Tuesday, 2 October 2018
Abolishing Section 497 - Green signal to adultery???
Recently India was ATTACKED by none other than supreme court .. Yes There were few judgments like abolishing article 377, 497 and opening the doors of temple to all females…. OMG!!!… few felt like glorious Indian culture breathed its last!! No problem… each one has the right to have opinions. But when I spoke to my student Sushmitha Viswanathan currently a law student, I was surprised at the way the media interprets the news!!
First let us see what does Section 497 in The Indian Penal Code says..
Adultery. —Whoever has sexual intercourse with a person who is and whom he knows or has reason to believe to be the wife of another man, without the consent or connivance of that man, such sexual intercourse not amounting to the offence of rape, is guilty of the offence of adultery, and shall be punished with imprisonment of either description for a term which may extend to five years, or with fine, or with both. In such case the wife shall not be punishable as an abettor.
So women are not prosecuted for adultery, only men are.
It doesn’t punish women because It treats woman as property of husband . If husband’s possession is used by some random person without his permission, that person shall be punished . i.e. a person having intercourse with someone else’s wife without that person’s consent , will be sent to jail because he has used another man’s property without asking him. But if he takes permission then it is not crime of adultery. So consent of husband is most important here. [ see second line] . However if wife has not consented then it is called as rape.
Also it gives permission to the husband to have intercourse with any unmarried woman or a widow. Because adultery is held only against married woman . This law is silent about unmarried woman or a widow, because they are not anyone’s property . women become just possessions when they get married!!
So we need a better law which treats men and women alike, punishes them alike or does not punish them alike.
But court never said women can happily engage in to multiple relationships .There are other sections to handle the issues which arise due to adultery ….Only this section is invalid now.
ಕೆಲ ದಿನಗಳ ಹಿಂದೆ ನಮ್ಮ ದೇಶದಲ್ಲಿ ಆಗಬಾರದ್ದು ಆಗಿ ಹೋಯ್ತು.....
“ಸಂಸ್ಕೃತಿ, ವೈವಿಧ್ಯತೆ ಮಣ್ಣುಪಾಲಾಯ್ತು.. ವ್ಯಭಿಚಾರ-ಸಲಿಂಗಕಾಮಕ್ಕೆ ರಾಜಮರ್ಯಾದೆಯ ಸ್ವಾಗತ ಸಿಕ್ತು..ಅದೂ ಯಾರಿಂದ ?? ಸುಪ್ರೀಂ ಕೋರ್ಟ್ ನಿಂದ!!” ಅಂತ ಎಲ್ಲೆಲ್ಲೂ ತಲ್ಲಣ ಸೃಷ್ಟಿಯಾದ್ದು ನಿಮಗಿನ್ನೂ ನೆನಪಿರಬಹುದು ಅಲ್ವೇ....ಪತ್ರಿಕೆಗಳಲ್ಲಿ ಓದಿದಾಗ Section 497 ವಿಚಾರದಲ್ಲಿ ನಂಗೂ ಒಂದು ಕ್ಷಣ ಇದೇನಪ್ಪ ಹೀಗೆ.. ಅಂತ ಅನಿಸಿದಾಗ ಈಗ ಕಾನೂನು ಓದುತ್ತಿರುವ ನನ್ನ ಹಳೆ ಸ್ಟೂಡೆಂಟ್ ಸುಶ್ಮಿತಾಗೆ ಫೋನಾಯಿಸಿದೆ.. ಓ.. ಹೀಗಾ ಇದು ಅಂತ ಸತ್ಯ ಗೊತ್ತಾದ ಅನಿಸಿದ್ದು ಮಾಧ್ಯಮಗಳು ಇಂಥ ಸೂಕ್ಷ್ಮ ವಿಚಾರಗಳನ್ನು ಪ್ರಕಟಿಸುವಾಗ ಸ್ವಲ್ಪ ಹುಷಾರಾಗಿ ಪದಗಳನ್ನು ಬಳಸಬೇಕು. ಜನರ ಗಮನ ಸೆಳೀಬೇಕು ಅಂತ ಸತ್ಯದ ಸಮಾಧಿ ಮೇಲೆ ಸುಳ್ಳಿನ ಅರಮನೆ ಕಟ್ಟೋದನ್ನ ನಿಲ್ಲಿಸಬೇಕು...
Section 497 ವ್ಯಭಿಚಾರದ ವ್ಯಾಖ್ಯಾನವನ್ನು ಈ ರೀತಿ ಕೊಡುತ್ತದೆ. “ ಒಬ್ಬ ಹೆಂಗಸು ಇನ್ನೊಬ್ಬನ ಪತ್ನಿ ಎಂದು ತಿಳಿದಿದ್ದರೂ, ಆಕೆಯ ಪತಿಯ ಒಪ್ಪಿಗೆ ಇಲ್ಲದೆ , ಆಕೆಯ ಜೊತೆ ಲೈಂಗಿಕ ಸಂಬಂಧವನ್ನು ಒಬ್ಬ ಗಂಡಸು ಹೊಂದಿದ್ದರೆ ಮತ್ತು ಇದಕ್ಕೆ ಆಕೆಯ ಒಪ್ಪಿಗೆ ಇದ್ದರೆ ಅದನ್ನು ವ್ಯಭಿಚಾರ ಎಂದು ಪರಿಗಣಿಸಲಾಗುವುದು. ಲೈಂಗಿಕ ಸಂಬಂಧವನ್ನು ಹೊಂದಿದ ಗಂಡಸಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು. ಆದರೆ ಲೈಂಗಿಕ ಸಂಬಂಧವನ್ನು ಹೊಂದಿರುವ ಆ ಹೆಂಗಸನ್ನು ವ್ಯಭಿಚಾರಕ್ಕೆ ಕೇವಲ ಸಹಾಯ ಮಾಡಿದವಳು ಎಂದು ಪರಿಗಣಿಸಲಾಗುವುದು ಮತ್ತು ಆಕೆಗೆ ಯಾವ ಶಿಕ್ಷೆಯೂ ಇರುವುದಿಲ್ಲ”
ಅಂದರೆ ವ್ಯಭಿಚಾರದಲ್ಲಿ ಪಾಲ್ಗೊಂಡ ಗಂಡಿಗೆ ಶಿಕ್ಷೆ ಮತ್ತು ಹೆಣ್ಣಿಗೆ ವಿನಾಯಿತಿ! ಇಲ್ಲಿ ಹೆಣ್ಣಿಗೆ ಶಿಕ್ಷೆ ಯಾಕಿಲ್ಲ ಎಂದರೆ ಮದುವೆಯಾದ ಹೆಣ್ಣು ತನ್ನ ಗಂಡನ ಸೊತ್ತು.
