‘ಮಕ್ಕಳ ದಿನಾಚರಣೆ’
ಮತ್ತೆ
ಪ್ರತಿವರ್ಷದಂತೆ ‘ಮಕ್ಕಳ ದಿನಾಚರಣೆ’ ಬರುತ್ತಿದೆ. ಅಂದು ‘ಮಕ್ಕಳೇ… ಕನಸು ಕಾಣಿ……’ ಎಂಬ ಸವಕಲು ವಾಕ್ಯದ ಘೋಷಣೆ ಆಗುತ್ತದೆ. ಹೆಚ್ಚಿನ ಮಕ್ಕಳಿಗೆ
ಸಿಹಿತಿಂಡಿ ಸಿಗುತ್ತದೆ. ಸರ್ಕಾರಿ ಶಾಲಾ
ಮಕ್ಕಳಿಗೆ ಬ್ಯಾಗು, ಸೈಕಲ್ಲು, ಪುಸ್ತಕ
ಹಾಗೂ ಸ್ವಲ್ಪ ಅನುಕಂಪ ಸಿಗುತ್ತದೆ. ಆದರೆ ಮರುದಿನದಿಂದ
ಮತ್ತೆ ಹಳೇರಾಗವೇ ಯಾಕೆಂದರೆ ಉನ್ನತ
ಶಿಕ್ಷಣ ಪಡೆದ , ಕೈತುಂಬಾ ಸಂಬಳ ಪಡೆಯುವ, ದೊ…….ಡ್ಡ ಕಾರಿನಲ್ಲಿ ಓಡಾಡುವ ಅವರ ತಂದೆ- ತಾಯಿಯರು-
೧. ಲಂಚ್ ಬಾಕ್ಸಿಗೆ ಒಂದು ಪಾಕೆಟ್ ಬಿಸ್ಕೆಟ್ಟು / ಒಣಗಿದ ಬ್ರೆಡ್ಡು / ಪ್ರಸಿದ್ಧ ಬೇಕರಿಯ ಹಳಸಿದ ಕೇಕು/ ೧೦೦೦ ರೂಪಾಯಿಯ
ನೋಟು ಇವುಗಳಲ್ಲೊಂದನ್ನು ಕಳುಹಿಸುತ್ತಾರೆ.
೨. ಮಕ್ಕಳಿಗೆ ಬೆಲೆಬಾಳುವ ಮೊಬೈಲ್ ಕೊಡಿಸುತ್ತಾರೆ ಹಾಗೂ ಅದರಲ್ಲಿ ಅಶ್ಲೀಲ ಚಿತ್ರ ನೋಡಿದ್ದಕ್ಕೆಂದು ಕ್ರಿಕೆಟ್ ಬ್ಯಾಟಿನಿಂದ ಹೊಡೆಯುತ್ತಾರೆ.
೩. ಮಕ್ಕಳನ್ನು ಕೆಲಸದವರ ಕೈಗೊಪ್ಪಿಸಿ ತಿಂಗಳಾನುಗಟ್ಟಲೆ ವಿದೇಶಕ್ಕೆ ಹೋಗುತ್ತಾರೆ.
೪. ಮಕ್ಕಳನ್ನು ವಯಸ್ಸಾದ ತಮ್ಮ ತಂದೆ- ತಾಯಂದಿರ ಬಳಿ
ಬಿಟ್ಟು ಶಾಲೆಗೆ ಪೇರೆಂಟ್ ಮೀಟಿಂಗಿಗೆ ಮಾತ್ರ ತಪ್ಪದೇ ಹಾಜರಾಗಿ ಕಡಿಮೆ ಅಂಕ ಕೊಟ್ಟಿದ್ದಕ್ಕೆ ಶಿಕ್ಷಕರನ್ನು ಗದರಿಸುತ್ತಾರೆ.
೫. ಸದಾಕಾಲ ಜಗಳವಾಡುತ್ತಾರೆ. ಮಕ್ಕಳಿಗೆ ರಾತ್ರಿ ಊಟವೂ ಕೊಡದೇ ಸತಾಯಿಸುತ್ತಾರೆ. ಕೊನೆಗೆ ಡೈವೋರ್ಸ್ ತೆಗೆದುಕೊಂಡು ಮಕ್ಕಳನ್ನು ಮಾನಸಿಕವಾಗಿ ಹಿಂಸಿಸುತ್ತಾರೆ ಸಾಮಾಜಿಕವಾಗಿ ಅಪಮಾನ ಮಾಡುತ್ತಾರೆ.
