಮನೆಯನ್ನು ಪ್ರವೇಶಿಸುತ್ತಿದ್ದೇವೇನೋ ಎಂಬ ಭಾವನೆಯನ್ನು ಉಂಟುಮಾಡುವ ಅದಾಲಜದ ಬಾವಿ ಸ್ವಚ್ಛವಾಗಿದೆ. ನೀರಿನ ಮೇಲೆ ಲೋಹದ ಬಲೆಯನ್ನು ಹೊದಿಸಲಾಗಿದೆ. ಸುತ್ತಲೂ ಸುಂದರವಾದ ಉದ್ಯಾನವಿದೆ.ಅಹಮದಾಬಾದ್ ನಿಂದ ರಸ್ತೆ ಸಂಪರ್ಕ ಅತ್ಯುತ್ತಮವಾಗಿದ್ದು ಒಳ್ಳೆಯ ಬಸ್ ವ್ಯವಸ್ಥೆ ಇದೆ. ಬಾಡಿಗೆ ಕಾರುಗಳು, ರಿಕ್ಷಾಗಳೂ ಸಿಗುತ್ತವೆ. ಮುಂದೆ ನೀವೆಲ್ಲಾದರೂ ಅಹಮದಾಬಾದಿಗೆ ಭೇಟಿ ಇತ್ತರೆ ಅದಾಲಜದ ಮೆಟ್ಟಲು ಬಾವಿಯನ್ನು ನೋಡಲು ಮರೆಯದಿರಿ. 

-




Monday 25 April 2016

Tête-à-tête with an Airhostess


                   
Tête-à-tête with an Airhostess
Since the advent of globalisation, there are infinite opportunities to be sought. The dilemma of choosing the career path is surely a daunting task, wrecking the peace of mind of many teenagers for whom the impending question is ‘What Next?’ Finally however, most follow the traditional fields, whereas a small section of youngsters wants to try the new avenues and taste success.
Meet this dynamic young lady Ms. Kavya Hebbar who belongs to this latter section. Despite choosing a path less travelled, she is has been able to scale great heights. Daughter of Mr. Narahari Hebbar - Ms. Rekha Hebbar-who hail from Hosamata near Kukke subrahmanya , Mangalore , Karnataka  , she continues the legacy of Mangaloreans who are ready to take challenges and convert them into achievements.
Now employed with Jet Airways- International Flights, Ms. Kavya shares her thoughts with Veda Athavale .                    
  

  
1. How did the idea of becoming air hostess occur? Was there any role model? How did your parents react about your decision?
Frankly speaking I didn't have any dream or goal during my school or college days. I just used to go to school, come back, go for classes, study and then sleep. That's it.  There was no role model for me to become an air hostess. It just happened one day. It was the last day of my 12th board exam, a person was distributing Frankfinn leaflets [Frankfinn is an institute for Air Hostess training]. I randomly filled one, thinking " Just fill the form, who cares if I get a call or not". And the very next day I received a call to attend an interview. Out of 10 people who had come, I was only one who got selected for the course. I went home, discussed it with my parents and their response was positive. That's when I realised what my dream was! My parents were a big support for me.
2. Tell us about the structure of airhostess training? Is being beautiful important for this course?

Qualification required for the training is - HSC / 12th / PUC passed. Age - 18 to 30 years. Training period is 12 months.  Fluency in English is appreciated.  Regarding physical features, height and weight should be proportional with a clear skin. It's not just the beauty, but beauty with brains, confidence, pro- activeness, initiative to learn things, communication skills etc. are most important. The curriculum includes lessons on healthy diet, First Aid, customer service etc.

3. What is the job of an air hostess? Please explain in detail.
 Safety and service is the most important job of an air hostess. Airhostess is responsible for ensuring all passengers are seated and secure before take-offs and landings, securing the main door on flights and instructing passengers on all safety procedures and ensuring all cabin equipment is working before flights. Service duties would include passing out pillows and reading materials before take-off, getting booster seats for toddlers or escorting elderly passengers on and off the plane, providing First-Aid in case of emergency and serve drinks, snacks and meals, collect trays, trash and glasses before landing.                          


4.   Is this job financially attractive? Are there any other benefits in this job? 
Air hostesses are paid well. But the main attraction of this job is you get paid to see the world! You can explore every corner of the world. Travel to places where you have seen those only in movies. Stay in star hotels and all this is company paid.  Other benefits being huge discounts for family to travel in both domestic and international and also medical insurance for the family.

5. Can an Airhostess balance family and work life after marriage? What are the other jobs she can opt if she decides to leave?
To some extent, yes. Family life gets affected after marriage. But with a supporting spouse one can balance personal and professional life. One small advice to all the girls and guys out there, never marry a person of the same profession. For example, if I marry a guy who is a crew, we won't be able to give enough time to each other and to the family because of the time clash. Also, there are many job options for an experienced airhostess. They can become trainers, or seek jobs in management and hospitality industry.   

6. What are the challenges for an Airhostess?  What is your opinion about the recent movie ‘Neeraja’ which depicts life of an Airhostess?
I feel Physical fitness is a biggest challenge. I myself had faced this problem while giving interviews. I got through Jet Airways when I tried for the 4th time!  They rejected me thrice just because of my weight and all my confidence had dropped. I lost hopes completely. But then again my parents and friends imbibed the confidence in me, motivated me, gave me enough strength to face the challenge again. I joined a gym, went for swimming classes and lost weight. And that was when I succeeded. 
The other challenge is staying away from the family as we get off once or twice in a week, which builds psychological pressure. So developing right food habits, keeping ourselves mentally occupied in a constructive way is very important to overcome these challenges.  Regarding the movie ‘Neeraja’, it’s a must watch for every other person out there who thinks an Airhostess job is just like a waiter in the hotel!  I am sure the concept of an Airhostess will change after watching the movie.
7. How do you feel about your Kannadiga roots?  Any piece of advice to youngsters?
Of course I feel happy. Though I am settled in Mumbai, I am in constant touch with my parental and maternal homes in villages near Mangalore .  My relatives have always supported my decision of becoming an Airhostess. Yes it's true that people choose to be engineers or doctors, but I chose to be something unique from others. Now, when anybody asks, “what does your daughter do?” my parents, with their heads high, say that- “She is an air hostess with Jet Airways!”
                           