ಅದು ಹೇಗೆ ಅಂದ್ರೆ ಉದಾಹರಣೆಗೆ ಒಬ್ಬ ಗಂಡಸಿಗೆ ಸೇರಿದ ಒಂದು ವಸ್ತುವನ್ನು ಇನ್ನೊಬ್ಬ ಗಂಡು ಅನುಮತಿಯಿಲ್ಲದೆ ಉಪಯೋಗಿಸುತ್ತಾನೆ. ಆಗ ಆ ಇನ್ನೊಬ್ಬ ಗಂಡಿಗೆ ಶಿಕ್ಷೆಯಾಗಬೇಕು ಸರಿ ತಾನೇ? ಆ ವಸ್ತುವನ್ನು ಉಪಯೋಗಿಸಲು ಅದರ ಮಾಲೀಕನ ಒಪ್ಪಿಗೆ ಬೇಕೇ ಬೇಕು... ಅಲ್ವೇ? ಹಾಗೆಯೇ ಇಲ್ಲಿಯೂ ಒಬ್ಬನ ಪತ್ನಿ ಅವನ ಅನುಮತಿ ಇಲ್ಲದೆ ಇನ್ನೊಬ್ಬ ಗಂಡಿನ ಜೊತೆ ಲೈಂಗಿಕ ಸಂಬಂಧ ಹೊಂದಿದರೆ ಆ ಗಂಡಿಗೆ Section 497 ಶಿಕ್ಷೆ ವಿಧಿಸುತ್ತದೆ. ಆದರೆ ಆ ಹೆಂಗಸಿಗೆ ಯಾವ ಶಿಕ್ಷೆಯೂ ಇಲ್ಲ !! ಆದರೆ ಈ ಸಂಬಂಧಕ್ಕೆ ಗಂಡನ ಒಪ್ಪಿಗೆ ಇದ್ದರೆ ಅದು ವ್ಯಭಿಚಾರ ಅಲ್ಲ. ಆದ್ದರಿಂದ ಗಂಡನ ಒಪ್ಪಿಗೆ ಅತಿ ಮುಖ್ಯ ಅಂತಾಯ್ತು!! ಜೊತೆಗೆ ಯಾವುದೇ ಗಂಡಸು ಅವಿವಾಹಿತ ಹಾಗು ವಿಧವೆಯ ಜೊತೆ ಲೈಂಗಿಕ ಸಂಬಂಧ ಹೊಂದಲು ಅವಕಾಶ ಮಾಡಿ ಕೊಡುತ್ತದೆ. ಯಾಕೆ ಹೇಳಿ... ಈ ಮಹಿಳೆಯರಿಗೆ ಒಡೆಯ ಎನಿಸಿಕೊಳ್ಳುವವರು ಇರುವುದಿಲ್ಲ.
ಇಂಥ ವಿರೋಧಾಭಾಸಗಳಿದ್ದುದರಿಂದ ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿತು. ಯಾಕೆಂದರೆ ನಮಗೆ ಗಂಡು ಹೆಣ್ಣನ್ನು ಸಮಾನವಾಗಿ ಕಾಯುವ-ಶಿಕ್ಷಿಸುವ ಅಥವಾ ಕ್ಷಮಿಸುವ ಕಾನೂನು ಮಾತ್ರ ಬೇಕು ಅಲ್ಲವೇ? ಹಾಗಂತ ನಮ್ಮ ಮಾಧ್ಯಮಗಳು ವರದಿ ಮಾಡಿದಂತೆ ಇನ್ನು ಹೆಂಗಸರೂ ಆರಾಮವಾಗಿ ಯಾರ ಜೊತೆ ಬೇಕಾದರೂ ಲೈಂಗಿಕ ಸಂಬಂಧ ಹೊಂದಬಹುದೇ? ಖಂಡಿತ ಇಲ್ಲ... ಆ ವಿಚಾರಗಳಿಗೆ ಬೇರೆ ಕಾನೂನುಗಳಿವೆ.. ಶಿಕ್ಷೆಯೂ ಇದೆ. ಕೇವಲ Section 497 ಇರುವುದಿಲ್ಲ ಅಷ್ಟೇ...
ರೋಚಕ ಸುದ್ದಿಗಳನ್ನು ಬೇಜವಾಬ್ದಾರಿಯಿಂದ ಪ್ರಕಟಿಸುವ ಮಾಧ್ಯಮಗಳ ಬಾಯಿ ಮುಚ್ಚಿಸುವ, ರೋಚಕ ಸುದ್ದಿಗಳನ್ನು ಕಣ್ಣು ಮುಚ್ಚಿ ನಂಬುವ ಜನರ ಕಣ್ ತೆರೆಸುವ ಕಾನೂನು ಎಂದು ಬರುವುದೋ?
Tuesday, 31 July 2018
ಬನ್ರಿ.... ಜರ್ಮನಿಯ ಮನಿಗ ........
“ನಮ್ ಥರ ಸಂಸ್ಕೃತಿ, ಕುಟುಂಬವ್ಯವಸ್ಥೆ
ಪ್ರಪಂಚದಲ್ಲೆಲ್ಲೂ ಇಲ್ಲ ಬಿಡಿ... ಫಾರಿನ್ ನಲ್ಲಿ ಮಾತೆತ್ತಿದರೆ ಡೈವೊರ್ಸು, ಮಕ್ಕಳಂತೂ
ಕುಲಗೆಟ್ಟು ಹೋಗಿರ್ತಾರೆ....” ಇಂಥ ಮಾತುಗಳನ್ನು ನಾನು ಕೇಳಿದಾಗೆಲ್ಲ ಒಮ್ಮೆ ಒಂದು ಫಾರಿನ್
ಕುಟುಂಬದ ಜತೆ ಸ್ವಲ್ಪ ದಿನ ಇದ್ದು ಬರಬೇಕು ...ಇದೆಲ್ಲ
ನಿಜವಾ ಅಂತ ನೋಡ್ಬೇಕು.. ಅಂತ ಅನ್ಕೋತಿದ್ದೆ. ಅಂಥ ಅಪೂರ್ವ ಅವಕಾಶ ಕೊನೆಗೂ ನಂಗೆ ಸಿಕ್ತು.