೬. ಸದಾ ಭವಿಷ್ಯದ ಬಗ್ಗೆಯೇ ಚಿಂತಿಸುತ್ತಾ ನೂರಾರು ಕೋಚಿಂಗ್ ಕ್ಲಾಸುಗಳಿಗೆ ಮಕ್ಕಳನ್ನು ತಳ್ಳಿ ತಾವು ಹೆಮ್ಮೆಪಡುತ್ತಾರೆ.
೭. ಮಗುವನ್ನು ಒಂದು ಕ್ಷಣವೂ ಬಿಟ್ಟಿರದೇ ಅದರ ಮಾತು, ನಗು, ಉಚ್ಚೆ- ಹೇಲು, ಆಟ,
ಪಾಠ ಕೊನೆಗೆ ಯೋಚನೆ, ಭಾವನೆ ಅಷ್ಟೇ
ಏಕೆ ಉಸಿರನ್ನೂ ನಿಯಂತ್ರಿಸುತ್ತಾರೆ. ತಾವು ಆದರ್ಶ ಪಾಲಕರೆಂದು ಬೀಗುತ್ತಾರೆ.
ಹೌದು…… ಇದ್ಯಾವುದೂ ಕಲ್ಪನೆಯಲ್ಲ. ಎಲ್ಲವೂ
ಅಕ್ಷರಶ: ನಿಜ.
ನಮ್ಮ [ ಮುಖ್ಯವಾಗಿ ನಗರದ] ಮಕ್ಕಳು
೧. ಶಾಲೆಯಿಂದ ಮನೆಗೆ ಬಂದಾಗ ಬೀಗ ಅಥವಾ ಕೆಲಸದಾಕೆಯ ಸ್ವಾಗತ ಸಿಗುತ್ತದೆ.
೨. ಸಾವಿರಾರು ಆಕರ್ಷಣೆಗಳ ನಡುವೆ ಸಿಲುಕಿ ಸರಿ ತಪ್ಪುಗಳು ತಿಳಿಯದೇ ಒದ್ದಾಡುತ್ತಿದ್ದಾರೆ.
೩. ಅವರ ಉತ್ತಮ ಭವಿಷ್ಯಕ್ಕಾಗಿ ವರ್ತಮಾನದ ಖುಷಿಯ ಕ್ಷಣಗಳನ್ನು ಕೋಚಿಂಗ್ ಕ್ಲಾಸ್ ಗಳಲ್ಲಿ ಕಳೆಯುತ್ತಿದ್ದಾರೆ.
೪. ಸದಾಕಾಲ ಗುಡ್ ಟಚ್- ಬಾಡ್ ಟಚ್ ನ್ನು ನೆನೆಪಿಟ್ಟುಕೊಳ್ಳಬೇಕು, ಯಾರನ್ನೂ ನಂಬಬಾರದು.
೪. ಮನೆಯಲ್ಲಿ ನಿದ್ದೆ ಮಾಡಲು ಪಾಲಕರು ಬಿಡುವುದಿಲ್ಲ. ಕ್ಲಾಸಿನಲ್ಲಿ ನಿದ್ದೆ ಮಾಡಲು ಟೀಚರ್ ಬಿಡುವುದಿಲ್ಲ.
ಮಿತ್ರರೇ! ಇನ್ನು ಮುಂದೆ ‘ ಈಗಿನ ಮಕ್ಕಳೇ ಸರಿ ಇಲ್ಲಪ್ಪಾ…… ನಾವೆಲ್ಲಾ ಚಿಕ್ಕವರಿರುವಾಗ ಹೀಗಿರಲಿಲ್ಲ……….’ ಎಂಬ ಉದ್ಗಾರ ತೆಗೆಯುವ ಮೊದಲು ಒಂದು ಕ್ಷಣ ಯೋಚಿಸಿ.
ನಾಡಿನ
ಎಲ್ಲ
ಚಿಣ್ಣರಿಗೂ
ಮಕ್ಕಳ
ದಿನಾಚರಣೆಯ
ಹಾರ್ದಿಕ
ಶುಭಾಶಯಗಳು.
No comments:
Post a Comment