            

Saturday 26 March 2016

ಸಹಾಯ‌ ‍ಮತ್ತು 108 ವಿಘ್ನ‌


ಕಳೆದ ಅಕ್ಟೋಬರ್ ನಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದರ್ಶನ -ಮಧ್ಯಾಹ್ನ ಊಟ ಮುಗಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದೆವು. ಚನ್ನರಾಯಪಟ್ಟಣ ದಾಟಿತ್ತು. ಇದ್ದಕ್ಕಿದ್ದಂತೆ ನಮ್ಮ ಕಾರನ್ನು ಶರವೇಗದಲ್ಲಿ ಹಿಂದಿಕ್ಕಿ ಹೋದ ಬೈಕ್ ನವನೊಬ್ಬ ಮುಂದಿನ ಕಾರಿಗೆ ಅಪ್ಪಳಿಸಿದ. ಎರಡೂ ವಾಹನಗಳೂ ಕೆಲವು ಪಲ್ಟಿ ಹೊಡೆದು ಅಷ್ಟು ದೂರ ಹೋಗಿ ಬಿದ್ದವು. ನಾವು ಕಾರು ನಿಲ್ಲಿಸಿ , ಹತ್ತಿರ ಹೋದೆವು. ಬೈಕ್ ಯುವಕನ ಹೆಲ್ಮೆಟ್ ಒಡೆದು ಸಾಕಷ್ಟು ಏಟಾಗಿತ್ತು. ಕಾರಿನ ಚಾಲಕನಿಗೂ ಗಾಯಗಳಾಗಿದ್ದವು.. ಹೆದ್ದಾರಿಯಲ್ಲಿ ಓಡುತ್ತಿದ್ದ ಹೆಚ್ಚಿನ ವಾಹನಸವಾರರು ಒಮ್ಮೆ ವೇಗ ತಗ್ಗಿಸಿ ಜೀವ ಹೋಯ್ತಾ....?? ಎಂದು ಕೇಳಿ ಇಲ್ಲ... ಎಂದು ತಿಳಿದೊಡನೆ ಮುಂದೆ ಹೋದರು. ಕೆಲವರು ವಾಹನ ನಿಲ್ಲಿಸಿಬಂದು ಬಿದ್ದವರನ್ನು ಕೂರಿಸಿ ನೀರು ಕುಡಿಸಲು ಸಹಾಯಮಾಡಿದರು. ಸರಿ... ನನ್ನ ಸಮಾಜಮುಖಿ ಪ್ರಜ್ಞೆ ಜಾಗ್ರತಗೊಂಡು[ ವ್ಯವಹಾರಚತುರರಾದ ನನ್ನ ಪತಿಯ ಮಾತನ್ನು ಕೇಳದೇ] ೧೦೮ ಕ್ಕೆ ಕರೆ ಮಾಡಿಯೇ ಬಿಟ್ಟೆ. ಆ ಕಡೆಯಿಂದ ಸ್ಥಳದ ವಿಳಾಸ ಕೇಳಿದರು. ಸುತ್ತಲೂ ನೋಡಿದೆ. ಬಟಾಬಯಲು... ಉರುಬಿಸಿಲು... ಅಲ್ಲಿ ದೂರದಲ್ಲಿ ನಾಲ್ಕು ನಾಯಿಗಳು.. ಒಂದು ಎಮ್ಮೆ.. ಮೂರು ಹಸುಗಳನ್ನು ಬಿಟ್ಟರೆ ಏನಿಲ್ಲ... . ಅಲ್ಲೇ ಯಾರನ್ನೋ ಕೇಳಿ ಸುಮಾರಾಗಿ ವಿಳಾಸವನ್ನು, ಕಾರು ಬೈಕಿನ ಸಂಖ್ಯೆಗಳನ್ನು ಹೇಳಿದೆ. ನಾವು ಇಲ್ಲಿರಲಾಗುವುದಿಲ್ಲ. ಬೇಗನೇ ಬೆಂಗಳೂರ ಸೇರಬೇಕು ಎಂದೆ. “ಸರಿ ನೀವು ಹೋಗಿ ನಾವು ಸ್ವಲ್ಪಹೊತ್ತಲ್ಲಿ ಬರುತ್ತೇವೆ” ಎಂದರು. ಅಷ್ಟು ಹೊತ್ತಿಗೆ ಜನರೂ ಸೇರಿದ್ದರು. ನಾವು ಪ್ರಯಾಣ ಮುಂದುವರೆಸಿದೆವು.
ನನ್ನ ಶನಿದಶೆ ಆರಂಭವಾಯಿತು. ೧೦೮ ಸಿಬ್ಬಂದಿಯಿಂದ ಕರೆಗಳು.. ಎಲ್ಲಿ ಮೇಡಂ ... ಕಾರೂ ಇಲ್ಲ...ಆಕ್ಸಿಡೆಂಟೂ ಇಲ್ಲ. ಅಡ್ರೆಸ್ ಸರಿಯಾಗಿ ಹೇಳಿ.... ವಾಪಸ್ ಬನ್ನಿ ಇತ್ಯಾದಿ... ನನ್ನ ಅಸಹಾಯಕತೆಯನ್ನು ವರ್ಣಿಸಿದೆ. ಮುಂದೆ ಒಂದು ವಾರ ದಿನವೂ ಇದೇ ಕತೆ. ನಿಮ್ಮ ಹೆಸರು, ವಿಳಾಸ, ಅಪಘಾತದ ಸಮಯ... ನೀವು ಅಲ್ಲೇ ಇರಬೇಕಿತ್ತು... ಹಾಗೆ.. ಹೀಗೆ. ಕೊನೆಗೊಮ್ಮೆ ತಾಳ್ಮೆಗೆಟ್ಟು ಕಿರುಚಿದ ಮೇಲೆ ಕರೆಗಳು ನಿಂತವು.
ನೀವೂ ಸಹಾಯಹಸ್ತ ಚಾಚುವ ಪೈಕಿಯವರಾದರೆ ನಾನು ಕಲಿತ ಪಾಠಗಳನ್ನು ಒಮ್ಮೆ ಓದಿ.
೧. ಅಪಘಾತದ ಸ್ಥಳ ಪರಿಚಿತವಾಗಿದ್ದಲ್ಲಿ ಮಾತ್ರ ಸಹಾಯ ಮಾಡುವ ಸಾಹಸಕ್ಕೆ ಕೈಹಾಕಿ.
೨. ಆಂಬುಲೆನ್ಸ್ ಬರುವವರೆಗೂ ಅಲ್ಲೇ ನಿಲ್ಲುವ ತಾಳ್ಮೆ, ಸಮಯ ಇರಬೇಕು. ಅಥವಾ ಬೇರೆ ವ್ಯವಸ್ಥೆ ಮಾಡುವ ಸಾಮರ್ಥ್ಯ ಇರಬೇಕು.
೩. ಈ ಸಲಹೆ ಹೆಂಗಸರಿಗೆ ಮಾತ್ರ- ಆಗಾಗ ನಿಮ್ಮ ಗಂಡನ ಮಾತನ್ನು ಪರಿಪಾಲಿಸುವ ಹವ್ಯಾಸ ಇರಲಿ. ಕೆಲವೊಮ್ಮೆ ಪತಿ ಪರಮೇಶ್ವರರು ಅಮೂಲ್ಯ ಸಲಹೆಗಳನ್ನು ಕೊಡುತ್ತಾರೆ.