ಜರ್ಮನಿಯ ಮ್ಯುನಿಕ್ ನಗರದ ಸಮೀಪದ ಲಾಫ್ ಅನ್ನೋ ಸಣ್ಣ ಊರಿನ ಶಾಲೆಯೊಂದರ ಜೊತೆ ನಮ್ಮ ಶಾಲೆಯವರು
ನಡೆಸುವ ಸ್ಟೂಡೆಂಟ್ ಎಕ್ಸ್ ಚೇಂಜ್ ಪ್ರವಾಸಕ್ಕೆ ಹೋಗುವ ೨೯[ ೮,೯,೧೦ನೇ ತರಗತಿಯ] ವಿದ್ಯಾರ್ಥಿಗಳ
ಜೊತೆ ಈ ವರ್ಷ ನನ್ನನ್ನು ಕಳಿಸಿದ್ದರು. ಆ ಜರ್ಮನ್ ಶಾಲೆಯಿಂದ ಭಾರತ ಪ್ರವಾಸಕ್ಕೆ ಬರಲಿರುವ ೨೯ ವಿದ್ಯಾರ್ಥಿಗಳ
ಮನೆಯಲ್ಲಿ ನಮ್ಮ ವಿದ್ಯಾರ್ಥಿಗಳು ಮತ್ತು ಅವರ ಜೊತೆ ಬರಲಿರುವ ಶಿಕ್ಷಕರ ಮನೆಯಲ್ಲಿ ನಾನು ೧೫ ದಿನ
ಇರಬೇಕು. ಅವರ ಜೊತೆ ನಿತ್ಯಜೀವನದಲ್ಲಿ[ಊಟ-ಅಡುಗೆ-ಶಾಲೆ-ಪಾಠ-ಸುತ್ತಾಟ ಇತ್ಯಾದಿ]
ಪಾಲ್ಗೊಳ್ಳಬೇಕು. ಮುಂದೆ ಅಕ್ಟೋಬರ್ ತಿಂಗಳಲ್ಲಿ ಆ ೨೯ ವಿದ್ಯಾರ್ಥಿಗಳು ಮತ್ತವರ ಶಿಕ್ಷಕರು ೧೫
ದಿನಗಳ ಪ್ರವಾಸಕ್ಕೆ ಬೆಂಗಳೂರಿಗೆ ಬಂದಾಗ ನಮ್ಮ ಮನೆಗಳಲ್ಲಿ ಆತಿಥ್ಯ ಕೊಡಬೇಕು. ನಮ್ಮ ಸಂಸ್ಕೃತಿ,
ಶಾಲೆಯ ಪರಿಚಯ ಮಾಡಿಕೊಡಬೇಕು. ಪರಸ್ಪರ ಅಪರಿಚಿತ ದೇಶ-ಸಂಸ್ಕೃತಿಗಳನ್ನು ಬೆಸೆಯಲು ಶಾಲೆಗಳು
ನಡೆಸುವ ಅತ್ಯುತ್ತಮ ಪ್ರಯತ್ನವಿದು.
’ ತನು-ಮನ-ಆತ್ಮ....
’ [ Body-Mind-Soul] ಎಂಬುದು ನಮ್ಮ ಈ
ಕಲಿಕಾ ಪ್ರವಾಸದ ಮುಖ್ಯ ವಿಷಯವಾಗಿತ್ತು. ಉಪನಿಷತ್ತಿನಲ್ಲಿ ವರ್ಣಿತವಾಗಿರುವ ನಮ್ಮ ದೇಹದ
ಪಂಚಕೋಶಗಳ ಪರಿಚಯ[ಅನ್ನ-ಮನೋ-ಜ್ಞಾನ-ವಿಜ್ಞಾನ-ಆನಂದಮಯ ಕೋಶಗಳು] , ಭಾರತೀಯ ಶಾಸ್ತ್ರೀಯ ಸಂಗೀತ -ನೃತ್ಯಪ್ರಕಾರಗಳು
ಮತ್ತು ಭಾರತೀಯ ಶಿಲ್ಪಕಲೆ ಈ ಮೂರು ಶೀರ್ಷಿಕೆಗಳಡಿಯಲ್ಲಿ ಎರಡು ಗಂಟೆಗಳ ಕಾರ್ಯಕ್ರಮವನ್ನು ಆ
ಶಾಲೆಯಲ್ಲಿ ನಮ್ಮ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಕೊನೆಗೆ ನಾವು ಇಲ್ಲಿಂದ ಒಯ್ದಿದ್ದ
ಉಂಡೆ-ಬರ್ಫಿ-ಮೈಸೂರುಪಾಕ್ -ಚಕ್ಕುಲಿ-ಕೋಡುಬಳೆ-ಓಂಪುಡಿಗಳನ್ನು ಪ್ರೇಕ್ಷಕರಿಗೆಲ್ಲ ಹಂಚಿದೆವು.
ಅಚ್ಚರಿ-ಮೆಚ್ಚುಗೆಯ ಮಹಾಪೂರವೇ ನಮ್ಮ ಕಡೆಗೆ ಹರಿದು ಬಂತು.
ಆ ಶಾಲೆಯ ಗಣಿತದ
ಟೀಚರ್ ಶ್ರೀಮತಿ ಹೈಕೆ ಖ್ರಾಮೆಸ್ ಅವರ ಮನೆಯಲ್ಲಿ ನನ್ನ ವಾಸ. ಗಂಡ-ಹೆಂಡತಿ, ವಯಸ್ಸಿಗೆ ಬಂದ
ಮೂರು ಮಕ್ಕಳಿರುವ ಆ ಮನೆಯಲ್ಲಿ ಇದ್ದ ಮೇಲೆ ವಿದೇಶೀ ಸಮಾಜದ ಬಗ್ಗೆ ನಮ್ಮಲ್ಲಿ ಎಷ್ಟು ತಪ್ಪು
ಕಲ್ಪನೆಗಳಿವೆ ಅನ್ನೋ ಸತ್ಯ ಗೊತ್ತಾಯ್ತು. ಮನೆಯಲ್ಲಿ ಸಮಾನತೆ - ಪರಸ್ಪರ ಗೌರವ ಅನ್ನುವುದನ್ನು ಸೊಗಸಾಗಿ ರೂಢಿಸಿಕೊಂಡಿವೆ ಅಲ್ಲಿನ ಹೆಚ್ಚಿನ
ಕುಟುಂಬಗಳು. ಹೆಂಡತಿ ಕೆಲಸಕ್ಕೆ ಹೋಗುತ್ತಿರಲಿ-ಬಿಡಲಿ, ಗಂಡ ತನ್ನನ್ನು ತಾನು ನೋಡಿಕೊಳ್ತಾನೆ.