Sunday 17 January 2016

ಮೂರ್ತಿ ಚಿಕ್ಕದು ... ಇವರ ಕೀರ್ತಿ ದೊಡ್ಡದು....







ಮೊನ್ನೆ ಹೀಗಾಯ್ತು ನೋಡಿ.. ಸಾಯಂಕಾಲ ನಾನು ಯೋಗ ತರಗತಿಯನ್ನು ಮುಗಿಸಿ ತರಕಾರಿ ಖರೀದಿಸಿ ಮನೆಯ ಕಡೆ ನಡಕೊಂಡು ಬರ್ತಾ ಇದ್ದೆ. ಸ್ವಲ್ಪ ಪುರುಸೊತ್ತಿದ್ದರೆ ನಮ್ಮ ಬಡಾವಣೆಯ ರಸ್ತೆಗಳನ್ನು ಒಮ್ಮೆ  ನೋಡಬೇಕು ನೀವು.. ಅಬ್ಬಾ ಪ್ರಪಂಚದ ಎಲ್ಲಾ ಭೂಖಂಡಗಳನ್ನೂ ಇಲ್ಲೆ ಕೊರೆದಿದ್ದಾರೆ. ಎಲ್ಲಿ ಕಾಲಿಟ್ಟರೂ ವಿವಿಧ ಆಕಾರದ ಹೊಂಡಗಳು. ಮಧ್ಯೆ ಅಲ್ಲಲ್ಲಿ ಸಪಾಟು ಜಾಗ.. ಇಂಥ ರಸ್ತೆ ಅನ್ನೋ ಮೈದಾನದಲ್ಲಿ ನಮ್ಮ ಬೀದಿಯ ಮಕ್ಕಳು ಕ್ರಿಕೆಟ್ ಆಡುತ್ತಾ  ಇದ್ದರು. ಆಟದ ಹುಮ್ಮಸ್ಸಿನಲ್ಲಿ ಎಲ್ಲಾದರು ಬಿದ್ದು ಕೈ-ಕಾಲು ಮುರಿದುಕೊಂಡರೆ ಕಷ್ಟ ಅಂದುಕೊಂಡು ನಾನು ಆ ಹುಡುಗರಿಗೆ  “ಹುಷಾರು ಕಣ್ರೋ.. ರಸ್ತೆ ಸರಿಯಿಲ್ಲ. ಬಿದ್ದರೆ ಏಟಾದೀತು.. ಅಲ್ಲೊಂದು ಖಾಲಿ ಸೈಟಿದೆ ನೋಡಿ. ಅಲ್ಲಿ ಆಡಿ” ಅಂದೆ. ಎಲ್ಲವೂ ಒಂದು ಕ್ಷಣ ಆಟ ನಿಲ್ಲಿಸಿದರು. ಚೆಂಡು ಹಿಡಿದಿದ್ದ ಆ ಮೂಲೆಮನೆ ಪ್ರಿಯಾಳ ಮಗ ಸಂತೋಷ ನನ್ನಕಡೆ ಕಣ್ಣು ಹಾಯಿಸಿದ. ತನ್ನೆಲ್ಲಾ ಗೆಳೆಯರ ಕಡೆಗೊಂದು ದೃಷ್ಟಿ ಬೀರಿ “ ಆಂಟಿ.. ಈ ರಸ್ತೆ ನಮಗೆ ಆಟ ಆಡಕ್ಕೆ ಸರಿಯಿಲ್ಲ ಅಂತೀರಲ್ಲಾ.. ನೀವು ಮಾತ್ರ ವಾಕಿಂಗ್ ಹೋಗೋದಕ್ಕೆ ಚೆನ್ನಾಗಿದ್ಯಾ... ನೀವು ಹುಷಾರಾಗಿ ನೋಡ್ಕೊಂಡು ನಡೀರಿ...” ಅಂತ ಮಾತಿನ ಚಾಟಿ ಬೀಸಿದ.ಆ ದುರಹಂಕಾರಿ ಸಾಫ಼ಟ್ ವೇರ್ ಅಮ್ಮನಿಗೆ ಸರಿಯಾದ ಮಗ ಅಂದುಕೊಂಡು ಏನೂ ಆಗದವಳಂತೆ ಮನೆ ಕಡೆ ಹೆಜ್ಜೆ ಹಾಕಿದೆ.