ಮಕ್ಕಳು ಬುದ್ಧಿ ಬರುತ್ತಿದ್ದಂತೆಯೇ ತಂದೆ- ತಾಯಿಯ ಜೊತೆ ಕೆಲಸಕ್ಕೆ ಕೈ ಜೋಡಿಸುತ್ತಾರೆ. ಮನೆಯ
ಎಲ್ಲ ಕೆಲಸಗಳನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳುತ್ತಾರೆ. ನಾನಿದ್ದ ಆ ಮನೆಯಲ್ಲಿ ಭಾನುವಾರವೂ
ಎಲ್ಲರೂ ಬೇಗನೇ ಎದ್ದರು. ದೊಡ್ಡ ಮಗ ಬಾತ್ರೂಂ- ಟಾಯ್ಲೆಟ್ -ಗಾರ್ಡನ್ ಗಳನ್ನು ಸ್ವಚ್ಛಗೊಳಿಸಿದ,
ಎರಡನೆಯವನು ಮನೆ ಮತ್ತು ಎಲ್ಲರ ಕಾರುಗಳನ್ನು ಶುಭ್ರಗೊಳಿಸಿದ. ಮಗಳು ಎಲ್ಲರ ಬಟ್ಟೆಗಳನ್ನು
ವಾಶಿಂಗ್ ಮಿಶ್ ನ್ನಿಗೆ ಹಾಕಿ, ತಂದೆಯ ಜೊತೆ ಅಡುಗೆಗೆ ನಿಂತಳು. ಗಂಡ ಪಾತ್ರೆಗಳನ್ನು ಮಿಶನ್ನಿಗೆ
ಹಾಕಿ ಬೆಳಗಿನ ತಿಂಡಿ-ಮಧ್ಯಾಹ್ನದ ಊಟವನ್ನು ಸಿದ್ಧಗೊಳಿಸುವ ಹೊತ್ತಿಗೆ ಪಾತ್ರೆಗಳು ತೊಳೆದು
ಸಿದ್ಧವಾದವು. ಅವನ್ನೆಲ್ಲ ಒಪ್ಪವಾಗಿ ಆಯಾಯ ಜಾಗದಲ್ಲಿ ಇಟ್ಟ . ನನ್ನ ಶಿಕ್ಷಕಿ ಗೆಳತಿ ಹಿಂದಿನ
ದಿನ ತಂದಿಟ್ಟಿದ್ದ ಮನೆ ಸಾಮಾನು ತರಕಾರಿ ಹಣ್ಣುಗಳನ್ನು ಜೋಡಿಸಿ ಇಟ್ಟು ಎಲ್ಲರ ಬಟ್ಟೆಗಳಿಗೆ
ಇಸ್ತ್ರಿ ಹಾಕಿದರು. ನಂತರ ಎಲ್ಲರೂ ಸ್ನಾನ ಮಾಡಿ ಒಟ್ಟಿಗೆ ಕೂತು ತಿಂಡಿ ತಿನ್ನುವುದನ್ನು
ನೋಡುತ್ತ ನಾನು ಮೂಕಳಾದೆ.
ದಿನವೂ ರಾತ್ರಿಯ
ಊಟಕ್ಕೆ ಆ ಊರಿನ ಯಾವುದಾರೊಂದು ಮನೆಯಿಂದ ನನಗೆ ಆಹ್ವಾನ ಇರುತ್ತಿತ್ತು. ರಾತ್ರಿ ಊಟ ಮುಗಿದ ಮೇಲೆ
ಹೆಂಡತಿ ಒರೆಸು-ತೊಳೆ-ಬಳಿ..., ಗಂಡ ಅಡುಗೆಯ
ಬಗ್ಗೆ ನಾಲ್ಕು ಕಮೆಂಟ್ ಮಾಡಿ... ,ಕಾಲು ಚಾಚಿ ಟಿ.ವಿ ನೋಡುವ ನಮ್ಮ ಆದರ್ಶ ಸಂಸಾರಗಳು ಎಲ್ಲೂ
ಕಾಣಲಿಲ್ಲ. ನಿಮಿಷ ಮಾತ್ರದಲ್ಲಿ ಎಲ್ಲರೂ ಸೇರಿ ಅಡುಗೆಮನೆಯನ್ನು ಓರಣವಾಗಿಸಿ, ಹರಟೆಗೆ
ಸಜ್ಜಾಗುತ್ತಿದ್ದರು. ರಾತ್ರಿ ಹತ್ತು ಗಂಟೆಗೆ ಸೂರ್ಯಾಸ್ತವಾಗುತ್ತಿದ್ದುದರಿಂದ ಕೆಲ ಬೀದಿಗಳ
ಎಲ್ಲ ಮನೆಗಳವರು ಕುರ್ಚಿಗಳನ್ನು ಹಾಕಿಕೊಂಡು ಒಟ್ಟಾಗಿ ಹರಟುವ ಅದ್ಭುತ ದೃಶ್ಯಗಳೂ ಕಂಡವು. ನಾನು
ಹೋದ ಒಂದೆರಡು ಮನೆಗಳವರು ಡೈವೋರ್ಸ್ ಆದ ಏಕಾಂಗಿಗಳು. ಹಾಗಂತ ಗೋಳೋ ಅಂತ ಹಳೆಕತೆ ಹೇಳಿಕೊಳ್ಳದೇ
ಮುಂದಿನ ಜೀವನದ ಬಗ್ಗೆ ನನ್ನೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು. ವಯಸ್ಸಾದ ತಂದೆ-ತಾಯಿ
ಮಕ್ಕಳ ಜೊತೆ ವಾಸಿಸುವ ಸಂಸ್ಕೃತಿ ಅಲ್ಲಿ ಇಲ್ಲ. ತಮ್ಮ ಕೈಲಾಗುವಷ್ಟು ದಿನ ಸ್ವತಂತ್ರವಾಗಿದ್ದು, ಹಾಸಿಗೆ
ಹಿಡಿಯುತ್ತಿದ್ದಂತೆಯೇ ಸರಕಾರವೇ ನಡೆಸುವ ವೃದ್ಧಾಶ್ರಮಗಳಿಗೆ ಸೇರುತ್ತಾರೆ. ನನಗೆ ಇಬ್ಬರು
ವೃದ್ಧರು ಸಿಕ್ಕಿದರು. ಅವರಿಗೆ ತಮ್ಮ ಸ್ವತಂತ್ರ ಜೀವನದ ಬಗ್ಗೆ ಸಂತೋಷ-ಹೆಮ್ಮೆ ಕಾಣಿಸಿತು. “ಯಾಕೆ ಈ ಕಷ್ಟ..ಮಕ್ಕಳ ಮನೆಯಲ್ಲಿ ಇರಬಾರದೇ?” ಅಂತ
ಒಬ್ಬರನ್ನು ಮಾತಿಗೆಳೆದೆ. ಹೇ ಲೇಡಿ..ಐ ಆಮ್ ಸ್ಟಿಲ್ ಸ್ಟಾಂಡಿಂಗ್ .. ನಾಟ್ ರೀಚಡ್ ದ ಗ್ರೇವ್
ಯೆಟ್[ ಗೋರಿ ಸೇರಿಲ್ಲ.. ನನ್ನ ಕಾಲ ಮೇಲೆ ನಿಂತಿದೀನಿ.. ಕಾಣ್ತಾ ಇಲ್ವೇನಮ್ಮ....] ಅನ್ನೋ
ಉತ್ತರ ರಪ್ಪಂತ ಹೊಡೀತು.
ಹೆಚ್ಚಿನ ಮನೆಗಳಲ್ಲಿ
ಯೋಗಾಭ್ಯಾಸವನ್ನು ಕಂಡು ಅಚ್ಚರಿಯಾಯಿತು. ಸಂಸ್ಕೃತ ಕಲಿಯಲು ಮಾರ್ಗದರ್ಶನ ಮತ್ತು ಬಿಕೆ ಎಸ್ ಅಯ್ಯಂಗಾರರ ಜರ್ಮನ್ ಭಾಷೆಯ ಪುಸ್ತಕವನ್ನು
ನನಗೆ ತೋರಿಸಿ, ಸಂಸ್ಕೃತ ಪದಗಳ ಉಚ್ಚಾರಣೆಯನ್ನು ಸರಿಪಡಿಸುವಂತೆ ಕೇಳಿಕೊಂಡಾಗ ಹೆಮ್ಮೆಯಿಂದ ಹೃದಯ
ತುಂಬಿ ಬಂತು. ಭಾರತೀಯ ನೃತ್ಯ-ಸಂಗೀತ-ಅಡುಗೆಯ ಬಗ್ಗೆ ಕೊನೆಯಿಲ್ಲದ ಪ್ರಶ್ನೆಗಳು. ನಮ್ಮ ಬಹುಭಾಷಾ
ಪಾಂಡಿತ್ಯ, ಇಂಗ್ಲೀಷ್ ಜ್ಞಾನವನ್ನು ಎಷ್ಟು ಹೊಗಳಿದರೂ ಸಾಲದು ಅವರಿಗೆ... ಶಬ್ದ ಯೋಗ, ವಿನ್ಯಾಸ
ಯೋಗ, ಫ್ಲೋ ಯೋಗ ಹೀಗೆ ಯೋಗದ [ವ್ಯಾಪಾರೀ] ಮುಖಗಳ ದರ್ಶನವೂ ಆಯಿತು. ಈ ಯೋಗ ಶಿಕ್ಷಕರು
ಮೆಕ್ಸಿಕೋ, ಹಾಲೆಂಡ್ ಮುಂತಾದೆಡೆ ಕಲಿತವರಂತೆ!!
ಅವರ ನಿತ್ಯಾಹಾರವಾದ
ಮೊಟ್ಟೆ,ಮಾಂಸ ತಿನ್ನದ, ಬೀರು,ವೈನು ಕುಡಿಯದ ನಾನೊಬ್ಬಳು ಅವರಿಗೆ ವಿಚಿತ್ರ ಜೀವಿ! ಹಣ್ಣು-ತರಕಾರಿ, ಮೊಸರು,ಜ್ಯೂಸು,
ಸಿರಿಧಾನ್ಯ ಅಡುಗೆಗಳಿಂದ ನನ್ನ ತಟ್ಟೆಯನ್ನು ತುಂಬಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದರು.
ಸೂರ್ಯಾಸ್ತವಾಗುತ್ತಿದ್ದಂತೆ ದೀಪ ಹಚ್ಚುವ ಕ್ರಮವನ್ನು ಅನೇಕ ಮನೆಗಳಲ್ಲಿ ನೋಡಿದೆ. ಮನೆಗೆ
ಐಶ್ವರ್ಯ-ಸಂತೋಷ ದೇವತೆ ಬರಲಿ ಅಂತ ಅವರ ಉದ್ದೇಶವಂತೆ. ಒಬ್ಬಾಕೆ ಎರಡು ದೀಪ ಹಚ್ಚಿದ್ದಳು .
ಯಾಕೆ? ಅಂದೆ. ಒಂದು ಅವರ ಮನೆಗೆ. ಇನ್ನೊಂದು ಅಲ್ಲೆಲ್ಲೋ ದೂರ ಇರುವ ಅವಳ ವಯಸ್ಸಾದ ಅಪ್ಪ ಅಮ್ಮನ
ಮನೆಗಂತೆ... ಅವರಿಗೆ ಮೈಯಲ್ಲಿ ಶಕ್ತಿ ಇಲ್ಲ, ಮರೆವು ಬೇರೆ.... ಅದಕ್ಕೆ ಅವರಿಗೋಸ್ಕರ ನಾನೇ
ಹಚ್ತೀನಿ ಅಂದ್ಲು. ಏನೇ ಹೇಳಿ... ಎಲ್ಲಿ ಹೋದ್ರೂ ಹೆಣ್ಮಕ್ಕಳ ತವರಿನ ಮೋಹ ಮಾತ್ರ ಒಂದೇ ಥರ
ಅನಿಸಿತು.....
ಅಲ್ಲಿನ ಶಿಕ್ಷಣ
ವ್ಯವಸ್ಥೆ ಕೂಡಾ ಕುತೂಹಲಕಾರಿ. ೪ನೇ ತರಗತಿಯವರೆಗೆ ಎಲ್ಲ ಮಕ್ಕಳೂ ಒಂದೇ ಶಾಲೆಯಲ್ಲಿ ಓದುತ್ತಾರೆ..ಕೊನೆಯಲ್ಲಿ
ಪರೀಕ್ಷೆ ನಡೆಸಿ ಮಕ್ಕಳ ಕೌಶಲಗಳನ್ನು ನಿರ್ಧರಿಸುತ್ತಾರೆ. ಐದರಿಂದ ಹನ್ನೆರಡನೇ ತರಗತಿಯವರೆಗಿನ
ಶಿಕ್ಷಣಕ್ಕೆ ಮೂರು ಥರದ ಶಾಲೆಗಳಿವೆ-೧. ಲಾಜಿಕಲ್ ಥಿಂಕಿಂಗ್ ಇರುವವರಿಗೆ ,೨. ಕಲೆ-ಆಟಗಳಲ್ಲಿ
ಜಾಣರಿಗೆ ೩. ಕಲಿಕೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದವರಿಗೆ. ಮಕ್ಕಳು ಈ ಮೂರು ಶಾಲೆಗಳಲ್ಲಿ
ತಮ್ಮ ತಮ್ಮ ಕೌಶಲಕ್ಕೆ ಅನುಗುಣವಾಗಿ ಐದನೇ ತರಗತಿಗೆ ಸೇರುತ್ತಾರೆ. ಅಲ್ಲಿ ತಮ್ಮ ಸಾಮರ್ಥ್ಯಕ್ಕೆ
ಅನುಗುಣವಾದ ವಿದ್ಯಾಭ್ಯಾಸ ಪಡೆಯುತ್ತಾರೆ. ಮಧ್ಯೆ ಮಕ್ಕಳ ಆಸಕ್ತಿಗಳು ಬದಲಾದರೆ ಶಾಲೆ ಬದಲಿಸುವ
ಅವಕಾಶ ಇದೆ. ಕೆಲ ಪಾಲಕರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಹೇರುವುದು, ಆ ನಾಲ್ಕನೇ ಕ್ಲಾಸಿನ
ಶಿಕ್ಷಕರ ಜೊತೆ ಮುನಿಸಿಕೊಳ್ಳುವುದು ಮಾಡ್ತಾರಂತೆ. ಆದರೆ ೧೨ನೇ ತರಗತಿವರೆಗಿನ ಸಂಪೂರ್ಣ ಉಚಿತ ಶಿಕ್ಷಣ
ಸರಕಾರದ ಬಿಗಿಮುಷ್ಟಿಯಲ್ಲಿರುವುದರಿಂದ ,
ಭ್ರಷ್ಟಾಚಾರ ಕಮ್ಮಿ ಇರುವುದರಿಂದ ಹೆಚ್ಚು ಗಲಾಟೆ ಆಗುವುದಿಲ್ಲ ಎಂದರು ಅಲ್ಲಿನವರು. ನಾನು ಹೋದ
ಶಾಲೆ ಪುಸ್ತಕ ಬ್ರಹ್ಮರ ಮೊದಲನೇ ವರ್ಗದ್ದು. ಅಲ್ಲಿ ವಿಜ್ಞಾನ-ಗಣಿತಕ್ಕೆ ಹೆಚ್ಚು
ಪ್ರಾಶಸ್ತ್ಯವನ್ನು ಗಮನಿಸಿದೆ.