ನೀವೇನೇ ಹೇಳಿ.. ಮಕ್ಕಳು ದೇವರ ಪ್ರತಿರೂಪ.. ಅವರ ಮನಸ್ಸು ನಿಷ್ಕಲ್ಮಶ.. ಅನ್ನುವ ಮಾತಿನ ಮೇಲೆ ನನಗೆ ಇತ್ತೀಚೆಗೆ ನಂಬಿಕೆ ಹೊರಟುಹೋಗಿದೆ.ನನ್ನ ಚಿಕ್ಕಮ್ಮನ ಮಗಳು ಸುಧಾಳ ಮೂರುವರ್ಷದ ಮಗಳನ್ನು ನೋಡಬೇಕು ನೀವು. ಕಳೆದ ಶುಕ್ರವಾರ ರಜೆ ಇತ್ತಲ್ಲ ಯಾವುದೋ ಬಂದ್ ಅಂತ ಅವತ್ತು ಮನೆಯಲ್ಲಿ ಬೇಜಾರು ಅಂದುಕೊಂಡು ಅವಳ ಮನೆಗೆ ಹೋದೆ.ಈ ಪುಟ್ಟಿನೇ ಬಾಗಿಲು ತೆಗೆದಳು.ಅವಳ ತುಟಿಯ ಮೇಲೆ ಸುಳಿದ ಕುಟಿಲನಗೆಯನ್ನು ನೋಡಿ ಯಾಕೋ ಬಂದ ಗಳಿಗೆ ಸರಿಯಿಲ್ಲ ಅನಿಸಿತು. ಆದ್ರೂ ಅಂಥ ಮುದ್ದುಮಗುವನ್ನು ನೋಡಿ ಮಾತನಾಡಿಸದೇ ಇರಲು ಸಾಧ್ಯವಾಗದೇ “ಏನೇ ಪುಟ್ಟಿ ಏನ್ಮಾಡ್ತಾ ಇದ್ದೀಯಾ?” ಅಂದೆ. ತಟಕ್ಕನೆ ಉತ್ತರ ಬಂತು “ ನಿಮ್ಮಜೊತೆ ಮಾತಾಡ್ತಾ ಇದ್ದೀನಿ!” ಸುತ್ತಮುತ್ತ ನೋಡಿದೆ.ಸದ್ಯ ಯಾರೂ ಕೇಳಿಸ್ಕೊಂಡಿಲ್ಲ ಸಮಾಧಾನವಾಯ್ತು. ಸುಧಾ ಒಳಗಡೆಯಿಂದ ಬಂದವಳು ಓ.. ಬಾರೇ... ಅಂತ ಆದರ ತೋರಿಸಿದಳು.ಎಲ್ಲ ಸಮಾಚಾರ ಮಾತಾಡಿದ್ದಾಯ್ತು.ಸುಧಾ ಕಾಫಿ ತರಲು ಅಡಿಗೆಮನೆಗೆ ಹೋದಳು. ನಾನು ಚಿಂಟೂ ಟಿ.ವಿ ನೋಡುತ್ತಿದ್ದ ಆ ಮಗುವಿಗೆ  “ಏನೇ ಸುಬ್ಬಿಎಷ್ಟನೇ ಕ್ಲಾಸು” ಅಂದೆ. ಎಲ್ ಕೆಜಿ.. ಅಂದವಳೇ ಮಾಕ್ಸ್ ಚಾನೆಲ್ ಹಾಕಿದಳು. ಅದೇನೋ “ಮೈಮೇಲೆ ಇರುವೆ ಬಿಟ್ಟುಕೊಂಡರಂತೆ” ಅನ್ನೋ ಗಾದೆ ಥರ ನಾನು ಸುಮ್ಮನಿರಲಾರದೇ “ಸ್ಕೂಲಿಗೆ ಹೇಗೆ ಹೋಗ್ತೀಯಾ?” ಅಂದೆ.ನನ್ನನ್ನೊಮ್ಮೆ ಗುರ್ರಂತ ನೋಡಿ ಸೋಫಾದಿಂದ ಛಂಗನೆ ನೆಗೆದು “ನೋಡಿ... ಹೀಗೆ ನಡಕೊಂಡು ಹೋಗ್ತೀನಿ.... ನಡಕೊಂಡು ಬರ್ತೀನಿ ..” ಅಂದವಳೇ ಇಪ್ಪತ್ತು ಹೆಜ್ಜೆ ಗೇಟಿನವರೆಗೆ ಹೋಗಿ ಶಿಸ್ತಾಗಿ ವಾಪಸ್ ಬಂದು ಕುಳಿತಳು. ಈ ಸಾರಿ ಮರ್ಯಾದೆ ಹೋಯ್ತು. ಸುಧಾ ಕಾಫಿ ತೆಗೆದುಕೊಂಡು ಬಂದವಳು ಕಿಸಕ್ ಅಂತ ನಕ್ಕು “ ತುಂಬಾ ಚೂಟಿ ಕಣೇ... ಟೀಚರ್ಸ್ ಎಲ್ಲ ತುಂಬಾ ಹೋಪ್ಸ್ ಇಟ್ಟುಕೊಂಡಿದ್ದಾರೆ ಇವಳ ಬಗ್ಗೆ” ಅಂದಳು. ಹೂಂ... ಹೋಪ್ಸ್ ಇಟ್ಟುಕೊಳ್ಳಬೇಕಾದ್ದೇ ಈ ಪಟಾಕಿಯ ಮೇಲೆ ಅಂದುಕೊಂಡು ದೇಶಾವರಿ ನಕ್ಕು ಸುಮ್ಮನಾದೆ. ಇವಳಾದರೂ ವಾಸಿ, ಕಳೆದ ವಾರ ಪಕ್ಕದ ಬೀದಿಯಲ್ಲಿ ಕಟ್ಟಿರೋ ಹೊಸಮನೆಯ ಗೃಹಪ್ರವೇಶಕ್ಕೆ  ನಾನು, ಮುಂದುಗಡೆ ಮನೆಯ ವಾಣಿ -ಅವಳ ಮಗ ನಿಪುಣ್ ಹೋಗಿದ್ದೆವು. ತುಂಬಾ ಜನ ಬಂದಿದ್ದರು. ಅಲ್ಲೊಬ್ಬರು ತಮ್ಮ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಕುಳಿತಿದ್ದರು. ಆ ಮಗುವಿಗೆ ಗಲ್ಲ, ಗದ್ದ, ಹಣೆ, ಕೈ,ಪಾದ  ಹೀಗೆ ದೇಹದ  ಮೇಲೆಲ್ಲ ಕಪ್ಪುಕಾಡಿಗೆಯ ಬೊಟ್ಟುಗಳನ್ನಿಟ್ಟಿದ್ದರು.ಮಗುವಿನ ಹಾಲುಬಿಳುಪು ಮೈಯಲ್ಲಿ ಈ ದೃಷ್ಟಿಬೊಟ್ಟುಗಳು ಕಣ್ಣಿಗೆ ರಾಚುತ್ತಿದ್ದವು. ನಿಪುಣ್ ಆ ಮಗುವನ್ನು ಅರೆಕ್ಷಣ ನೋಡಿದವನೇ ಜೋರಾಗಿ “ಅಮ್ಮ ಮಗು ನಮ್ಮ ಟಾಮಿನಾಯಿಯ ಥರಾನೇ ಇದೆ ಅಲ್ವಾ?ಬಿಳಿ ಮೈ ಕಪ್ಪು ಚುಕ್ಕೆ!” ಅನ್ನೋದೇ. ಅಯ್ಯೋ! ನಮಗಂತೂ ತಗ್ಗಿಸಿದ ತಲೆ ಮೇಲೆತ್ತಲಾಗಲಿಲ್ಲ.