ಹೆಚ್ಚಿನ ಎಲ್ಲ
ಪಾಶ್ಚಾತ್ಯ ದೇಶಗಳಂತೆ ಇಲ್ಲೂ ಪಾಲಕರು ಮಕ್ಕಳನ್ನು ಸ್ವತಂತ್ರರನ್ನಾಗಿ ಬೆಳೆಸುತ್ತಾರೆ.
ಅರೇಂಜ್ಡ್ ಮದುವೆಯ ಕಲ್ಪನೆಯೇ ಇಲ್ಲದಿರುವುದರಿಂದ ತಮ್ಮ ಸಂಗಾತಿಯನ್ನು ಹುಡುಕಿಕೊಳ್ಳುವ
ಜವಾಬ್ದರಿಯೂ ಮಕ್ಕಳದ್ದೇ. ಆದ್ದರಿಂದ ಜಾತಕ -ಎತ್ತರ -ಮೈಬಣ್ಣ -ವಯಸ್ಸು ಈ ವಿಚಾರಗಳಿಗಿಂತ
ಪರಸ್ಪರರ ವಿದ್ಯಾಭ್ಯಾಸ-ಸಂಪಾದನೆ-ಆಸಕ್ತಿಗಳಿಗೆ ಯುವಜನರು ಪ್ರಾಮುಖ್ಯತೆ ಕೊಡುತ್ತಾರೆ. ಆದರೆ
ಕೆಲವೊಮ್ಮೆ ತಪ್ಪು ಆಯ್ಕೆಗಳು ನಡೆಯುವುದು, ಮೋಸ ಹೋಗುವುದು, ದುಶ್ಚಟಗಳು, ಅಹಂಕಾರ ಇತ್ಯಾದಿ
ಸಮಸ್ಯೆಗಳು ಯುವಕುಟುಂಬಗಳನ್ನು ಬಾಧಿಸುತ್ತವೆ.
ಆದ್ದರಿಂದ ಡೈವೋರ್ಸ್ ಗೆ ಸಾಮಾಜಿಕವಾಗಿ ಒಪ್ಪಿಗೆ ಇದೆ. ಹೆಚ್ಚು ತಲೆ ಕೆಡಿಸಿಕೊಳ್ಳದೇ ಇನ್ನೊಬ್ಬ
ಸಂಗಾತಿಯನ್ನು ಹುಡುಕುತ್ತಾರೆ ಈ ಜನ. ನಿಜ... ಹೀಗಾದಾಗ
ಮಕ್ಕಳು ಜೀವನ ಅತಂತ್ರವಾಗುವುದೂ ಇದೆ. ಈ ಸಮಸ್ಯೆ ಅವರ ಸಮಾಜವನ್ನು ಕಾಡುತ್ತಿರುವುದು
ನಿತ್ಯಸತ್ಯ.
ಅಂತೂ ಮನೆ ವಾಸ, ಮ್ಯುನಿಕ್,
ಆಲ್ಫ್ಸ್ ಪರ್ವತಗಳ ಪ್ರವಾಸ ಮುಗಿಸುವ ಹೊತ್ತಿಗೆ ಅನೇಕ ಹೊಸ ವಿಚಾರಗಳನ್ನು ಕಲಿತೆ. ನಮ್ಮ
ವಿದ್ಯಾರ್ಥಿಗಳಂತೂ ಲೆಕ್ಕವಿಲ್ಲದಷ್ಟು ಅಮೂಲ್ಯ ಜೀವನ ಪಾಠಗಳನ್ನು ಕಲಿತರು. ನಿಜ ಹೇಳ್ಬೇಕು
ಅಂದ್ರೆ .....ಫಾರಿನ್ ಟ್ರಿಪ್ ಎನ್ನುತ್ತಾ ಅತ್ಯಂತ ಉತ್ಸಾಹದಿಂದ ಜರ್ಮನಿಗೆ ಹೋದ ನಾವು, “ಧೂಳು-ಅವ್ಯವಸ್ಥೆಯ
ನಡುವೆಯೂ ನಮ್ಮ ಭಾರತ ಎಷ್ಟು ಸುಂದರವಾಗಿದೆ !! ನಮ್ಮ ದೇಶ- ಸಂಸ್ಕೃತಿಯಲ್ಲಿ ಇನ್ನೂ ಕಲಿಯೋದು
ಎಷ್ಟಿದೆ ಅಲ್ವಾ!!” ಎನ್ನುತ್ತ ಮರಳಿದೆವು.
Thursday, 3 May 2018
ಹೌದು....!! ನಾನೊಂದು ಪುಸ್ತಕ ಪ್ರಕಟಿಸಿದ್ದೇನೆ.
ಹಳ್ಳಿಯ ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆದ ನನಗೆ ಚಿಕ್ಕಂದಿನಿಂದಲೂ ನಮ್ಮ ಆಚರಣೆಗಳ ವಿಚಾರದಲ್ಲಿ ನಾನಾ ಪ್ರಶ್ನೆಗಳು ಕಾಡುತ್ತಿದ್ದವು. ಇದಕ್ಕೆಲ್ಲ ಕಾರಣ ತಿಳ್ಕೋಬೇಕು ಅನ್ನೋ ಕುತೂಹಲ - ಕೆಲವನ್ನು ಧಿಕ್ಕರಿಸಬೇಕು ಅನ್ನೋ ರೋಷ ಕೂಡಾ ಸದಾ ಇರುತ್ತಿತ್ತು. ಮುಂದೆ ಬೆಳಿತಾ ಬಂದಂತೆ ಎಲ್ಲವನ್ನೂ ಸಮಭಾವದಲ್ಲಿ ಸ್ವಿಕರಿಸೋ ಪ್ರಬುದ್ಧತೆ ಬೆಳೆಯಿತು. ಹೀಗಿರ್ಬೇಕಾದ್ರೆ ಕಳೆದ ವರ್ಷ ಇದೇ ಸಮಯಕ್ಕೆ ಪತ್ರಕರ್ತ ಶ್ರೀ ಉದಯ್ ಲಾಲ್ ಪೈ ಅವರ “ Why Am I a Hindu “ ಎಂಬ ಪುಸ್ತಕ ಓದಿದೆ. ನಮ್ಮ ಸನಾತನ ಧರ್ಮದ ತಿರುಳನ್ನು ಎಷ್ಟು ಸೊಗಸಾಗಿ ಪೈ ಅವರು ವಿವರಿಸಿದ್ದಾರಲ್ಲ ಅಂತ ಖುಷಿ ಆಗಿ ಇಡೀ ಕೃತಿಯನ್ನು ನನ್ನ ಕನ್ನಡ ಭಾಷೆಗೆ ಅನುವಾದಿಸಿದೆ.