ಹಿಂದೆ ಮಹಾಭಾರತದ ಅಭಿಮನ್ಯುವು ತಾಯಿ ಸುಭದ್ರೆಯ ಗರ್ಭದಲ್ಲಿರುವಾಗಲೇ ಶಸ್ತ್ರವಿದ್ಯೆಯ ಮಂತ್ರಗಳನ್ನು ಅರಗಿಸಿಕೊಂಡಿದ್ದನು ಎಂದು ಓದಿದ ನೆನಪು. ಗರ್ಭಿಣಿ ಹೆಂಗಸರು ಮನಸ್ಸಿಗೆ ಹಿತಕರವಾದ ವಾತಾವರಣದಲ್ಲಿದ್ದರೆ ಹುಟ್ಟುವ ಮಗುವಿನ ಮಾನಸಿಕ ಬೆಳವಣಿಗೆಗೆ ಸಹಕಾರಿ ಎಂಬುದು ವೈಜ್ಞಾನಿಕವಾಗಿಯೇ ನಿರೂಪಿತವಾಗಿದೆ. ಹಾಗೇ ಈಗಿನ ಮಕ್ಕಳು ತಾಯಿಯ ಗರ್ಭದಲ್ಲಿರುವಾಗಲೇ ಹೊರಪ್ರಪಂಚದ ಮಾತುಕತೆಗಳನ್ನು ಕೇಳಿಸಿಕೊಂಡು ಜೀರ್ಣಿಸಿಕೊಂಡಿರುತ್ತಾರೆ. ಹುಟ್ಟಿ ಮಾತು ಬರುತ್ತಿದ್ದಂತೆಯೇ ಚುರುಕು ಉತ್ತರಗಳನ್ನು ನಿರಾಯಾಸವಾಗಿ ನೀಡುತ್ತಾರೆ ಅನ್ನುವುದು ನನ್ನ ಭಾವನೆ. ನನ್ನ ಗೆಳತಿ ರೂಪಾಳ ಮಗಳು ನಾಲ್ಕುವರ್ಷದ ಅದಿತಿ ಇದ್ದಾಳೆ ನೋಡಿ . ಅವಳನ್ನು ಕಂಡರೆ ಒಂಥರಾ ಭಯಮಿಶ್ರಿತ ಗೌರವ ನನಗೆ.ಒಮ್ಮೆ ನಾನು-ರೂಪಾ ಗಾಂಧಿಬಜಾರಿನಲ್ಲಿ ಗಣೇಶಹಬ್ಬಕ್ಕೆಶಾಪಿಂಗ್ ಮುಗಿಸಿ ಮನೆ ಕಡೆ ಹೋಗ್ತಾ ಇದ್ದೆವು. ನಮ್ಮ ಜೊತೆ ನಡೆದು ಬಳಲಿದ್ದ ಈ ಪುಟಾಣಿ ಅಮ್ಮಾ... ಎತ್ಕೋ ...ಕಾಲುನೋವು.. ಹೊಟ್ಟೆನೋವು... ಅಂತೆಲ್ಲಾ ಪಿರಿಪಿರಿ ಶುರುಮಾಡಿದಳು. ಅಂಗಡಿಗಳನ್ನು ಸುತ್ತಿ ಸುಸ್ತಾಗಿದ್ದ ನಮಗೆ ಕೈಯಲ್ಲಿ ಸಾಮಾನಿನ ಚೀಲಗಳು ಬೇರೆ. ಎಷ್ಟು ಸಮಾಧಾನ ಹೇಳಿದರೂ ಇವಳು ಕೇಳುತ್ತಿಲ್ಲ. ರೂಪಾ ರೇಗಿ “ ನೋಡು ನೀನು ಹೀಗೆ ಹಠ ಮಾಡ್ತಾ ಇದ್ದರೆ ಅಲ್ಲಿ ಮೂಲೆಯಲ್ಲಿ ನಿಂತಿದ್ದಾನಲ್ಲ ಅವನಿಗೆ ನಿನ್ನ ಕೊಟ್ಬಿಡ್ತೀನಿ... ಸುಮ್ನೆ ನಡಿ” ಅಂದಳು. ಆ ಮೂಲೆಯಲ್ಲಿ ನಿಂತಿದ್ದ  ವಯಸ್ಸಾದ,ಕೊಳಕುಬಟ್ಟೆಯ, ಆ ರೋಗಿಷ್ಟ ಮುದುಕನನ್ನು ಎರಡು ಕ್ಷಣ ದುರುಗುಟ್ಟಿ ನೋಡಿದ ಅದಿತಿ “ ಏ... ಹ..ಹ... ಅವಂಗೇ ನಡೆಯಕಾಗಲ್ಲ.... ನೀನು ಕೊಟ್ರೂ  ನನ್ನ ಅವನು ತಗೊಳೋದೇ ಇಲ್ಲ...ಅಮ್ಮ ನಿಂಗೆ ಅಷ್ಟೂ ಗೊತ್ತಾಗಲ್ಲ... ”ಅಂದಾಗ  ನಾವಿಬ್ಬರೂ ಮುಖ ಮುಖ ನೋಡಿಕೊಂಡು ಮುಂದೆ ನಡೆದೆವು.

ಮಕ್ಕಳ ಈ ಅತಿಬುದ್ಧಿವಂತಿಕೆ ಇತ್ತೀಚಿನ ಕೆಲವರ್ಷಗಳ ಬೆಳವಣಿಗೆ. ಹಿಂದೆ ಮಕ್ಕಳು ಮುಗ್ಧತೆಯ ಪ್ರತಿರೂಪವೇ ಆಗಿದ್ದರು. ಇಲ್ಲದಿದ್ದರೆ ಅತ್ತರೆ ಅಳಲವ್ವ ಈ ಕೂಸು ನನಗಿರಲಿ ..ಕೆಟ್ಟರೆ ಕೆಡಲಿ ಮನೆಗೆಲಸ ....,  ಕೂಸು ಕಂದವ್ವ ಒಳಹೊರಗೆ ಆಡಿದರ ಬೀಸಣಿಗೆ ಗಾಳೀ ಸುಳಿದಾವ..... ಎಂಬ ಜನಪದಗೀತೆಗಳು  ಸೃಷ್ಟಿಯಾಗುತ್ತಿರಲಿಲ್ಲ. ಈಗಿನ ಮಕ್ಕಳು ಬೀಸಣಿಗೆಯಲ್ಲ , ನಾಲಿಗೆಯೆಂಬ ಚಾವಟಿಗೆಯನ್ನು ಎಲ್ಲೆಂದರಲ್ಲಿ ಬೀಸುತ್ತಿದ್ದರೆ ಅದರ ಏಟು ತಿಂದವರಿಗೇ ಗೊತ್ತು ಅದರ ರುಚಿ. ಆಡುವಂತಿಲ್ಲ... ಅನುಭವಿಸುವಂತಿಲ್ಲ... ಪಾಪ ಚಿಕ್ಕಮಕ್ಕಳು ಅವುಗಳಿಗೇನು ಗೊತ್ತಾಗತ್ತೆ ಅಲ್ವೇ!.  ತಮ್ಮ ಮನೆಯಲ್ಲಿ ಪಾಯಸವನ್ನು ಕಣ್ಣೆತ್ತಿ ನೋಡದವು ಪರರ ಮನೆಗೆ ಹೋದಾಗ ಬಟ್ಟಲು ತುಂಬಾ ಕುಡಿದು “ಅವನು ಪಾಯಸ ತಿನ್ನಲ್ಲ” ಎನ್ನುವ ನಮಗೆ ಮಂಗಳಾರತಿ ಮಾಡುತ್ತವೆ. ಆ ಮನೆಯವರ ಬಗ್ಗೆ ಎಂದೋ ಆಡಿದ ಕುಹಕದ ಮಾತನ್ನು ಅಚ್ಚುಕಟ್ಟಾಗಿ ಅವರ ಮುಂದೆ ಒಪ್ಪಿಸಿ ನಾವು ಆಜನ್ಮ ವೈರಿಗಳಾಗುವಂತೆ ಮಾಡುತ್ತವೆ. ನನ್ನ ತಂಗಿಯ ಮಗನೊಮ್ಮೆ ತೋಳಿಲ್ಲದ ರವಿಕೆ ತೊಟ್ಟು ಬಂದ ನನ್ನ ಗೆಳತಿ ಮನೆಗೆ ಕಾಲಿಟ್ಟೊಡನೆ “ಏ.. ಆಂಟಿ ನೋಡಮ್ಮಾ... ನೀ ಮೊನ್ನೆ ಹೇಳ್ತಾ ಇದ್ಯಲ್ಲ... ಮೈ ತೋರಿಸಿಕೊಂಡು ಓಡಾಡ್ತಾರೆ ಅಂತ ... ಇವತ್ತು ಬ್ಲೌಸೇ ಹಾಕಿಲ್ಲಾ... ” ಎಂಬ ಅಣಿಮುತ್ತು ಉದುರಿಸಿ ನಮ್ಮ ಗೆಳೆತನಕ್ಕೆ ಮಂಗಳ ಹಾಡಿದ್ದ . ಇನ್ನೊಮ್ಮೆ ನನ್ನ ಜೀವದ ಗೆಳತಿ ಕವಿತಾ ಮನೆಗೆ ಬಂದಿದ್ದಳು. ಧಡೂತಿದೇಹದ ಆಕೆ ಮನೆಗೆ ಬಂದಾಗಿನಿಂದ ಈ ಮಹಾಶಯ ಅವಳನ್ನೇ ಗಮನಿಸುತ್ತಿದ್ದ. ನಾವು ಅದೂ ಇದೂ ಮಾತನಾಡುತ್ತಿರಬೇಕಾದರೆ ಇವನು “ಆಂಟಿ ನಿಮ್ಮ ಕಣ್ಣೆಲ್ಲಿದೆ? ನಾನು ನಿಮಗೆ ಕಾಣಿಸ್ತಾ ಇದೀನಾ?” ಅಂತ ಮಾತಿನ ಬಾಣ ಬಿಟ್ಟ. ಪಾಪ.. ಕವಿತಾಗೆ..ಒಂಥರಾ ಆಯಿತು. ನಿಜ ಕವಿತಾಳ ಮುಖದಲ್ಲಿ ಉಬ್ಬಿದ ಪೂರಿಯಂತಹ ಗಲ್ಲಗಳ ,ಏಲಕ್ಕಿ ಬಾಳೆಹಣ್ಣಿನಂತಹಾ ಮೂಗಿನ  ಹಿಂದೆ ಕಣ್ಣುಗಳು ಅಡಗಿವೆ. ಹಾಗಂತ ಈ ಕಿಲಾಡಿಗೆ ದೊಡ್ಡವರೆಂದರೆ ಗೌರವ ಬೇಡವೇ? ನನಗಂತೂ ಅವನನ್ನು ಮಚ್ಚಟೆಯಾಗಿ ಬೆಳೆಸಿದ ನನ್ನ ತಂಗಿಯ ಮೇಲೆ  ಬ್ರಹ್ಮಾಂಡದಂಥ ಸಿಟ್ಟು ಬಂದಿತ್ತು.