47 ಅಧ್ಯಾಯಗಳ ಈ ಪುಸ್ತಕ “ ನಾನೇಕೆ ಒಬ್ಬ ಹಿಂದೂ?” ಅನ್ನೋ ಹೆಸರಲ್ಲಿ ಈಗ ಪ್ರಕಟವಾಗಿದೆ. ಬಹುರೂಪಿ ದೇವರು- ದೇವಾಲಯಗಳು- ನಮ್ಮ ಅರ್ಥಪೂರ್ಣ ಸಂಪ್ರದಾಯಗಳು– ಗೋತ್ರ- ಜಾತಕ – ಮದುವೆ- ನೈವೇದ್ಯ – ಪ್ರಸಾದ – ಆತ್ಮ ಇತ್ಯಾದಿ ಅನೇಕ ವಿಷಯಗಳ ಬಗ್ಗೆ ವೈಚಾರಿಕ ವಿವರಣೆ ಇಲ್ಲಿ ನಿಮಗೆ ಸಿಗುತ್ತದೆ. ಪೈ ಮತ್ತು ಅವರ ಓದುಗರ-ಮಿತ್ರರ ನಡುವಣ ಸಂಭಾಷಣೆಯ ರೂಪದಲ್ಲಿರುವ ಬರಹಗಳನ್ನು ಕನ್ನಡತನದ ಸುಗಂಧದೊಂದಿಗೆ ಅನುವಾದಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ನಿಮ್ಮ ಪ್ರೋತ್ಸಾಹವನ್ನು ನಿರೀಕ್ಷಿಸುತ್ತಿದ್ದೇನೆ.
“ ಆಸಿಂಧು ಸಿಂಧು
ಪರ್ಯಂತಾ ತಸ್ಯ ಚ ಭಾರತ ಭೂಮಿಕಾ, ಮಾತೃಭೂ
ಪಿತೃಭೂಶ್ಚೈವ ಸ ವೈ ಹಿಂದುರಿತಿ ಸ್ಮೃತ:”. ಸಪ್ತ
ಸಿಂಧುಗಳು ಮತ್ತು ಹಿಂದೂ ಮಹಾಸಾಗರದ ನಡುವೆ
ಇರುವ ಭಾರತಭೂಮಿಯನ್ನು ತಂದೆ-ತಾಯ್ನೆಲ ಎಂದು ಯಾರು
ಭಾವಿಸಿದ್ದಾನೋ ಅವನೇ ಹಿಂದೂ. ‘ಹಿಂದೂ’ ಪ್ರಜ್ಞೆಯನ್ನು ಎಷ್ಟು ಸರಳವಾಗಿದೆ ವಿವರಿಸುತ್ತಿದೆ ನೋಡಿ ಈ
ಶ್ಲೋಕ.
... ಹಿಂದೂ ಅನ್ನೋದು ಒಂದು ಮಾನಸಿಕ ಸ್ಥಿತಿ- ಜೀವನ ಪದ್ಧತಿ- ಆತ್ಮಪ್ರಜ್ಞೆ-
ಸ್ವಾತಂತ್ರ್ಯ, ಆತ್ಮವಿಶ್ವಾಸ ... ಇನ್ನೂ
ಏನೇನೋ..
.ಯಾಕೆಂದರೆ ಹಿಂದೂಧರ್ಮದಲ್ಲಿ
ಯಾವುದೇ ನಿಯಮಗಳ ಹಂಗಿಲ್ಲ. ಅದು ಅನುಯಾಯಿಗಳ ಚಿಂತನೆಗಳನ್ನು
ಕಟ್ಟಿಹಾಕಿಲ್ಲ ಬದಲಾಗಿ ಸ್ವಯಂ
ಉತ್ತರಗಳನ್ನು ಹುಡುಕಲು ನಿರಂತರವಾಗಿ ಪ್ರೇರೇಪಿಸಿದೆ. ಒಂದುವೇಳೆ ಅವರು ಧರ್ಮದ
ಆಚರಣೆಗಳನ್ನು
ವಿರೋಧಿಸಿದರೂ ಯಾರೂ ಅವರನ್ನು ಧರ್ಮದಿಂದ ಕಿತ್ತುಹಾಕಲಾರರು. ತಮ್ಮ ಧರ್ಮದ ಬಗ್ಗೆ
ನಿರ್ಭೀತಿಯಿಂದ ಯೋಚಿಸುತ್ತಾ, ತಪ್ಪು ಅನಿಸಿದ್ದನ್ನು
ಪ್ರಶ್ನಿಸುತ್ತಾ ಬದುಕಬಹುದು. ಹಾಗೆ ನೋಡಿದರೆ ಹಿಂದೂಧರ್ಮ
ಮತ್ತು ಅದರ ಆಚರಣೆಗಳು ಯಾವೊಬ್ಬ
ವ್ಯಕ್ತಿಯಿಂದ ಆರಂಭವಾಗಿಲ್ಲ. ಇತರ ಧರ್ಮಗಳಂತೆ ಹಿಂದೂಗಳು
ದೇವಾಲಯಗಳ ನಿಯಂತ್ರಣದಲ್ಲಿ
ಬಾಳುತ್ತಿಲ್ಲ. ಇಲ್ಲಿ ಯಾರೂ ಶ್ರೇಷ್ಠರಲ್ಲ... ಕನಿಷ್ಠರೂ ಅಲ್ಲ .. ಹಿಂದೂಗಳು ಧರ್ಮದ
ಹುಳುಕುಗಳ
ಬಗ್ಗೆ ಕುರುಡಾಗಿದ್ದು , ಸದ್ವಿಚಾರಗಳನ್ನು ಮಾತ್ರ ಬಡಬಡಿಸುವ ಬದಲು , ನಾನೇಕೆ
ಒಬ್ಬ ಹಿಂದೂ ? ಎಂದು
ಪ್ರಶ್ನಿಸುವ-ಉತ್ತರ ಹುಡುಕುವ ಪ್ರಜ್ಞೆಯನ್ನು ಬೆಳೆಸಿಕೊಂಡಿದ್ದಾರೆ .
ಪ್ರತಿಯೊಂದು ಅಧ್ಯಾಯದಲ್ಲಿ ಒಂದು ವಿಚಾರದ ಬಗ್ಗೆ ಚರ್ಚಿಸಲಾಗಿದೆ. ದೇವರು ಇದ್ದಾನೆಯೇ? , ಪುರಾಣಗಳು ನಿಜವೇ?, ಹಿಂದೂ ಆಚರಣೆಗಳು ಪ್ರಶ್ನಾತೀತವೇ ?, ಹಣೆಬೊಟ್ಟು ಇಂದಿಗೆ ಪ್ರಸ್ತುತವೇ? , ಮನುಷ್ಯ ದೇವರಿಗಿಂತ ಬಲಶಾಲಿಯೇ? , ಮದುವೆಗೆ ಬೇಕೇ ಜಾತಕದ ಅಪ್ಪಣೆ? ಕಲ್ಲು ದೇವರಾಗಬಹುದು ಆದರೆ ದೇವರು ಕಲ್ಲಲ್ಲ , “ ಹಿಂದೂ” - ವಿದೇಶೀ ಶಬ್ದವೇ?, ನಿಮ್ಮ ಜಾತಿ ಯಾವುದು ಸ್ವಾಮೀ? , ಹಿಂದೂಧರ್ಮ ಪ್ರೇಮವಿವಾಹಕ್ಕೆ ವಿರೋಧಿಯೇ? , ಎಂಥ ಅದ್ಭುತ ನಮ್ಮ ದೇಗುಲ ! ಮುಂತಾದ ಲೇಖನಗಳು ಸನಾತನಧರ್ಮದ ಪರಿಚಯ ಮಾಡಿಕೊಡುತ್ತವೆ.
ಪುಸ್ತಕವನ್ನು ಕೊಂಡು ಓದಿ....ಕಾಣಿಕೆ ರೂಪದಲ್ಲಿ ಕೊಡಿ .... ನಾನೊಬ್ಬ ಹಿಂದೂ ಎಂದು ಹೆಮ್ಮೆಯಿಂದ ಹೇಳಿ ... ಆತ್ಮವಿಶ್ವಾಸದಿಂದ ಬದುಕಿ...
1. ಪುಸ್ತಕವನ್ನು Flip kart ಮತ್ತು Amazon ತಾಣಗಳಲ್ಲಿ ಕೆಳಗಿನ ಲಿಂಕ್ ನಲ್ಲಿ ಕೊಳ್ಳಬಹುದು .
https://www.flipkart.com/naaneke-obba-h…/p/itmf4ur5eacuhew2…
https://www.flipkart.com/naaneke-obba-h…/p/itmf4ur5eacuhew2…
2.ಪುಸ್ತಕ e - book ರೂಪದಲ್ಲಿ 100 ರೂಪಾಯಿಗಳಿಗೆ ಲಭ್ಯವಿದೆ. ಈ ಕೆಳಗಿನ ಲಿಂಕ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. https://pothi.com/…/ebook-veda-athavale-%E0%B2%A8%E0%B2%BE%…
3. ಪ್ರಕಾಶನ ಸಂಸ್ಥೆ ಪೋಥಿ.ಕಾಂ ನಲ್ಲಿ ಈ ಕೆಳಗಿನ ಲಿಂಕ್ ನಲ್ಲಿ ಪುಸ್ತಕ ಕೊಳ್ಳಬಹುದು
https://pothi.com/…/veda-athavale-%E0%B2%A8%E0%B2%BE%E0%B2%…
https://pothi.com/…/veda-athavale-%E0%B2%A8%E0%B2%BE%E0%B2%…
Monday, 19 March 2018
ARE YOU ALONE OR LONELY?
Have you
ever been alone at home? A few years back, the answer to this question was
“Never!” We Indians always preferred
joint families. Until recently our families included parents. So, people
staying alone was unheard of.
But alas!
long… long… ago Lord Shrikrishna has
made it very clear in Bhagavadgeeta that “change is the only permanent thing in
the world”. So, the wave of change hit the basic unit of the society. We
adopted ‘small’ families. No…no…sorry…let me use a technical word, we adopted
nuclear family system. Nowadays the answer for my question would be “Yes, often”
or “Yes, big deal !!?”
A decade
ago, spending days ALONE doing nothing or with a favourite book was one of my
most cherished dreams since my life was very hectic, as that of any working
woman. I worked at home as well as at school (you might complain what nonsense?
Women always work, you aren’t special). My day used to start at 4.30am--cooking,
going to school with my kids, cleaning, washing, parenting, guests, attending
husband and so on. As the years passed, my children flew away in the pursuit of
their career. As our new home was in the city’s outskirts, the number of guests
reduced too. So, whenever my husband went out of the city for days together on
duty, my dream came true. I was overwhelmed. Yeah…. I was ALONE!!
But the
freedom and the free time I had proved worthless. After reading two books I got
bored. Cooking? for whom? Too many questions filled my plate. As the night set,
I heard unpleasant sounds, and imagined shadows near the windows. Listening to
news stories of house robbery, murder of lone ladies frightened me. Life was
dull and boring. We humans are never happy with what we have. Soon I was
unhappy with my dream world. Now I wanted to return to my old hectic life
because I was LONELY not ALONE.
Yes, every
thing said and done, this is the reality. With the advent of globalisation, the
definition of the family has totally changed. Now we are left with only two
important questions to answer-- Are you alone? or Are you lonely? There is no
problem if you are alone. There are many around the globe. After all we are
born alone and die alone right? But never ever feel lonely. This can spoil your
health, wealth, and happiness. Yes… We need to declare a war against
loneliness.
This war
needs different kinds of weapons and strategies based on whether we live in a
city, a town, or a village; an independent house or an apartment. Also, on our
personality—introvert, extrovert, rigid or flexible.
In Agricultural homes there is always one or
the other work waiting. In big cities there are enough opportunities (baby
care, part time jobs, etc) to help earn money. Finally, the choice is ours.
These are
the few suggestions I would like to give. It is up to you to ponder upon these
‘Punch’s!
1. If you love to watch the television,
there are lots of good shows, movies, serials, and discussions available. However,
be careful of the content. Additionally, if you have internet facility I would
suggest that you see YouTube videos on various topics--on Indian culture, the Vedas,
the Upanishads, the Epics, music, language, and dance. There are talks by
scholars in local language and English on YouTube. Try to catch up with them. Social
media like Facebook opens the door to an amazing world full of friends. Again,
we must be careful about our selection.
2. If you love the company of children, then
tuition classes will keep you engaged. Children are bundles of hope and energy.
Teaching those angels will give you immense satisfaction. You can teach online
too (E-Vidyaloka is one example). There are many charity organisations who are
in search of volunteers. Start a search in your area. If you want to spend your
time outside the home you can join one. It will be a wonderful experience.
3. If you have space and can soil your
hands, plants are the best friends. Grow your vegetables at home garden or on
terrace. There is nothing compared to be with nature.
4. We have a rich tradition of Bhakti.
There are umpteen number of Vrata- and Upavasas practiced by our ancestors. If
you like them, engage yourself with them. Sing bhajans, chant mantras in the
morning and evenings. I don’t know whether it pleases God or not. But I am sure
it will soak you in joy. If possible, join the Bhajan groups in a nearby
temple. Participate in the community festivals and Jatres. Yogabhyasa is the
biggest asset we have. Try to learn, adopt and teach.
5. If you love reading, you are luckiest
person under the Sun. This is an easy and satisfying hobby. If available, become
a member of nearby library. Identify the people who love reading. You can
exchange books with them. If possible, get a kindle reader. You can enjoy
reading without worrying about storage space.
Along with
this, change your outlook towards life. Modern life has given us many good
facilities but a few challenges too. Stop comparing dead-gone old days with
present. Just move with the flow. Don’t worry much about the dying traditions
and modern clothing. Culture is like a river. Continuous movement is its very
basic nature. We must move with it retaining our level best.
Being alone
has made me strong. It opened up new avenues in front of me.
Trust me! Being Alone can be all about
Being Happy!
Subscribe to:
Posts (Atom)