ನಮ್ಮಿಂದಲೇ ಈ ಜಗತ್ತಿಗೆ ಬರುವ , ನಾವೇ ಕೈಹಿಡಿದು ನಡೆಯಲು ಕಲಿಸಿದ ನಮ್ಮ ಕರುಳಕುಡಿಗಳು ನಮ್ಮಿಂದಲೇ ಭಾಷೆಯನ್ನು ಕಲಿತು, ನಮ್ಮ ಆರೈಕೆಯಿಂದಲೇ ರಕ್ತ-ಮಾಂಸಗಳನ್ನು ವರ್ಧಿಸಿಕೊಂಡು , ಸ್ವಲ್ಪ ತಿಳುವಳಿಕೆ ಬರುತ್ತಿದ್ದಂತೆಯೇ ನಮ್ಮನ್ನೇ ಕೂಪಮಂಡೂಕಗಳೆಂದು ಜರಿಯುವುದು ಸೋಜಿಗವೇ ಸರಿ. ಮೂರು -ನಾಲ್ಕು ವರ್ಷದವರೆಗೆ ಕಿವಿಗೆ ಹಿತವಾಗುವ ಮಕ್ಕಳ ವಾಗ್ಬಾಣಗಳು ಕಾಲಕಳೆದಂತೆ ಇರಿಯಲಾರಂಭಿಸುತ್ತವೆ. ಕೆಲವೊಮ್ಮೆ ಜೀವನದ ಸತ್ಯಗಳನ್ನು ತೋರಿಸುತ್ತವೆ. ನಾನೊಮ್ಮೆ ಸಹೋದ್ಯೋಗಿ ಲತಾಳ ಮನೆಗೆ ಹೋಗಿದ್ದೆ. ಆಕೆ ಅವಳ ಬಿಡುವಿಲ್ಲದ ದಿನಚರಿಯನ್ನೆಲ್ಲ ವರ್ಣಿಸಿ “ನೋಡೇ..ಹೊರಗೆ ದುಡಿಯುವುದಲ್ಲದೆ ಮನೆಯಲ್ಲಿ ಅತ್ತೆ-ಮಾವ, ಗಂಡ-ಮಕ್ಕಳಿಗೆ ಮೂರು ಹೊತ್ತಿಗೂ ಥರಾವರಿ ಅಡುಗೆ ಮಾಡಿ ಬಡಿಸ್ತೀನಿ.ಕೆಲಸದವಳನ್ನೂ ಇಟ್ಟುಕೊಳ್ಳದೇ ಎಲ್ಲ ಮನೆಕೆಲಸ ಮಾಡ್ತೀನಿ. ಅಲ್ಲದೇ ಈ ಮಕ್ಕಳ ಸ್ಕೂಲು, ಟ್ಯೂಶನ್, ಕ್ಲಾಸುಗಳು... ರಾತ್ರಿಯಾಗುವಷ್ಟರಲ್ಲಿ ಎಂಥ ಸುಸ್ತು ಗೊತ್ತಾ? ಆದ್ರೆ ಒಬ್ಬರಾದರೂ ನನ್ನ ಸಹಾಯಕ್ಕೆ ಬರಲ್ಲ ನೋಡು... ಅಂದಳು. ಮಧ್ಯೆ ಬಾಯಿ ಹಾಕಿದ ಹನ್ನೆರಡರ ಮಗಳು ನಿಧಿ “ ಏನಮ್ಮಾ... ಹೀಗೆಲ್ಲಾ ಒಬ್ಬಳೇ ಮಾಡು ಅಂತ ನಾವೆಲ್ಲಾ ನಿನಗೆ ಹೇಳಿದ್ದೀವಾ?ಯಾರನ್ನೂ ಹತ್ತಿರಕ್ಕೆ ಸೇರಿಸದೇ ನೀನೇ ಮಾಡ್ತೀಯಾ... ಆಮೇಲೆ ನೀನೇ ಅಳ್ತೀಯಲ್ಲಾ... ಸರೀನಾ ಇದು ? ಅನ್ನೋದೇ!!. ಅರೆ! ಹೌದಲ್ಲ ಎಂಥ ಸತ್ಯ ಇದೆಯಲ್ಲ ನಿಧಿಯ ಮಾತಿನಲ್ಲಿ ಅನಿಸಿತು ನನಗೆ. ನಮ್ಮ ಕೈಲಾದಷ್ಟೇ ಕೆಲಸ ಮಾಡಬೇಕು. ಜಗತ್ತನ್ನು ಮೆಚ್ಚಿಸಲು ಹೋಗಿ ಸುಸ್ತಾಗಿ ಅಳುವ ಅವಶ್ಯಕತೆ ಏನಿದೆ ಅಲ್ಲವೇ? ಈ ಮಾತಿಗೇನೂ ತಲೆದೂಗಬಹುದು. ಆದರೆ ಯೌವನದಲ್ಲೇ ಗಂಡನನ್ನು ಕಳಕೊಂಡ ಗಿರಿಜಳ ಮಗಳಾಡಿದ ಮಾತು ಇಷ್ಟು ವರ್ಷಗಳಾದರೂ ನನ್ನ ಕಿವಿಯಲ್ಲಿ ಗುಯ್ ಗುಡುತ್ತದೆ. ಒಮ್ಮೆ ಆಕೆ ಗಂಡನ ಅನಾರೋಗ್ಯ, ನಡುವೆ ಹುಟ್ಟಿದ ಮಗಳು, ಆರ್ಥಿಕ ಸಂಕಷ್ಟಗಳು, ಸಾಂಸಾರಿಕ ತಾಪತ್ರಯಗಳು,  ಇತ್ಯಾದಿಗಳನ್ನೆಲ್ಲ ಹೇಳಿಕೊಂಡು ಕಣ್ಣೀರು ಹಾಕುತ್ತಿದ್ದಳು. ಅಲ್ಲೇ ಇದ್ದ ಅವಳ ಹದಿನಾರರ ಮಗಳು “ ಏನಮ್ಮಾ.. ನನ್ನ ಹುಟ್ಟಿಸು ಅಂತ ನಾನೇನು ನಿನ್ನ ಬೇಡಿಕೊಂಡೆನಾ?.. ಅಷ್ಟು ಕಷ್ಟಗಳಿದ್ದರೆ ಮಗು ಹುಟ್ಟಿಸಬಾರದಾಗಿತ್ತು.ಮಾಡೋದೆಲ್ಲ ಮಾಡಿ ಈಗ ಅಳೋದು ನೋಡು !” ಎಂಬ ಮಾತಿನೇಟು ಕೊಟ್ಟಳು. ಉತ್ತರವಿಲ್ಲದ ಈ ಪ್ರಶ್ನೆಯನ್ನು, ಒಂಟಿಯಾಗಿ ಬದುಕುತ್ತಿರುವ ಗಿರಿಜಳನ್ನೂ ನೆನೆದರೆ ನನ್ನ ಹೃದಯ ಸ್ತಬ್ಧವಾಗುತ್ತದೆ. ಕಣ್ಣು ಮಂಜಾಗುತ್ತದೆ.

ನಮ್ಮ ಕೂಸುಗಳು ನಮ್ಮದೇ ದೇಹದ ಭಾಗಗಳು. ನಮ್ಮ ವಿಚಾರಗಳ ಪ್ರತಿಬಿಂಬಗಳು. ಮಕ್ಕಳು ದೊಡ್ಡವರ ನಡವಳಿಕೆಗಳನ್ನು, ನಂಬಿಕೆಗಳನ್ನು ಅನುಸರಿಸುತ್ತವೆಯೇ ವಿನ: ಅವರ ಬುದ್ಧಿಮಾತುಗಳನ್ನಲ್ಲ.ನಮ್ಮ ಪ್ರಬುದ್ಧ ಕ್ರಿಯೆಗಳಿಂದ ಬಾಲ್ಯದಿಂದಲೇ ಅವರಲ್ಲಿ ಹಿರಿಯರ ಬಗ್ಗೆ ಗೌರವ, ಕುಟುಂಬದ ಬಗ್ಗೆ ಹೆಮ್ಮೆ, ಕಳಕಳಿಗಳು ಬೆಳೆಯುವಂತೆ ಮಾಡಿದರೆ ಈ ವಾಕ್ ಶರಪಂಜರದಿಂದ ತಕ್ಕಮಟ್ಟಿಗೆ ಪಾರಾಗಬಹುದು ,ಅನ್ಯರನ್ನು ರಕ್ಷಿಸಬಹುದು . ಹಾಗೊಂದು ವೇಳೆ ಪರಿಸರದ ಪ್ರಭಾವದಿಂದಲೋ ಅಥವಾ ಹುಟ್ಟುಸ್ವಭಾವದಿಂದಲೋ ಬಿರುನುಡಿಗಳನ್ನು ಆಡಲಾರಂಭಿಸಿದಾಗ, ಆಗಾಗ ಎಚ್ಚರಿಕೆ ಕೊಟ್ಟು, ತಿಳಿಹೇಳುತ್ತಿದ್ದರೆ, ಸಕಾಲದಲ್ಲಿ ಮೃದುವಾಗಿ ತಿದ್ದಿದರೆ ನಮ್ಮ ಕಂದ ಸಮಾಜಕ್ಕೊಂದು ಆಸ್ತಿಯಾಗಬಹುದು.